ಪವಾಡ ಸೃಷ್ಟಿಸಿದ ಮಘಾ ನಕ್ಷತ್ರದಲ್ಲಿನ ಸೂರ್ಯ+ಬುಧ+ಕೇತು ಸಂಯೋಗ; 3 ರಾಶಿಗೆ ಕಾರ್, ಮನೆ
ಸೂರ್ಯ, ಬುಧ ಮತ್ತು ಕೇತು ಮಘಾ ನಕ್ಷತ್ರದಲ್ಲಿ ಸಂಯೋಗಗೊಂಡಿದ್ದು, ಈ ವಿಶೇಷ ಸ್ಥಿತಿಯು ಆಗಸ್ಟ್ 31ರವರೆಗೆ ಇರಲಿದೆ. ಈ ತ್ರಿಗ್ರಹ ಯೋಗದಿಂದಾಗಿ, 12 ರಾಶಿಗಳ ಪೈಕಿ ಮೂರು ರಾಶಿಯವರಿಗೆ ಉದ್ಯೋಗ, ಕುಟುಂಬ ಮತ್ತು ಆರ್ಥಿಕ ವಿಷಯಗಳಲ್ಲಿ ಗಮನಾರ್ಹ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿವೆ.
15

Image Credit : Gemini
ಮಘಾ ನಕ್ಷತ್ರ
ಸದ್ಯ ಸೂರ್ಯ ಮತ್ತು ಬುಧ ಇಬ್ಬರು ಮಘಾ ನಕ್ಷತ್ರದಲ್ಲಿದ್ದಾರೆ. ಕಾಕತಾಳೀಯ ಎಂಬಂತೆ ಕೇತು ಸಹ ಇದೇ ನಕ್ಷತ್ರದಲ್ಲಿರೋದರಿಂದ ಗಮನಾರ್ಹವಾದ ಸಂಯೋಗ ರಚನೆಯಾಗುತ್ತಿದೆ. ಈ ವಿಶೇಷ ಸಂಯೋಗ ಆಗಸ್ಟ್ 31ರವರೆಗೆ ಇರಲಿದ್ದು, ನಂತರ ಸೂರ್ಯ ಮತ್ತೊಂದು ನಕ್ಷತ್ರಕ್ಕೆ ಚಲನೆ ಮಾಡಲಿದ್ದಾನೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
25
Image Credit : Gemini
ಸೂರ್ಯ, ಬುಧ ಮತ್ತು ಕೇತು
ಸೂರ್ಯ, ಬುಧ ಮತ್ತು ಕೇತು ಒಂದೇ ನಕ್ಷತ್ರದಲ್ಲಿರುವ ಈ ಪರಿಸ್ಥಿತಿಯು ಎಲ್ಲಾ 12 ರಾಶಿಚಕ್ರದವರಿಗೆ ವಿಭಿನ್ನ ಸೂಚನೆಗಳನ್ನು ನೀಡುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. 12ರ ಪೈಕಿ ಮೂರು ರಾಶಿಗಳ ಜೀವನದಲ್ಲಿ ಬಹಳ ವಿಶೇಷ ಯೋಗವನ್ನು ಸೃಷ್ಟಿಸುತ್ತದೆ. ಉದ್ಯೋಗ, ಕೌಟುಂಬಿಕ ಜೀವನ, ಪರೀಕ್ಷೆ ಸೇರಿದಂತೆ ಹಲವು ವಿಷಯಗಳಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಕಾಣಬಹುದಾಗಿದೆ. ಆ ಮೂರು ರಾಶಿಗಳು ಯಾವವು ಎಂದು ನೋಡೋಣ ಬನ್ನಿ.
35
Image Credit : OTHERS
ಕರ್ಕಾಟಕ ರಾಶಿ
- ಸರ್ಕಾರಿ ಕ್ಷೇತ್ರಗಳಲ್ಲಿನ ಸಿಲುಕಿಕೊಂಡ ಕೆಲಸಗಳು ಪೂರ್ಣವಾಗುತ್ತವೆ
- ಕುಟುಂಬದಲ್ಲಿ ಸಂತೋಷದ ವಾತಾವರಣ ನಿರ್ಮಣ
- ಕಾರ್, ಚಿನ್ನ, ಮನೆ ಸೇರಿದಂತೆ ಐಷಾರಾಮಿ ಸೌಲಭ್ಯಗಳು ನಿಮ್ಮದಾಗುವ ಸಾಧ್ಯತೆ
- ಕಠಿಣ ಪರಿಶ್ರಮಕ್ಕೆ ಸಕಾರಾತ್ಮಕ ಫಲಿತಾಂಶ ಲಭ್ಯ
- ಹೊಸ ಕೆಲಸಗಳಿಗೆ ಚಾಲನೆ, ಉದ್ಯೋಗ ಸ್ಥಳದಲ್ಲಿ ಹೆಚ್ಚುವರಿ ಜವಾಬ್ದಾರಿ ಜೊತೆ ಪ್ರಗತಿ
45
Image Credit : OTHERS
ತುಲಾ ರಾಶಿ
- ಹೊಸ ಉದ್ಯೋಗವಕಾಶಗಳು ನಿಮ್ಮನ್ನು ಹುಡುಕಿ ಬರಲಿವೆ
- ವೃತ್ತಿಯಲ್ಲಿ ಸಂಬಳ ಏರಿಕೆ, ಬಡ್ತಿ ಸೇರಿದಂತೆ ಉನ್ನತವಾದ ಪ್ರಗತಿ
- ಹೂಡಿಕೆ ಯೋಜನೆಗಳಿಂದ ಉತ್ತಮ ಲಾಭ, ಹೊಸ ಒಪ್ಪಂದಗಳಿಂದ ಆರ್ಥಿಕವಾಗಿ ಸದೃಢತೆ
- ನಷ್ಟದಲ್ಲಿರುವ ವ್ಯವಹಾರಗಳಲ್ಲಿ ಚೇತರಿಕೆ, ಆದಾಯ ಹೆಚ್ಚಳ
- ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆ
55
Image Credit : SOCIAL MEDIA
ಮಕರ ರಾಶಿ
- ಹೂಡಿಕೆಯ ಪ್ರಯತ್ನಗಳಲ್ಲಿ ಸಕಾರಾತ್ಮಕ ಫಲಿತಾಂಶ
- ವೃತ್ತಿ ಸಂಬಂಧಿತ ವಿಷಯಗಳಲ್ಲಿ ಪ್ರಗತಿಗೆ ಹೊಸ ಅವಕಾಶ
- ಆದಾಯ ಹೆಚ್ಚಳದಿಂದ ಆರ್ಥಿಕ ಭದ್ರತೆ
- ಕಠಿಣ ಪರಿಶ್ರಮಕ್ಕೆ ಸಿಗಲಿದೆ ಅಪಾರ ಪ್ರಶಂಸೆ, ಹೆಚ್ಚಿನ ಜವಾಬ್ದಾರಿಗಳು ಸಿಗಲಿವೆ
- ಬಾಕಿ ಉಳಿದಿರುವ ಕೆಲಸಗಳು ಸಹ ಪೂರ್ಣಗೊಳ್ಳುವ ಸಾಧ್ಯತೆ
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
Latest Videos

