2025ರ IMDbಯ ಟಾಪ್ 10 ಜನಪ್ರಿಯ ಚಿತ್ರಗಳ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ಪರಿಮಳ
ಚಲನಚಿತ್ರಗಳನ್ನು ರೇಟಿಂಗ್ ಮಾಡುವ ವೆಬ್‌ಸೈಟ್ ಐಎಂಡಿಬಿ, 2025 ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಜನಪ್ರಿಯ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟಾಪ್ 10ರಲ್ಲಿ ಕನ್ನಡದ ಪರಿಮಳವಿದೆ.

ಐಎಂಡಿಬಿ
ಚಲನಚಿತ್ರಗಳನ್ನು ರೇಟಿಂಗ್ ಮಾಡುವ ವೆಬ್‌ಸೈಟ್ ಐಎಂಡಿಬಿ, 2025 ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಜನಪ್ರಿಯ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟಾಪ್ 10ರಲ್ಲಿ ಕನ್ನಡದ ಪರಿಮಳವಿದೆ.
ಭಾರತದ ಟಾಪ್ 10 ಸಿನಿಮಾಗಳು
ಐಎಂಡಿಬಿ ಈ ವರ್ಷದ ಭಾರತದ ಟಾಪ್ 10 ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೋಹಿತ್ ಸೂರಿ ನಿರ್ದೇಶನದ, ಅಹಾನ್ ಪಾಂಡೆ ನಟನೆಯ 'ಸೈಯಾರಾ' ಮೊದಲ ಸ್ಥಾನದಲ್ಲಿದೆ. ಬಾಲಿವುಡ್‌ನ ಸೈಯಾರಾ ಸಿನಿಮಾ ವಿಶ್ವಾದ್ಯಂತ ₹569.75 ಕೋಟಿ ಗಳಿಸಿದೆ ಎಂದು ವರದಿಯಾ
ಹೊಂಬಾಳೆ ಸಂಸ್ಥೆ
ಹೊಂಬಾಳೆ ಸಂಸ್ಥೆ ನಿರ್ಮಾಣದ 'ಮಹಾವತಾರ್ ನರಸಿಂಹ' ಎರಡನೇ ಸ್ಥಾನದಲ್ಲಿದೆ. 'ಛಾವಾ' ಮತ್ತು 'ಕಾಂತಾರ ಚಾಪ್ಟರ್ 1' ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ರಜನಿಕಾಂತ್ ಅವರ 'ಕೂಲಿ' ಐದನೇ ಸ್ಥಾನ ಮತ್ತು ಪ್ರದೀಪ್ ರಂಗನಾಥನ್ ಅವರ 'ಡ್ರ್ಯಾಗನ್' ಆರನೇ ಸ್ಥಾನದಲ್ಲಿದೆ.
ಅಮೀರ್ ಖಾನ್
ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಅವರ 'ಸಿತಾರೆ ಜಮೀನ್ ಪರ್', ಶಾಹಿದ್ ಕಪೂರ್ ಮತ್ತು ಪೂಜಾ ಹೆಗ್ಡೆಯ 'ದೇವಾ' ಮತ್ತು ಅಜಯ್ ದೇವಗನ್ ಅವರ 'ರೈಡ್ 2' ಕ್ರಮವಾಗಿ 7, 8 ಮತ್ತು 9ನೇ ಸ್ಥಾನದಲ್ಲಿವೆ. ಮಲಯಾಳಂ ಚಿತ್ರ 'ಲೋಕಾ ಚಾಪ್ಟರ್ 1' ಹತ್ತನೇ ಸ್ಥಾನದಲ್ಲಿದೆ.
ಕನ್ನಡ ಕಲಾವಿದರು
ಛಾವಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ರೆ, ಕುಡ್ಲದ ಚೆಲುವೆ ಪೂಜಾ ಹೆಗ್ಡೆ ನಟನೆಯ ದೇವಾ ಸೇರಿದೆ. ಇನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರವನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಇನ್ನು ರಜಿನಿಕಾಂತ್ ಅವರ ಕೂಲಿ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಚಂದನವನದ ಬುಲ್ ಬುಲ್ ರಚಿತಾ ರಾಮ್ ನಟಿಸಿದ್ದಾರೆ.
ಇದನ್ನೂ ಓದಿ: ದಕ್ಷಿಣ ಭಾರತದ ಕಲೆಕ್ಷನ್ ಕಿಂಗ್ ಯಾರು? 2025ರ ಬಾಕ್ಸ್ ಆಫೀಸ್ ಶೇಕ್ ಮಾಡಿದ ಟಾಪ್ 10 ಸಿನಿಮಾ
ಭಾರತದ ಟಾಪ್ 10 ಸಿನಿಮಾಗಳು
1. ಸೈಯಾರಾ
2. ಮಹಾವತಾರ್ ನರಸಿಂಹ
3. ಛಾವಾ
4. ಕಾಂತಾರ ಚಾಪ್ಟರ್ 1: ಎ ಲೆಜೆಂಡ್
5. ಕೂಲಿ
6. ಡ್ರ್ಯಾಗನ್
7. ಸಿತಾರೆ ಜಮೀನ್ ಪರ್
8. ದೇವಾ
9. ರೈಡ್ 2
10. ಲೋಕಾ ಚಾಪ್ಟರ್ 1
ಇದನ್ನೂ ಓದಿ: Year 2025: ವಿದೇಶದಲ್ಲಿ ಬಾಲಿವುಡ್‌ಗೆ ಮಣ್ಣು ಮುಕ್ಕಿಸಿದ ಏಳು ಸೌಥ್ ಸಿನಿಮಾಗಳು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

