ರಾಜ್ಯದ ಗಡಿ ಅತ್ತಿಬೆಲೆಯಲ್ಲಿ 'ಡೆವಿಲ್' ದರ್ಬಾರ್ ಜೋರಾಗಿದೆ. ದರ್ಶನ್ ಫ್ಯಾನ್ಸ್ ಅತ್ತಿಬೆಲೆ ಸರ್ಕಲ್‌ನಲ್ಲಿ ದಾಸನ 52 ಅಡಿ ಎತ್ತರದ ಕಟೌಟ್ ನಿರ್ಮಿಸಿ ಡೆವಿಲ್‌ಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ.
sandalwood Dec 11 2025
Author: Shriram Bhat Image Credits:Instagram
Kannada
ಟಿಕೆಟ್‌ಗಳು ಸೋಲ್ಡ್ ಔಟ್
ಅತ್ತಿಬೆಲೆ ಗೌರಿಶಂಕರ ಚಿತ್ರಮಂದಿರದಲ್ಲಿ 6:30ಕ್ಕೆ ಡೆವಿಲ್ ಶೋ ಶುರುವಾಗಿದ್ದು, ಈಗಾಗಲೇ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ದರ್ಶನ್ ಅಭಿಮಾನಿಗಳು ಥಿಯೇಟರ್ ಮುಂದೆ ಕಿಕ್ಕಿರಿದು ತುಂಬಿದ್ದಾರೆ.
Image credits: Instagram
Kannada
ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳ ವಿತರಣೆ
'ದಿ ಡೆವಿಲ್' ಸಂಭ್ರಮದ ನಡುವೆ ದರ್ಶನ್ ಅಭಿಮಾನಿಗಳು ಜನಸೇವೆ ಮಾಡಲು ಮುಂದಾಗಿದ್ದಾರೆ. ತಾಲ್ಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳ ವಿತರಣೆ ಮಾಡಿದ್ದಾರೆ.
Image credits: Instagram
Kannada
ದಿನಸಿ ಕಿಟ್ ವಿತರಣೆ
ಸಾಲು ಮರದ ತಿಮ್ಮಕ್ಕ ನೆನಪಿನಲ್ಲಿ 2 ಸಾವಿರ ಗಿಡ ನೆಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮಂಗಳಮುಖಿಯವರಿಗೆ ಸೀರೆ ಮತ್ತು ದಿನಸಿ ಕಿಟ್ ವಿತರಣೆ ಮಾಡುತ್ತಿದ್ದು, ನಾಟಿ ಕೋಳಿ ಬಿರಿಯಾನಿ ಊಟ ವಿತರಣೆಗೆ ಸಿದ್ದತೆ ಮಾಡಿದ್ದಾರೆ.
Image credits: Instagram
Kannada
ದರ್ಶನ ಪೋಟೋಗೆ ಆರತಿ
ಡೆವಿಲ್ ಸಿನಿಮಾ ಅದ್ದೂರಿ ಪ್ರದರ್ಶನವಾಗುತ್ತಿದ್ದು, ಅಭಿಮಾನಿಗಳು ಕೈಯಲ್ಲಿ ಕರ್ಪೂರ ಹಚ್ಚಿ ದರ್ಶನ ಪೋಟೋಗೆ ಆರತಿ ಬೆಳಗಿಸಿದ್ದಾರೆ. ಜೊತೆಗೆ, ದರ್ಶನ ಪೋಟೋಗೆ ಹಾಲಿನ ಅಭಿಷೇಕ, ಹೂಗಳನ್ನು ಹಾಕಿ ಸಂಭ್ರಮಪಟ್ಟಿದ್ದಾರೆ.
Image credits: Instagram
Kannada
ದರ್ಶನ್ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ
ಒಟ್ಟಿನಲ್ಲಿ, ದರ್ಶನ್ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ.. ನಟ ದರ್ಶನ್ ಜೈಲಿನಲ್ಲಿ ಇದ್ದರೂ ಅಭಿಮಾನಿಗಳು ಅವರ ನಟನೆಯ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ.