2025 ರಲ್ಲಿ, ದಕ್ಷಿಣ ಭಾರತದ ಸಿನಿಮಾಗಳು ವಿದೇಶಿ ಗಲ್ಲಾಪೆಟ್ಟಿಗೆಯಲ್ಲಿ ಬಾಲಿವುಡ್ ಅನ್ನು ಮೀರಿಸಿವೆ. ಪ್ಯಾನ್ ಇಂಡಿಯಾ ಸಿನಿಮಾಗಳ ಜಾಗತಿಕ ಯಶಸ್ಸನ್ನು ಸಾಬೀತುಪಡಿಸಿವೆ. ವಿದೇಶದಲ್ಲಿ ಅತಿ ಹೆಚ್ಚು ಗಳಿಸಿದ ಟಾಪ್ 10 ಚಿತ್ರಗಳಲ್ಲಿ ಸೌಥ್ ಸಿನಿಮಾಗಳೇ ಪಾರಮ್ಯ ಮೆರೆದಿವೆ.
ಬೆಂಗಳೂರು: ಈ ಬಾರಿ ವಿದೇಶದಲ್ಲಿ ಭಾರತದ ಹಲವು ಸಿನಿಮಾಗಳು ಬಿಡುಗಡೆಯಾಗಿವೆ. ಹಾಗೆಯೇ ವಿದೇಶಿ ಬಾಕ್ಸ್ ಆಫಿಸ್‌ನಲ್ಲಿ ನೂರಾರು ಕೋಟಿ ಹಣವನ್ನು ಕಲೆಕ್ಷನ್ ಮಾಡಿವೆ. 2025ರಲ್ಲಿ ಬಾಲಿವುಡ್‌ಗಿಂತ ಸೌಥ್ ಸಿನಿಮಾಗಳೇ ಉತ್ತಮ ಪ್ರದರ್ಶನ ಕಂಡಿದ್ದು ದಾಖಲೆ ಬರೆದಿವೆ. 2025 ರಲ್ಲಿ, ದಕ್ಷಿಣ ಭಾರತದ ಸಿನಿಮಾಗಳು ವಿದೇಶಿ ಗಲ್ಲಾಪೆಟ್ಟಿಗೆಯಲ್ಲಿ ಬಾಲಿವುಡ್ ಅನ್ನು ಮೀರಿಸಿವೆ. ಪ್ಯಾನ್ ಇಂಡಿಯಾ ಕಲ್ಪನೆಯಲ್ಲಿ ಬಿಡುಗಡೆಗೊಳ್ಳುತ್ತಿರುವ ದಕ್ಷಿಣ ಭಾರತ ಸಿನಿಮಾಗಳು ಪ್ರಪಂಚದ ಎಲ್ಲಾ ವರ್ಗದವರನ್ನು ತಲುಪುತ್ತಿವೆ. ಟಾಪ್ 10ರಲ್ಲಿ ಬಾಲಿವುಡ್ ಅಂಗಳದ ಮೂರು ಸಿನಿಮಾಗಳು ಮಾತ್ರ ಸ್ಥಾನ ಪಡೆದುಕೊಂಡಿವೆ. ಹೊಸತನದೊಂದಿಗೆ ಬಂದ ಸೀಕ್ವೆಲ್ ಸಿನಿಮಾಗಳನ್ನು ಸಹ ಜನರು ಒಪ್ಪಿಕೊಂಡಿದ್ದಾರೆ.
ಸ್ಟಾರ್ ನಟರ ಸಿನಿಮಾ ಮತ್ತು ಕಲೆಕ್ಷನ್
ಸೌಥ್ ಇಂಡಿಯನ್ ಫಿಲಂಗಳ ಪೈಕಿ ತಮಿಳು ಮತ್ತು ಮಲಯಾಳಂ ಸಿನಿಮಾಗಳು ಟಾಪ್‌ನಲ್ಲಿವೆ. ಪ್ಯಾನ್ ಇಂಡಿಯಾ ಸಿನಿಮಾಗಳ ಜಾಗತಿಕ ಯಶಸ್ಸನ್ನು ಸಾಬೀತುಪಡಿಸಿವೆ. ವಿದೇಶದಲ್ಲಿ ಅತಿ ಹೆಚ್ಚು ಗಳಿಸಿದ ಟಾಪ್ 10 ಚಿತ್ರಗಳಲ್ಲಿ ಸೌಥ್ ಸಿನಿಮಾಗಳೇ ಪಾರಮ್ಯ ಮೆರೆದಿವೆ.
ನಂಬರ್ ಒನ್ ಸ್ಥಾನದಲ್ಲಿ ಕೂಲಿ ಸಿನಿಮಾ
ತಮಿಳಿನ ಕೂಲಿ ಸಿನಿಮಾ ಮೊದಲ ಸ್ಥಾನದಲ್ಲಿದ್ದು, ವಿದೇಶದಲ್ಲಿ 180 ಕೋಟಿಗೂ ಅಧಿಕ ಹಣ ಗಳಿಸಿದೆ. ಆಗಸ್ಟ್ 2025ರಲ್ಲಿ ಬಿಡುಗಡೆಯಾದ ಕೂಲಿ ಚಿತ್ರದಲ್ಲಿ ರಜಿನಿಕಾಂತ್ ಸೇರಿದಂತೆ ಸ್ಟಾರ್ ನಟರು ನಟಿಸಿದ್ದರು. ಇಡೀ ವಿಶ್ವದಾದ್ಯಂತ 500 ಕೋಟಿಗೂ ಅಧಿಕ ಹಣವನ್ನು ಕೂಲಿ ಕಲೆಕ್ಷನ್ ಮಾಡಿದೆ.
ಟಾಪ್ 10 ಭಾರತೀಯ ಸಿನಿಮಾಗಳು
ವಿದೇಶಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ಭಾರತೀಯ ಚಿತ್ರಗಳಲ್ಲಿ ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಸಿನಿಮಾ ಸಹ ಸೇರಿವೆ. ಚಿತ್ರದ ಪ್ರಚಾರ, ಸ್ಟಾರ್ ಕಲಾವಿದರ ನಟನೆ, ಹಾಡುಗಳು, ಭಾಷೆಯ ಪ್ರೇಮ, ಫ್ರಾಂಚೈಸಿ ಸೇರಿದಂತೆ ಹಲವು ಕಾರಣಗಳು ಈ ಸಿನಿಮಾಗಳ ಯುಶಸ್ವಿಗೆ ಕಾರಣವಾಗಿವೆ. ಇಂದು ಪ್ರಾದೇಶಿಕ ಸಿನಿಮಾಗಳು ಭಾಷೆ ಗಡಿಯನ್ನು ದಾಟಿ ವಿದೇಶದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರೋದು ಗಮನಾರ್ಹವಾಗಿದೆ.
ಕನ್ನಡದ ರಿಷಬ್ ಶೆಟ್ಟಿ ನಿರ್ದೇಶಿಸಿ ನಟನೆ ಮಾಡಿರುವ ಕಾಂತಾರಾ ಚಾಪ್ಟರ್ ಒನ್ ಸಹ ಇಡೀ ದೇಶ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡುವಲ್ಲಿ ಯಶಸ್ಸಿಯಾಗಿದೆ. ಹೊಂಬಾಳೆ ಫಿಲಂಸ್ ಕಾಂತಾರಾ ಸಿನಿಮಾವನ್ನು ನಿರ್ಮಾಣ ಮಾಡಿತ್ತು. 2ನೇ ಅಕ್ಟೋಬರ್ 2025ರಂದು ಕಾಂತಾರ ಸಿನಿಮಾ ಬಿಡುಗಡೆಯಾಗಿತ್ತು.
ಇದನ್ನೂ ಓದಿ: 2025ರಲ್ಲಿ ಕಿರುತೆರೆಯಿಂದ ದೂರ ಸರಿದ ನಟಿಯರು: ಈಗ ಮಾಡ್ತಿರೋದು ಏನು?
ಇದನ್ನೂ ಓದಿ: ದಕ್ಷಿಣ ಭಾರತದ ಕಲೆಕ್ಷನ್ ಕಿಂಗ್ ಯಾರು? 2025ರ ಬಾಕ್ಸ್ ಆಫೀಸ್ ಶೇಕ್ ಮಾಡಿದ ಟಾಪ್ 10 ಸಿನಿಮಾ
ವಿದೇಶದಲ್ಲಿ ಅತಿ ಹೆಚ್ಚು ಗಳಿಸಿದ ಟಾಪ್ 10 ಸಿನಿಮಾಗಳ ಪಟ್ಟಿ
| ಸಿನಿಮಾ ಹೆಸರು | ಭಾಷೆ | ಬಾಕ್ಸ್ ಆಫಿಸ್ ಕಲೆಕ್ಷನ್ |
| ಕೂಲಿ | ತಮಿಳು | 180.55 ಕೋಟಿ ರೂಪಾಯಿ |
| ಸೈಯರಾ | ಹಿಂದಿ | 171.50 ಕೋಟಿ ರೂಪಾಯಿ |
| ಎಲ್:2 ಎಂಪುರಾನ | ಮಲಯಾಳಂ | 142.25 ಕೋಟಿ ರೂಪಾಯಿ |
| ಲೋಕಾ: ಚಾಪ್ಟರ್ 1 | ಮಲಯಾಳಂ | 119.90 ಕೋಟಿ ರೂಪಾಯಿ |
| ಕಾಂತಾರಾ ಚಾಪ್ಟರ್ 1 | ಕನ್ನಡ | 111 ಕೋಟಿ ರೂಪಾಯಿ |
| ಥುಡರಮ್ | ಮಲಯಾಳಂ | 93.80 ಕೋಟಿ ರೂಪಾಯಿ |
| ಛಾವಾ | ಹಿಂದಿ | 91.00 ಕೋಟಿ ರೂಪಾಯಿ |
| ವಾರ್ 2 | ಹಿಂದಿ | 81.75 ಕೋಟಿ ರೂಪಾಯಿ |
| ಹೌಸ್ ಫುಲ್ 5 | ಹಿಂದಿ | 70.25 ಕೋಟಿ ರೂಪಾಯಿ |
| ಗುಡ್ ಬ್ಯಾಡ್ ಅಗ್ಲಿ | ತಮಿಳು | 67.50 ಕೋಟಿ ರೂಪಾಯಿ |


