The Devil Movie: ನಟ ದರ್ಶನ್ ತೂಗುದೀಪ, ರಚನಾ ರೈ ಅಭಿನಯದ ‘ದಿ ಡೆವಿಲ್’ ಸಿನಿಮಾ ರಿಲೀಸ್‌ ಆಗಿದೆ. ಅನೇಕರು ಸೋಶಿಯಲ್‌ ಮೀಡಿಯಾದಲ್ಲಿ ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಸಿನಿಮಾ ತಂಡ ಹೊಸ ಕ್ರಮ ಕೈಗೊಂಡಿದೆ.

ನಟ ದರ್ಶನ್ ತೂಗುದೀಪ ಅಭಿನಯದ ‘ದಿ ಡೆವಿಲ್’ ಸಿನಿಮಾ ಅದ್ದೂರಿಯಾಗಿ ರಿಲೀಸ್‌ ಆಗಿದೆ. ದರ್ಶನ್‌ ಅನುಪಸ್ಥಿತಿಯಲ್ಲಿ ಈ ಸಿನಿಮಾ ರಿಲೀಸ್‌ ಆಗಿದೆ, ಹಾಗೆಯೇ ಫಸ್ಟ್‌ ಶೋಗೆ ದೊಡ್ಡ ಮಟ್ಟದಲ್ಲಿ ಜನರು ಬಂದು ಸಿನಿಮಾ ನೋಡಿದ್ದು, ಅರ್ಧ ಸಿನಿಮಾ ಗೆದ್ದಂತೆ.

ದುಬಾರಿಯಾದ ಟಿಕೆಟ್‌ ದರ

ಬೆಂಗಳೂರಿನಲ್ಲಂತೂ ದರ್ಶನ್‌ ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ಕಳೆದ ರಾತ್ರಿಯೇ ಥಿಯೇಟರ್‌ಗಳೆಲ್ಲವೂ ಸಿಂಗಾರಗೊಂಡಿದೆ. ಬೆಳ್ಳಂಬೆಳಗ್ಗೆ 6 ಗಂಟೆಗೆ ಫ್ಯಾನ್ಸ್‌ ಶೋ ಶುರುವಾಗಿದೆ. ಎಲ್ಲಿ ನೋಡಿದರೂ ದರ್ಶನ್‌ ಕಟೌಟ್‌ಗಳು, ಹಾರಗಳು. ಅಂದಹಾಗೆ ದರ್ಶನ್‌ ಸಿನಿಮಾವನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ದರ್ಶನ್‌ ಸಿನಿಮಾವನ್ನು ನೋಡಿದ ಬಹುತೇಕರು ಸಿನಿಮಾ ಸಖತ್‌ ಆಗಿದೆ, ಡಬಲ್‌ ಆಕ್ಟಿಂಗ್‌ ಚೆನ್ನಾಗಿದೆ ಎಂದು ಹಾಡಿ ಹೊಗಳಿದ್ದಾರೆ.

ಮಲ್ಟಿಫ್ಲೆಕ್ಸ್‌ಗಳಲ್ಲಿ ದಿನಕ್ಕೆ 15-30 ಶೋಗಳನ್ನು ಇಡಲಾಗಿದೆ. ಇನ್ನು ಇದರ ರೇಟ್‌ ಕೂಡ ಹೆಚ್ಚಾಗಿದೆ. 900 ರೂಪಾಯಿಯಿಂದ ಟಿಕೆಟ್ ದರ ಶುರುವಾಗುವುದು. ಹೀಗಾಗಿ ಸಾಮಾನ್ಯ ಜನರು ಮಲ್ಟಿಫ್ಲೆಕ್ಸ್‌ಗೆ ಬಂದು ಸಿನಿಮಾ ನೋಡೋದು ಕಷ್ಟ, ಇದರ ಜೊತೆಗೆ ಮಾಲ್‌ಗಳ ಪಾರ್ಕಿಂ ಫೀ ಹೆಚ್ಚಿರುವುದು.

ರಿವ್ಯೂ ಮಾಡೋ ಹಾಗಿಲ್ಲ

ಇನ್ನು ಈ ಸಿನಿಮಾದ ರಿವ್ಯೂ ಮಾಡೋ ಹಾಗಿಲ್ಲ.. ರೇಟಿಂಗ್ ಕೊಡೋ ಹಾಗಿಲ್ಲ..! ಹೌದು, ಬುಕ್ ಮೈ ಶೋ ಆನ್‌ಲೈನ್ ಬುಕ್ಕಿಂಗ್ ಆ್ಯಪ್‌ನಲ್ಲಿ ರಿವ್ಯೂ ರೇಟಿಂಗ್ ಕೊಡಲು ಅವಕಾಶ ಇಲ್ಲ. ಈ ರೀತಿ ರೇಟಿಂಗ್‌ ಮಾಡಬಾರದು, ಕಾಮೆಂಟ್‌ ಮಾಡಬಾರದು ಎನ್ನೋ ಕಾರಣಕ್ಕೆ ‘ದಿ ಡೆವಿಲ್‌’ ಸಿನಿಮಾ ತಂಡವು ಆದೇಶ ತಂದಿದೆ.

ಕೋರ್ಟ್‌ನಿಂದ ಚಿತ್ರತಂಡ ಆದೇಶ ತಂದಿದೆ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಇದ್ದಾರೆ. ಹೀಗಾಗಿ ಕೆಟ್ಟ ಕಾಮೆಂಟ್ಸ್ ಬರುವ ಮುನ್ನೆಚ್ಚರಿಕೆಯಿಂದ ಕೋರ್ಟ್‌ನಿಂದ‌ ಆದೇಶ ತರಲಾಗಿದೆ.

ಒಮ್ಮೆ ಜಾಮೀನು ಸಿಕ್ಕಿತ್ತು

ಮುಂಬರುವ ಜೂನ್‌ ತಿಂಗಳಿಗೆ ಈ ಪ್ರಕರಣ ಆಗಿ ಎರಡು ವರ್ಷಗಳು ಆಗಲಿವೆ. ಈ ಕೇಸ್‌ ಬಳಿಕ ನಟ ದರ್ಶನ್‌ ಅವರು ಜೈಲಿನಲ್ಲಿದ್ದರು. ಅದಾದ ಬಳಿಕ ಆರೋಗ್ಯ ಕಾರಣದಿಂದ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಬೆನ್ನು ನೋವು ಬಂದರೂ ಕೂಡ ಅವರು ಆಪರೇಶನ್‌ ಮಾಡಿಸಿಕೊಂಡಿರಲಿಲ್ಲ, ಬದಲಾಗಿ ‘ದಿ ಡೆವಿಲ್‌ʼ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಆಮೇಲೆ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದು ಮಾಡಿ ಎಂದು ಅರ್ಜಿ ಸಲ್ಲಿಸಿತ್ತು. ಇದರ ಪರಿಣಾಮ ಜಾಮೀನು ವಜಾ ಆಗಿ ಪವಿತ್ರಾ ಗೌಡ, ದರ್ಶನ್‌ ಸೇರಿದಂತೆ ಕೆಲವರು ಮತ್ತೆ ಜೈಲು ಸೇರಿದ್ದರು.