ಗಿಲ್ಲಿ ನಟನ ಬೆಂಬಲಕ್ಕೆ ನಿಂತ ರಾಕಿಂಗ್ ಸ್ಟಾರ್ ಯಶ್; ಕಿರಾತಕ-2ಕ್ಕೆ ನಾಯಕನಾಗಿ ಮಂಡ್ಯ ಹೈದ
ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ನಟನ ಹೊಸ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಬೆಂಬಲ ನೀಡಿದ್ದಾರೆ. ಕೆವಿಎನ್ ಸಂಸ್ಥೆ ನಿರ್ಮಿಸುತ್ತಿರುವ ಈ ಚಿತ್ರ 'ಕಿರಾತಕ 2' ಆಗುವ ಸಾಧ್ಯತೆಯಿದ್ದು, ಇದು ಹಳ್ಳಿ ಹಿನ್ನೆಲೆಯ ಕಥೆಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ರಾಕಿಂಗ್ ಸ್ಟಾರ್ ಯಶ್ ಗಿಲ್ಲಿ ನಟನ ಬೆಂಬಲ
ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ನಟ ಅಭಿನಯದಲ್ಲಿ ಹೊಸ ಸಿನಿಮಾ ಮೂಡಿಬರುವ ಸಮಯ ಸನ್ನಿಹಿತವಾಗಿದೆ. ಖುದ್ದು ರಾಕಿಂಗ್ ಸ್ಟಾರ್ ಯಶ್ ಗಿಲ್ಲಿ ನಟನ ಬೆಂಬಲಕ್ಕೆ ನಿಂತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆವಿಎನ್ ಸಂಸ್ಥೆಯು ಈ ಸಿನಿಮಾ ನಿರ್ಮಾಣ ಮಾಡುತ್ತಿದೆ ಎನ್ನಲಾಗಿದ್ದು, ಈಗಾಗಲೇ ಅಡ್ವಾನ್ಸ್ ಕೊಡಲಾಗಿದೆ ಎಂದು ಆಪ್ತ ಮೂಲಗಳು ಹೇಳಿವೆ.
ಕಿರಾತಕ 2’
ಎಲ್ಲವೂ ಅಂದುಕೊಂಡಂತೆ ಆದರೆ ಗಿಲ್ಲಿ ನಟನ ಅಭಿನಯದಲ್ಲಿ ‘ಕಿರಾತಕ 2’ ಸಿನಿಮಾ ಮೂಡಿಬರಲಿದೆ. ಆದರೆ ಶೀರ್ಷಿಕೆ ಬೇರೆ ಸಂಸ್ಥೆಯ ಅಡಿಯಲ್ಲಿ ನೋಂದಣಿ ಆಗಿರುವುದರಿಂದ ಶೀರ್ಷಿಕೆ ಲಭ್ಯವಾಗುವುದೋ ಇಲ್ಲವೋ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. ಯಶ್ ಬೆಂಬಲ ಇರುವುದರಿಂದ ‘ಕಿರಾತಕ 2’ ಶೀರ್ಷಿಕೆ ದೊರೆಯಬಹುದು ಎಂಬ ವಿಶ್ವಾಸದಲ್ಲಿ ಚಿತ್ರತಂಡವಿದೆ.
ಮಂಡ್ಯ ಪ್ರತಿಭೆ
ಗಿಲ್ಲಿ ನಟ ಬಹಳ ಶ್ರಮದಿಂದ ಮೇಲೆ ಬಂದಿರುವುದರಿಂದ ಮತ್ತು ಮಂಡ್ಯ ಹಿನ್ನೆಲೆ ಇರುವುದರಿಂದ ರಾಕಿಂಗ್ ಸ್ಟಾರ್ ಯಶ್ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಇದರ ಹಿಂದೆ ಹೊಸ ತಲೆಮಾರಿನ ನಾಯಕ ನಟರನ್ನು ಹುಟ್ಟುಹಾಕುವ ಉದ್ದೇಶವೂ ಅವರಿಗಿದೆ ಎನ್ನಲಾಗಿದೆ. ಅದಕ್ಕಾಗಿ ಗಿಲ್ಲಿ ನಟನ ಸಿನಿಮಾ ಆಗಲು ಅವರು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರಂತೆ
ಗ್ರಾಮೀಣ ಹುಡುಗ
ಗಿಲ್ಲಿ ನಟನ ಹೊಸ ಸಿನಿಮಾ ಹಳ್ಳಿ ಹಿನ್ನೆಲೆಯ ಕಥಾ ಹಂದರವನ್ನು ಹೊಂದಿದ್ದು, ಗ್ರಾಮೀಣ ಪರಿಸರದಲ್ಲಿ ಮೂಡಿಬರಲಿದೆ. ಈ ಸಿನಿಮಾ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಲಿದೆ.
ಇದನ್ನೂ ಓದಿ: 'ಅರ್ಧಕ್ಕೆ ಕೈಕೊಡುವವಳಲ್ಲ' ಅಂದಿದ್ದ ನಟಿ ಸಂಜನಾ ಬುರ್ಲಿ ಸೀರಿಯಲ್ ಬಿಟ್ಟಿದ್ಯಾಕೆ? ಕುತೂಹಲದ ಪೋಸ್ಟ್!
ಬಿಗ್‌ಬಾಸ್ ವಿನ್ನರ್
ಹಾಸ್ಯಕಲಾವಿದನಾಗಿ ಗುರುತಿಸಿಕೊಂಡಿದ್ದ ಗಿಲ್ಲಿ ನಟ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್‌ಬಾಸ್‌ನಲ್ಲಿ ಭಾಗಿಯಾಗಿದ್ದರು. ತಮ್ಮ ಹಳ್ಳಿ ಶೈಲಿಯ ಮಾತುಗಳಿಂದಲೇ ಜನಪ್ರಿಯತೆ ಪಡೆದುಕೊಂಡ ಗಿಲ್ಲಿ ನಟ, ಬಿಗ್‌ಬಾಸ್ ಟ್ರೋಫಿ ತಮ್ಮದಾಗಿಸಿಕೊಂಡಿದ್ದರು. ಈ ಹಿಂದೆ ಯಶ್ ಕಿರಾತಕ 2 ಸಿನಿಮಾ ಒಪ್ಪಿಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಯಶ್ ಹೊರ ಬಂದಿದ್ದರು.
ಇದನ್ನೂ ಓದಿ: ಅಪ್ಪ ತೋರಿಸಿದ ಹುಡುಗನ ಮದ್ವೆಯಾಗ್ತೇನೆ ಅಂದಿದ್ದ ಮೊನಾಲಿಸಾಗೆ ಬ್ರೇನ್ವಾಷ್? ತಂದೆಯ ಕಣ್ಣೀರು- ಹೇಳಿದ್ದೇನು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

