- Home
- Entertainment
- Amruthadhaare Serial: ಜಯದೇವ್‌ಗೆ ಕರ್ಮ ಬಿಟ್ಟರೂ, ದಿಯಾ ಬಿಡ್ತಿಲ್ಲ; ಬುಗುರಿ ಆಡಿಸಿದಂತೆ ಆಡಿಸ್ತಿರೋ ಬೇಬಿ
Amruthadhaare Serial: ಜಯದೇವ್‌ಗೆ ಕರ್ಮ ಬಿಟ್ಟರೂ, ದಿಯಾ ಬಿಡ್ತಿಲ್ಲ; ಬುಗುರಿ ಆಡಿಸಿದಂತೆ ಆಡಿಸ್ತಿರೋ ಬೇಬಿ
Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಮನೆಗೆ ಹೋಗೋಕೆ ಜಯದೇವ್‌ಗೆ ಮುಖ ಇಲ್ಲ, ಅವನ ಕೊಬ್ಬು ಕೂಡ ಇಳಿದಿಲ್ಲ. ನಾನು ನನ್ನ ಗುರಿ ಸಾಧಿಸುವೆ ಎಂದು ಅವನು ಮತ್ತೆ ಹಳೇ ಬುದ್ಧಿ ತೋರಿಸ್ತಿದ್ದಾನೆ. ಆದರೆ ದಿಯಾ ಅವನನ್ನು ಬಳಸಿಕೊಳ್ತಿದ್ದಾಳೆ.

ಜಯದೇವ್ ದುಡ್ಡು ಎಸ್ಕೇಪ್ ಮಾಡಿದ ದಿಯಾ
ಜೈಲಿನಿಂದ ರಿಲೀಸ್ ಆಗಿರುವ ಜಯದೇವ್ ಈಗ ಮತ್ತೆ ದಿಯಾ ಮನೆಗೆ ಬಂದಿದ್ದಾನೆ. ಈಗಾಗಲೇ ಅವನಿಗೆ ದಿಯಾ ಸಿಕ್ಕಾಪಟ್ಟೆ ಅವಮಾನ ಮಾಡಿದ್ದಳು, ಹೀಯಾಳಿಸಿದ್ದಳು, ಅವನ ಬಂಗಾರ, ದುಡ್ಡೆಲ್ಲ ತಗೊಂಡು ಓಡಿ ಹೋಗಿದ್ದಳು. ಆದರೂ ಅವನು ಅದನ್ನು ಮರೆತು, ಅವಳ ಮನೆಯೊಳಗಡೆ ಹೋಗಿದ್ದಾನೆ.

ಜಯದೇವ್‌ಗೆ ಊಟ ತಿಂಡಿ ಇಲ್ಲ
ಅವನಿಗೆ ಈಗ ಊಟಕ್ಕೂ ಕೂಡ ಗತಿ ಇಲ್ಲ. ದಿಯಾ ಅವನನ್ನು ಆಳಿನ ಥರ ಬಳಸಿಕೊಳ್ತಿದ್ದಾಳೆ. ಇದು ಅವನಿಗೆ ಅರ್ಥ ಆಗ್ತಿದೆಯೋ ಅಥವಾ ಅವನು ಬೇರೊಂದು ಪ್ಲ್ಯಾನ್ ಮಾಡಿದ್ದಾನಾ ಎಂದು ಕಾದು ನೋಡಬೇಕಿದೆ.
ಪಾಠ ಕಲಿಸುತ್ತಿರೋ ದಿಯಾ
ಜಯದೇವ್ ದಿವಾನ್‌ಗೆ ಕರ್ಮ ಬಿಟ್ಟರೂ ಕೂಡ ದಿಯಾ ಮಾತ್ರ ಬಿಡ್ತಿಲ್ಲ, ಸರಿಯಾದ ಪಾಠವನ್ನು ಕಲಿಸುತ್ತಿದ್ದಾಳೆ. ಇದನ್ನು ನೋಡಿ ವೀಕ್ಷಕರಿಗೆ ಖುಷಿಯಾಗಿದೆ. ಆದರೆ ದಿಯಾ ಮಾಡಿದ್ದು ಕೂಡ ಸರಿ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಮುಂದೇನು ಆಗುವುದು?
ಗೌತಮ್ ದಿವಾನ್ ಮಗಳು ಸಿಗಬೇಕು, ಜಯದೇವ್ ಮುಂದೆ ಏನು ಮಾಡುತ್ತಾನೆ ಎಂದು ನೋಡಬೇಕು. ಕೆಟ್ಟ ಬುದ್ಧಿ ಇರೋರೆಲ್ಲ ಒಳ್ಳೆಯವರಾಗಿದ್ದಾರೆ, ಆದರೆ ಜಯದೇವ್ ಸರಿ ಹೋಗಿಲ್ಲ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

