- Home
- Entertainment
- TV Talk
- Excl Interview: ಇದೇನು ಪೋಸ್ ಅಲ್ಲ, ರಿಯಲ್ ಆಗಿ ರೈತನನ್ನು ಮದುವೆ ಆಗ್ತಿರೋ Amruthadhaare Serial ದಿಯಾ!
Excl Interview: ಇದೇನು ಪೋಸ್ ಅಲ್ಲ, ರಿಯಲ್ ಆಗಿ ರೈತನನ್ನು ಮದುವೆ ಆಗ್ತಿರೋ Amruthadhaare Serial ದಿಯಾ!
Amruthadhaare Serial Diya Real Name: ಅಮೃತಧಾರೆ ಧಾರಾವಾಹಿ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರಿಗೆ ಈಗ 26 ವರ್ಷ ವಯಸ್ಸು. ಕೆಲವೇ ದಿನಗಳಲ್ಲಿ ಇವರು ಮದುವೆ ಆಗಲಿದ್ದಾರೆ. ಹಾಗಾದರೆ ಹುಡುಗ ಯಾರು? ಎಲ್ಲಿಯವರು? ಯಾವಾಗ ಮದುವೆ ಆಗಲಿದೆ? ಇದು ಅರೇಂಜ್? ಲವ್?

ಅರೇಂಜ್ ಮ್ಯಾರೇಜ್!
ಶ್ವೇತಾ ಗೌಡ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮದುವೆ ಪ್ಲ್ಯಾನ್ ಬಗ್ಗೆ ಮಾತನಾಡಿದ್ದಾರೆ. ಇದು ಪಕ್ಕಾ ಅರೇಂಜ್ ಮ್ಯಾರೇಜ್ ಅಂತೆ. ಮನೆಯಲ್ಲಿ ಹುಡುಕಿದ ಹುಡುಗನ ಜೊತೆ ಮದುವೆ ಆಗುತ್ತಿದ್ದಾರೆ.

ಊರಿನವರು
ಸುನೀಲ್ ಕೂಡ ಶ್ವೇತಾ ಗೌಡ ಅವರ ಊರಿನವರು. ಹೀಗಾಗಿ ಇನ್ನಷ್ಟು ಪರಿಚಯ ಇದೆಯಂತೆ. ತಂದೆಗೆ ಅನಾರೋಗ್ಯ ಆಗಿ ಹಾಸನಕ್ಕೆ ಹೋಗಿ ಬೆಡ್ ರೆಸ್ಟ್ ಮಾಡುವ ಯೋಚನೆಯಲ್ಲಿದ್ದರು. ಆ ವೇಳೆ ಸುನೀಲ್ ಕುಟುಂಬದ ಪರಿಚಯವಾಗಿ, ಮದುವೆ ಫಿಕ್ಸ್ ಆಗಿದೆ.
ಈಗ ಮದುವೆ ಆಗೋ ಆಸೆ ಇರಲಿಲ್ಲ
ಶ್ವೇತಾ ಗೌಡ ಅವರಿಗೆ ಈಗ ಮದುವೆ ಆಗೋ ಆಸೆ ಇರಲಿಲ್ಲ. ಇನ್ನೂ ಓದಬೇಕು ಎನ್ನುವ ಆಸೆ ಇತ್ತು. ಆದರೆ ಸುನೀಲ್ ಅವರನ್ನು ನೋಡಿದ ಮೇಲೆ ರಿಜೆಕ್ಟ್ ಮಾಡಲು ಯಾವುದೇ ನೆಪಗಳೇ ಇರಲಿಲ್ಲವಂತೆ. ಈಗ ಶ್ವೇತಾ ಗೌಡ ಅವರು ಮದುವೆ ಆದ್ಮೇಲೆ ಕೂಡ ಓದುವ ಯೋಚನೆಯಲ್ಲಿದ್ದಾರೆ.
ಮದುವೆ ಯಾವಾಗ?
ಶ್ವೇತಾ ಗೌಡ ಅವರು ಮೇ 14ರಂದು ಮದುವೆ ಆಗಲಿದ್ದಾರೆ. ಕುಟುಂಬಸ್ಥರು, ಸ್ನೇಹಿತರು, ಆತ್ಮೀಯರ ಸಾಕ್ಷಿಯಾಗಿ ಮದುವೆ ನಡೆಯಲಿದೆ.
ಹುಡುಗ ಯಾರು?
ಸುನೀಲ್ ಎಂಬುವವರನ್ನು ಶ್ವೇತಾ ಗೌಡ ಮದುವೆ ಆಗುತ್ತಿದ್ದಾರೆ. ಸುನೀಲ್ ಅವರು ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದಾರೆ, ಇವರು ರೈತರ ಕುಟುಂಬದಿಂದ ಬಂದವರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

