MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare ಪ್ರೊಡಕ್ಷನ್​ ವತಿಯಿಂದ ಜಗದ್ಧಾತ್ರಿ ಸೀರಿಯಲ್​: ಕಿರುತೆರೆಯಲ್ಲಿ ಇದೇ ಮೊದಲು

Amruthadhaare ಪ್ರೊಡಕ್ಷನ್​ ವತಿಯಿಂದ ಜಗದ್ಧಾತ್ರಿ ಸೀರಿಯಲ್​: ಕಿರುತೆರೆಯಲ್ಲಿ ಇದೇ ಮೊದಲು

'ಅಮೃತಧಾರೆ' ಧಾರಾವಾಹಿ ನಿರ್ಮಾಣ ಸಂಸ್ಥೆಯು ಇದೀಗ ಕಲರ್ಸ್ ಕನ್ನಡದಲ್ಲಿ 'ಜಗದ್ಧಾತ್ರಿ' ಎಂಬ ಹೊಸ ಧಾರಾವಾಹಿಯನ್ನು ನಿರ್ಮಿಸುತ್ತಿದೆ. 'ಪಾರು' ಖ್ಯಾತಿಯ ಮೋಕ್ಷಿತಾ ಪೈ ಮತ್ತು 'ನಮ್ಮನೆ ಯುವರಾಣಿ' ಖ್ಯಾತಿಯ ದೀಪಕ್ ಗೌಡ  ನಟಿಸುತ್ತಿದ್ದು, ಇದು ಕಿರುತೆರೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಿದೆ.

2 Min read
Author : Suchethana D
Published : May 09 2026, 05:21 PM IST
Share this Photo Gallery
  • FB
  • TW
  • Linkdin
  • Whatsapp
17
ಅಮೃತಧಾರೆ ಸೀರಿಯಲ್​
Image Credit : Social Media

ಅಮೃತಧಾರೆ ಸೀರಿಯಲ್​

ಅಮೃತಧಾರೆ ಸೀರಿಯಲ್​ ಇದೀಗ ಒಂದು ಹಂತಕ್ಕೆ ಬಂದಿದ್ದು, ಇನ್ನೇನು ಮುಗಿಯಲಿದೆ ಎನ್ನುವಾಗಲೇ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಕೊಟ್ಟಾಗಿದೆ. ಮಗಳಿಂದಲೇ ಗೌತಮ್​ಗೆ ತೊಂದರೆ ಇದೆ ಎಂದು ಜ್ಯೋಯಿಸರು ಹೇಳಿದ್ದು ಒಂದೆಡೆಯಾದರೆ, ನಿಮ್ಮ ಕಾಣೆಯಾದ ಮಗಳನ್ನು ಹುಡುಕುವ ಪ್ರಯತ್ನ ಮಾಡುವುದಾಗಿ ಅರಸನಕೋಟೆ ಅಖಿಲಾಂಡೇಶ್ವರಿ ಹೇಳಿಯಾಗಿದೆ. ಆದ್ದರಿಂದ ಸೀರಿಯಲ್​ ಸದ್ಯ ಮುಗಿಯಲ್ಲ ಎನ್ನುವುದು ಖಚಿತ.

Add Asianetnews Kannada as a Preferred SourcegooglePreferred
27
ಕುತೂಹಲದ ಅಪ್​ಡೇಟ್​
Image Credit : Instagram

ಕುತೂಹಲದ ಅಪ್​ಡೇಟ್​

ಆದರೆ ಇದರ ನಡುವೆಯೇ ಇದೀಗ ಕುತೂಹಲದ ಅಪ್​ಡೇಟ್​ ಒಂದು ಹೊರಬಂದಿದೆ. ಸಾಮಾನ್ಯವಾಗಿ ಒಂದು ಚಾನೆಲ್​ನ ಪ್ರೊಡಕ್ಷನ್​ ಹೌಸ್​ನವರು ಇನ್ನೊಂದು ಚಾನೆಲ್​ನಲ್ಲಿ ಒಂದೇ ಸಮಯದಲ್ಲಿ ಬೇರೆ ಬೇರೆ ಸೀರಿಯಲ್​ ಮಾಡುವುದಿಲ್ಲ. ಅದರಲ್ಲಿಯೂ ಕನ್ನಡದ ಕಿರುತೆರೆಯಲ್ಲಿ ಇಲ್ಲಿಯವರೆಗೆ ಆ ರೀತಿ ಆಗಿದ್ದೇ ಇಲ್ಲ. ಆದರೆ ಇದೀಗ ಅಮೃತಧಾರೆ ಪ್ರೊಡಕ್ಷನ್​ ಹೌಸ್​ ‘ಕೀರ್ತಿ ಅಕ್ಷಯ್ ನೆಟ್‌ವರ್ಕ್‌ ( Keerthi Akshay Network ) ಸಂಸ್ಥೆಯು ಕಲರ್ಸ್​ ಕನ್ನಡದಲ್ಲಿ ‘ಜಗದ್ದಾತ್ರಿ’ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿ ಹೊತ್ತಿದೆ.

Related Articles

Related image1
ಅಂಜುತ್ತಲೇ ಮಾಡಿದ ಆ ವಿಡಿಯೋ ವೈರಲ್​ ಆಯ್ತು: ಒಂದೂವರೆ ಕೋಟಿ ವ್ಯೂವ್ಸ್​ ಕಂಡ ಬಗ್ಗೆ ನಟಿ ಅಭಿಜ್ಞಾ ಹೇಳಿದ್ದೇನು
Related image2
Bhagylakshmi ಕಂಡ್ರೆ ಕಿಡಿಕಾರೋ ಕನ್ನಿಕಾ ಇಲ್ಲಿ ನೋಡಿ ಭಾಗ್ಯ ಜೊತೆ ಸೊಂಟ ಬಳಕಿಸೋ ವಿಡಿಯೋ
37
ಕಿರುತೆರೆ ಇತಿಹಾಸದಲ್ಲೇ
Image Credit : our own

ಕಿರುತೆರೆ ಇತಿಹಾಸದಲ್ಲೇ

ಇದರ ಬಗ್ಗೆ ಇದೀಗ ಪ್ರೊಮೋ ರಿಲೀಸ್​ ಆಗಿದ್ದು, ಕಿರುತೆರೆಯ ಇತಿಹಾಸದಲ್ಲಿಯೇ ಇದೇ ಮೊದಲು ಇಂಥ ಸಾಹಸ ಮಾಡುತ್ತಿರುವುದು ಎನ್ನಲಾಗಿದೆ. ಕೀರ್ತಿ ಅಕ್ಷಯ್ ನೆಟ್‌ವರ್ಕ್‌ ಸಂಸ್ಥೆಯು ನಿರ್ದೇಶಕ, ನಿರ್ಮಾಪಕ ಮಹೇಶ್‌ ರಾವ್‌ ಅವರು ಇದನ್ನು ಮಾಡುತ್ತಿದ್ದಾರೆ. ಅಂದಹಾಗೆ, ಇವರ ಮಗಳು ನೈನಿಕಾ ಅಮೃತಧಾರೆ ಸೀರಿಯಲ್​ನಲ್ಲಿ ಮಿಂಚು ಆಗಿ ಜನಮನ ಗೆದ್ದಿದ್ದಾಳೆ.

47
 ಮೋಕ್ಷಿತಾ ಪೈ ಜಗದ್ಧಾತ್ರಿಯಾಗಿ...
Image Credit : our own

ಮೋಕ್ಷಿತಾ ಪೈ ಜಗದ್ಧಾತ್ರಿಯಾಗಿ...

ಇನ್ನು ಜಗದ್ಧಾತ್ರಿ ಸೀರಿಯಲ್​ನಲ್ಲಿ ಪಾರು ಸೀರಿಯಲ್​ ಖ್ಯಾತಿಯ ಬಿಗ್​ಬಾಸ್​ ಫೇಮ್​ ಮೋಕ್ಷಿತಾ ಪೈ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್​ಬಾಸ್​​ ಖ್ಯಾತಿಯ ಮೋಕ್ಷಿತಾ ಪೈ (Mokshitha Pai) ಸಹಜವಾಗಿ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದ ಮೇಲೆ ಫೇಮಸ್​ ಆಗಿದ್ದಾರೆ. ಬಿಗ್‌ಬಾಸ್‌ನಲ್ಲಿ ತಮ್ಮ ಮುಗ್ಧ ಮುಖದಿಂದ, ಅಷ್ಟೇ ಸಾಫ್ಟ್‌ ಆಗಿ ಇರುವಲ್ಲಿ ನಟಿ ಮೋಕ್ಷಿತಾ ಪೈ ಎಲ್ಲರ ಮನಸ್ಸನ್ನು ಗೆದ್ದವರು. 3ನೇ ರನ್ನರ್‌ ಅಪ್‌ ಅರ್ಥಾತ್‌ 4ನೇ ಸ್ಥಾನ ಪಡೆದಿದ್ದಾರೆ ನಟಿ. ಬಿಗ್‌ಬಾಸ್‌ಗೂ ಮುನ್ನ ಪಾರು ಸೀರಿಯಲ್‌ನ ನಟನೆಯಿಂದ ಮನೆ ಮಾತಾಗಿದ್ದವರು ಈಕೆ. ಇದರಲ್ಲಿ ಹಳ್ಳಿ ಹುಡುಗಿ ಪಾರು ಆಗಿ, ಕರುನಾಡಿನ ವೀಕ್ಷಕರ ಮನ ಗೆದ್ದಿದ್ದರು, ಮೋಕ್ಷಿತಾ ಅನ್ನೋದಕ್ಕಿಂತ ಪಾರು ಆಗಿ, ಅಖಿಲಾಂಡೇಶ್ವರಿ ಸೊಸೆಯಾಗಿ ಗುರುತಿಸಿಕೊಂಡಿದ್ದರು ನಟಿ. ಐದು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ಪಾರು (Paaru) ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು.

57
ವೆಬ್​ಸೀರಿಸ್​ನಲ್ಲಿ ನಟನೆ
Image Credit : Instagram

ವೆಬ್​ಸೀರಿಸ್​ನಲ್ಲಿ ನಟನೆ

ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಧನುಷ್ ಗೌಡ ನಿರ್ದೇಶನ ಮಾಡಿರುವ ಮಿಡಲ್ ಕ್ಲಾಸ್ ರಾಮಾಯಣ ಸಿನಿಮಾದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೇ ವಿನಯ್ ಗೌಡ ಜೊತೆ ಒಂದು ಮಿನಿ ವೆಬ್ ಸೀರೀಸ್ ನಲ್ಲೂ ಕಾಣಿಸಿಕೊಂಡಿದ್ದರು. ಬಳಿಕ ಈ ಬಾರಿಯ ಬಿಗ್​ಬಾಸ್​ಗೆ ವಿಶೇಷ ಅತಿಥಿಯಾಗಿಯೂ ಎಂಟ್ರಿ ಕೊಟ್ಟಿದ್ದರು.

67
ಜಗದ್ಧಾತ್ರಿಯಾಗಿ ನಟಿ
Image Credit : Instagram

ಜಗದ್ಧಾತ್ರಿಯಾಗಿ ನಟಿ

ಇದೀಗ ಮೋಕ್ಷಿತಾ ಪೈ ಜೀ ಕನ್ನಡಕ್ಕೆ ವಾಪಸಾಗಿದ್ದಾರೆ. ಜಗದ್ಧಾತ್ರಿ ಸೀರಿಯಲ್​ನಲ್ಲಿ ಅವರು ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಅವರು ಕ್ರೈಂ ಬ್ರ್ಯಾಂಚ್​ ಆಫೀಸರ್​ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸದ್ಯ ಸಿಕ್ಕಿರುವ ಮಾಹಿತಿಯ ಈ ಸೀರಿಯಲ್​ ತೆಲುಗಿನ ಜನಪ್ರಿಯ ಧಾರಾವಾಹಿ ಜಗಧಾತ್ರಿಯ ರಿಮೇಕ್ ಆಗಿದೆ. ಈ ಧಾರಾವಾಹಿಯ ಮೂಲ ಮರಾಠಿ ಧಾರಾವಾಹಿ ಇದು ಹೌಸ್ ವೈಫ್ ಆಗಿ ಗುರುತಿಸಿಕೊಂಡಿರುವ ಸ್ಪೈ ಏಜೆಂಟ್ ಕಥೆಯಾಗಿದೆ.

77
ದೀಪಕ್​ ಗೌಡ ನಾಯಕ
Image Credit : Instagram

ದೀಪಕ್​ ಗೌಡ ನಾಯಕ

ಮಾಹಿತಿಯ ಪ್ರಕಾರ ನಾಯಕನಾಗಿ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನಮ್ಮನೆ ಯುವರಾಣಿ’ ನಾಯಕ ಹಾಗೂ ವೀಕ್ಷಕರ ಮೆಚ್ಚಿನ ಅನಿಕೇತ್ ಖ್ಯಾತಿಯ ದೀಪಕ್ ಗೌಡ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ದೀಪಕ್ ಗೌಡ ಅವರು ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಅನಿಕೇತ್ ಆಗಿ ಜನಮನ ಗೆದ್ದಿದ್ದರು. ಅವರ ಸ್ಟೈಲ್, ಸ್ಮೈಲ್, ನಟನೆ, ಅನಿಕೇತ್-ಮೀರಾ ಜೋಡಿಯನ್ನು ಜನ ಇಷ್ಟಪಟ್ಟಿದ್ದರು. ಅದಾದ ಬಳಿಕ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ತುಳಸಿ ಮಗನಾಗಿ ನಟಿಸಿದ್ದರು. ಆದರೆ ಆ ಧಾರಾವಾಹಿಯಿಂದ ಅರ್ಧದಲ್ಲೇ ನಟ ಹೊರಗೆ ಬಂದಿದ್ದರು. ಇದೀಗ ಮತ್ತೆ ಕಿರುತೆರೆಗೆ ಹಲವು ವರ್ಷಗಳ ಬಳಿಕ ಕಂ ಬ್ಯಾಕ್ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಕಲರ್ಸ್ ಕನ್ನಡ
ಮನರಂಜನಾ ಸುದ್ದಿ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Exclusive: ಅವಳಿ ಮಕ್ಕಳು ಹುಟ್ಟಿ 3 ತಿಂಗಳು; 1 ತಿಂಗಳ ಡಯೆಟ್‌ನಲ್ಲೇ ಸಣ್ಣಗಾದ ರಾಮಾಚಾರಿ ಸೀರಿಯಲ್‌ ನಟಿ!
Recommended image2
ನಂದಕುಮಾರನ ಮುದ್ದು ಸೊಸೆ ಪ್ರಿಯಾ ಸುಳ್ಳಿನ ಮುಖವಾಡ ಬಯಲಾಗೋ ಟೈಂ ಬಂದೇ ಬಿಡ್ತು!
Recommended image3
ಅಂಜುತ್ತಲೇ ಮಾಡಿದ ಆ ವಿಡಿಯೋ ವೈರಲ್​ ಆಯ್ತು: ಒಂದೂವರೆ ಕೋಟಿ ವ್ಯೂವ್ಸ್​ ಕಂಡ ಬಗ್ಗೆ ನಟಿ ಅಭಿಜ್ಞಾ ಹೇಳಿದ್ದೇನು
Related Stories
Recommended image1
ಅಂಜುತ್ತಲೇ ಮಾಡಿದ ಆ ವಿಡಿಯೋ ವೈರಲ್​ ಆಯ್ತು: ಒಂದೂವರೆ ಕೋಟಿ ವ್ಯೂವ್ಸ್​ ಕಂಡ ಬಗ್ಗೆ ನಟಿ ಅಭಿಜ್ಞಾ ಹೇಳಿದ್ದೇನು
Recommended image2
Bhagylakshmi ಕಂಡ್ರೆ ಕಿಡಿಕಾರೋ ಕನ್ನಿಕಾ ಇಲ್ಲಿ ನೋಡಿ ಭಾಗ್ಯ ಜೊತೆ ಸೊಂಟ ಬಳಕಿಸೋ ವಿಡಿಯೋ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved