ಚಿರಂಜೀವಿ ಸರ್ಜಾ ಸಿನಿಮಾ ದೃಶ್ಯ ಕಾಪಿ ಮಾಡಿದ್ರ ‘ನಿನ್ನ ಜೊತೆ ನನ್ನ ಕಥೆ’ ಸೀರಿಯಲ್ ತಂಡ
Ninna Jothe Nanna Kathe: ಸ್ಟಾರ್ ಸುವರ್ಣ ವಾಹಿನಿಯ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯಲ್ಲಿ ಸದ್ಯ ಪ್ರಸಾರವಾಗುತ್ತಿರುವ ಕಥೆಯು ಚಿರಂಜೀವಿ ಸರ್ಜಾ ನಟಿಸಿದ ಬ್ಲಾಕ್ ಬಸ್ಟರ್ ಸಿನಿಮಾ ‘ಅಮ್ಮ ಐ ಲವ್ ಯೂ’ ಕಥೆಯನ್ನು ನೆನಪಿಸುತ್ತಿದೆ. ನಿಮಗೂ ಹಾಗೆ ಅನಿಸ್ತಿದ್ಯಾ?

ನಿನ್ನ ಜೊತೆ ನನ್ನ ಕಥೆ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಜನಮೆಚ್ಚಿದ ಧಾರಾವಾಹಿ ಅಂದ್ರೆ ಅದು ‘ನಿನ್ನ ಜೊತೆ ನನ್ನ ಕಥೆ’. ಈ ಧಾರಾವಾಹಿ ಸುಂದರವಾಗಿ ಮೂಡಿ ಬರುತ್ತಿದ್ದು, ಭೂಮಿ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಅಜಿತ್ ಜೋಡಿಯನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಇದೀಗ ಧಾರಾವಾಹಿಯಲ್ಲಿ ಟ್ವಿಸ್ಟ್ ಬಂದಿದೆ.

ಧಾರಾವಾಹಿ ಕಥೆ ಏನು?
ಧಾರಾವಾಹಿಯಲ್ಲಿ ಪೊಲೀಸರ್ ಆಫಿಸರ್ ಆಗಿರುವ ಅಜಿತ್, ಠಾಣೆ ಬಳಿ ಚಹಾ ಅಂಗಡಿ ನಡೆಸುತ್ತಿರುವ ಭೂಮಿ ಜೊತೆ ಒಪ್ಪಂದದ ಮದುವೆ ಮಾಡಿಕೊಂಡಿರುತ್ತಾನೆ. ಮನೆಯವರ ಮುಂದೆ ಗಂಡ ಹೆಂಡತಿಯಂತೆ ನಾಟವಾಡುತ್ತಾರೆ. ತನ್ನ ಅಮ್ಮನನ್ನು ಜೈಲಿನಿಂದ ಬಿಡುಗಡೆ ಮಾಡುವ ಸಲುವಾಗಿ ಭೂಮಿ ಈ ಒಪ್ಪಂದದ ಮದುವೆಗೆ ಒಪ್ಪಿಕೊಂಡಿರುತ್ತಾಳೆ.
ಸತ್ಯ ತಿಳಿದ ಅಜಿತ್ ಅಮ್ಮ
ಭೂಮಿಯನ್ನು ತನ್ನ ಮುದ್ದಿನ ಸೊಸೆಯಾಗಿ, ಮಗಳಿಗಿಂತ ಹೆಚ್ಚು ಪ್ರೀತಿ ಮಾಡುವ ಅಜಿತ್ ಅಮ್ಮನಿಗೆ, ಅಜಿತ್ ಮತ್ತು ಭೂಮಿಯದ್ದು ನಿಜವಾದ ಮದುವೆಯಲ್ಲ, ಕಾಂಟ್ರಾಕ್ಟ್ ಮದುವೆ ಅನ್ನೋದು ಗೊತ್ತಾದ ಮೇಲೆ ಶಾಕ್ ಆಗಿ, ಬಳಿಕ ಅಪಘಾತವಾಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಮ್ಮನ ಸ್ಥಿತಿಗೆ ಭೂಮಿಯೇ ಕಾರಣ ಎಂದು ಆಕೆಯನ್ನು ಮನೆಯಿಂದಲೇ ದೂರ ಇಟ್ಟು, ಇನ್ನು ಮುಂದೆ ನಿನ್ನ ಮುಖ ತೋರಿಸಬೇಡ ಎನ್ನುತ್ತಾನೆ ಅಜಿತ್.
ಅಮ್ಮನಿಗಾಗಿ ಭಿಕ್ಷೆ ಬೇಡಿದ ಅಜಿತ್
ಇದೀಗ ಹಲವಾರು ಚಿಕಿತ್ಸೆಯ ಬಳಿಕವೂ ಅಜಿತ್ ಅಮ್ಮನಿಗೆ ಚೇತರಿಕೆ ಕಾಣದೇ ಇದ್ದಾಗ, ಭಿಕ್ಷೆ ಬೇಡಿ, ಅದರಿಂದ ಬಂದ ಹಣದಲ್ಲಿ ಪೂಜೆ ಮಾಡಿಸಬೇಕು ಎಂದು ಜ್ಯೋತಿಷಿಗಳು ಹೇಳಿದ ಮಾತನ್ನು ಕೇಳಿ, ಅಜಿತ್ ಅಮ್ಮನಿಗಾಗಿ ಎಲ್ಲವನ್ನು ಬಿಟ್ಟು, ಭಿಕ್ಷುಕರ ಜೊತೆಗೆ ಕುಳಿತು ಭಿಕ್ಷೆ ಬೇಡುತ್ತಿದ್ದಾರೆ.
ಚಿರಂಜೀವಿ ಸರ್ಜಾ ಸಿನಿಮಾ
ನಟ ಚಿರಂಜೀವಿ ಸರ್ಜಾ ಅಭಿನಯದ ‘ಅಮ್ಮ ಐ ಲವ್ ಯೂ’ ಸಿನಿಮಾದಲ್ಲಿ, ಅಮ್ಮನ ಆರೋಗ್ಯ ಉತ್ತಮವಾಗಬೇಕು, ಅಮ್ಮ ಕೋಮಾದಿಂದ ಎದ್ದೇಳಬೇಕೆಂದು ಚಿರು, ತನ್ನ ಕೋಟಿ ಕೋಟಿ ಆಸ್ತಿಯನ್ನು ಕೊಂಚ ಸಮಯಕ್ಕೆ ಹಾಗೇ ಬಿಟ್ಟು, ಭಿಕ್ಷೆ ಬೇಡಿ ಅದರಿಂದ ಬಂದ ಹಣವನ್ನು ದೇವರಿಗೆ ಸಲ್ಲಿಸಿ, ಭಕ್ತಿಯಿಂದ ಪೂಜೆ ಮಾಡುತ್ತಾನೆ.
‘ಅಮ್ಮ ಐ ಲವ್ ಯೂ ಸಿನಿಮಾ ಕಾಪಿ ಮಾಡಿತಾ?
ಇದೀಗ ನಿನ್ನ ಜೊತೆಗೆ ನನ್ನ ಕಥೆ ಧಾರಾವಾಹಿಯಲ್ಲೂ ಅದೇ ದೃಶ್ಯ ರಿಪೀಟ್ ಆಗಿದ್ದು, ಜನ, ಇದು ಚಿರು ಸಿನಿಮಾದ ಕಥೆಯಂತಿದೆ, ಅದನ್ನೇ ಇಲ್ಲೂ ಸಹ ಕಾಪಿ ಮಾಡಲಾಗಿದೆ ಎನ್ನುತ್ತಿದ್ದಾರೆ. ಆದರೆ ಕಥೆಗೆ ಆ ದೃಶ್ಯದ ಅವಶ್ಯಕತೆ ಇದ್ರೆ, ಒಂದೇ ರೀತಿಯ ದೃಶ್ಯಗಳನ್ನು ಮಾಡೋದ್ರಲ್ಲಿ ತಪ್ಪೇನಿದೆ ಅಲ್ವಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

