ಆಲಿಯಾ ಭಟ್ ಸೌಂದರ್ಯದ ಸೀಕ್ರೆಟ್ ರಿವೀಲ್! ಈ ನಾಲ್ಕೇ ಪದಾರ್ಥಗಳಲ್ಲಿದೆ ಆ ಗುಟ್ಟು!
ತುಪ್ಪ, ಸ್ವಲ್ಪ ಬೆಲ್ಲ, ಶೇಂಗಾ ಮತ್ತು ಕೊಬ್ಬರಿ... ಈ ನಾಲ್ಕು ಪದಾರ್ಥಗಳಿಂದ ಮಾಡಿದ ಲಡ್ಡು ಆಲಿಯಾ ಭಟ್ ಅವರ ಸೌಂದರ್ಯದ ಗುಟ್ಟಂತೆ. ಇದನ್ನವರು 'ಸ್ಕಿನ್ ಸ್ನ್ಯಾಕ್' ಅಂತಾನೇ ಕರೀತಾರೆ. ಇದರಿಂದ ಚರ್ಮ ಹೊಳೆಯುತ್ತೆ ಅಂತ ಆಲಿಯಾ ಭಟ್ ಹೇಳಿದ್ದಾರೆ.

ಡಯಟ್ ಮೇಲೆ ಹೆಚ್ಚು ಗಮನ
ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಫಿಟ್ನೆಸ್‌ಗೆ ಮಾತ್ರವಲ್ಲ, ಹೊಳೆಯುವ ಚರ್ಮಕ್ಕೂ ಫೇಮಸ್. ಫಿಟ್ನೆಸ್‌ಗಾಗಿ ಆಲಿಯಾ ಸ್ಟ್ರೆಂತ್ ಟ್ರೈನಿಂಗ್, ಪೈಲೇಟ್ಸ್, ಯೋಗ, ಕಾರ್ಡಿಯೋ ಅಂತಾ ಕಸರತ್ತು ಮಾಡ್ತಾರೆ. ಆದ್ರೆ, ತಮ್ಮ ಸ್ಕಿನ್ ಸೌಂದರ್ಯಕ್ಕಾಗಿ ಅವರು ಡಯಟ್ ಮೇಲೆ ಹೆಚ್ಚು ಗಮನ ಕೊಡ್ತಾರೆ.

ಸ್ಕಿನ್ ಸ್ನ್ಯಾಕ್
ಇತ್ತೀಚೆಗೆ ಒಂದು ಸಂದರ್ಶನದಲ್ಲಿ, ಆಲಿಯಾ ತಮ್ಮ ಚರ್ಮದ ಸೌಂದರ್ಯಕ್ಕಾಗಿ ತಿನ್ನುವ ನಾಲ್ಕು ಪದಾರ್ಥಗಳ ಲಡ್ಡು ಬಗ್ಗೆ ಹೇಳಿದ್ದಾರೆ. ತುಪ್ಪ, ಸ್ವಲ್ಪ ಬೆಲ್ಲ, ಶೇಂಗಾ ಮತ್ತು ಕೊಬ್ಬರಿ ಸೇರಿಸಿ ಮಾಡಿದ ಈ ಲಡ್ಡು ಚರ್ಮವನ್ನು ಇನ್ನಷ್ಟು ಸುಂದರವಾಗಿಸುತ್ತಂತೆ. "ಇದೊಂದು ಸ್ಕಿನ್ ಸ್ನ್ಯಾಕ್. ನನ್ನ ಚರ್ಮ ಚೆನ್ನಾಗಿ ಕಾಣಿಸಲಿ ಅಂತಾನೇ ನಾನು ಇದನ್ನು ತಿನ್ನುತ್ತೇನೆ" ಅಂತಾ ಆಲಿಯಾ ಹೇಳಿದ್ದಾರೆ.
ತುಂಬಾನೇ ಒಳ್ಳೆಯದು
ತುಪ್ಪ ಕರುಳಿನ ಆರೋಗ್ಯ, ಆರೋಗ್ಯಕರ ಕೊಬ್ಬು ಮತ್ತು ಚರ್ಮದ ಗುಣಮಟ್ಟಕ್ಕೆ ತುಂಬಾನೇ ಒಳ್ಳೆಯದು. ಚರ್ಮವನ್ನು ಆರೋಗ್ಯವಾಗಿಡಲು ಬೇಕಾದ ವಿಟಮಿನ್ ಎ, ಇ, ಮತ್ತು ಕೆ ನಂತಹ ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳು ತುಪ್ಪದಲ್ಲಿವೆ. ಬೆಲ್ಲ ಒಂದು ಅತ್ಯುತ್ತಮ ನೈಸರ್ಗಿಕ ಸ್ಕಿನ್‌ಕೇರ್ ಪದಾರ್ಥ.
ಚರ್ಮವನ್ನು ಬಿಗಿಯಾಗಿಸುತ್ತವೆ
ಇದರಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಗ್ಲೈಕೋಲಿಕ್ ಆಸಿಡ್ ಹೇರಳವಾಗಿದೆ. ಇದು ಕೊಲಾಜನ್ ಉತ್ಪತ್ತಿಯನ್ನು ಹೆಚ್ಚಿಸುತ್ತೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಸುಕ್ಕುಗಳನ್ನು ಕಡಿಮೆ ಮಾಡಿ, ಚರ್ಮವನ್ನು ಬಿಗಿಯಾಗಿಸುತ್ತವೆ. ಅಷ್ಟೇ ಅಲ್ಲ, ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡಲೂ ಇದು ಸಹಾಯ ಮಾಡುತ್ತೆ.
ಆ್ಯಂಟಿಆಕ್ಸಿಡೆಂಟ್‌ಗಳು ಅಧಿಕ
ಶೇಂಗಾಬೀಜಗಳಲ್ಲಿ ರೆಸ್ವೆರಾಟ್ರೊಲ್, ಕ್ಯಾಟೆಚಿನ್ ಮತ್ತು ಫ್ಲೇವೊನೈಡ್‌ಗಳಂತಹ ಪಾಲಿಫಿನಾಲ್‌ಗಳು, ಅಂದರೆ ಆ್ಯಂಟಿಆಕ್ಸಿಡೆಂಟ್‌ಗಳು ಅಧಿಕವಾಗಿವೆ. ಇವುಗಳನ್ನು ತಿನ್ನುವುದರಿಂದ ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ, ಉರಿಯೂತವನ್ನು ತಡೆಯಬಹುದು. ಇದರಲ್ಲಿರುವ ಹೆಚ್ಚಿನ ಆ್ಯಂಟಿಆಕ್ಸಿಡೆಂಟ್‌ಗಳು ಕೊಲಾಜನ್ ಹಾಳಾಗುವುದನ್ನು ತಡೆದು, ಚರ್ಮವನ್ನು ಯೌವನವಾಗಿಡಲು ಸಹಾಯ ಮಾಡುತ್ತವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

