ಒಂದ್ ಕಾಲದಲ್ಲಿ ಕುಚಿಕು ಗೆಳೆಯರಂತಿದ್ದವರು ದರ್ಶನ್ ಹಾಗು ಸುದೀಪ್.. ಆದ್ರೆ ಇವರಿಬ್ಬರ ಸ್ನೇಹ ಮುರಿದು ಬಿದ್ದಿದೆ. ಈಗ ದಾಸ ಉಳಿಸಿಕೊಂಡಿರೋ ಗೆಳೆತನ ಅಂದ್ರೆ ಅದು ‘ಸುಂಟರಗಾಳಿ’ ನಟಿ ರಕ್ಷಿತಾ ಬಳಿ ಮಾತ್ರ. ಸದ್ಯದಲ್ಲೇ ನಟ ದರ್ಶನ್ ಫ್ಯಾನ್ ಮುಂದೆ ಬರಲಿದ್ದಾರೆ, ಅದು ಹೇಗೆ? ನೋಡಿ ಈ ಸ್ಟೋರಿ..

ನಿಟ್ಟುಸಿರು ಬಿಟ್ಟ ಫ್ಯಾನ್ಸ್; ಒಂದು ವರ್ಷ ದರ್ಶನ್ ನೋಡಲು ಪ್ಲಾನ್ ಮಾಡಿದ 'ದರ್ಶನ್ ಬಳಗ'..!

Add Asianetnews Kannada as a Preferred SourcegooglePreferred

ಸ್ಯಾಂಡಲ್​ವುಡ್ ನಲ್ಲಿ ಹುಲಿಯಂತೆ ಘರ್ಜಿಸುತ್ತಿದ್ದ ನಟ ದರ್ಶನ್ (Darshan Thoogudeepa) ಸದ್ದಡಗಿದೆ. ಹಬ್ಬ ಹರಿದಿನ, ಪ್ರೇಮಿಗಳ ದಿನ, ಮದುವೆ ವಾರ್ಷಿಕೋತ್ಸವ ಎಲ್ಲವೂ ದರ್ಶನ್​ಪಾಲಿಗೆ ಇನ್ನೊಂದು ವರ್ಷ ಮರೀಚಿಗೆ. ಆದ್ರೆ ದಾಸನ ಫ್ಯಾನ್ಸ್​ಗೆ ಮಾತ್ರ ಈ ವರ್ಷ ಪೂರ್ತಿ ಹಬ್ಬವೋ ಹಬ್ಬ. ಯಾಕಂದ್ರೆ ದರ್ಶನ್ ಯಾವ್ದೇ ಸಿನಿಮಾದಲ್ಲಿ ನಟಿಸದೇ ಇದ್ರೂ, ಥಿಯೇಟರ್​ನಲ್ಲಿ ಸೌಂಡ್ ಮಾಡ್ತಾನೇ ಇರ್ತಾರೆ. ಅದು ಹೇಗೆ.? ಯಾಕೆ..? ನೋಡೋಣ ಬನ್ನಿ..

ಯೆಸ್​, ನಟ ದರ್ಶನ್​​ಗೆ ಇನ್ನೊಂದೊರ್ಷ ಜೈಲೂಟ ಫಿಕ್ಸ್ ಆನ್ನೋದು ಎಲ್ಲರಿಗೂ ಗೊತ್ತಾಗಿದೆ. ಅಯ್ಯೋ ಶಿವನೇ ಇನ್ನೊಂದೊರ್ಷ ಹೆಂಗಪ್ಪಾ ಜೈಲಲ್ಲಿ ಜೀವ್ನಾ ಅಂತ ಚಿಂತೆಯಲ್ಲಿ ದರ್ಶನ್ ಇದ್ರೆ, ಆಗಿದ್ದು ಆಯ್ತು ನಮ್ ಬಾಸ್ ಇನ್ನೊಂದ್ ವರ್ಷದಲ್ಲಿ ಹೊರ ಬರ್ತಾರೆ. ಆದ್ರೆ ಈ ಇಡೀ ವರ್ಷ ಅವರನ್ನ ಮೆರೆಸಲೇ ಬೇಕು ಅಂತ ಫ್ಯಾನ್ಸ್​ ಪಣ ತೊಟ್ಟಿದ್ದಾರೆ. ಅದ್ಕಾಗಿ ದಚ್ಚು ಬಳಗ ಹಲವು ಯೋಜನೆಗಳನ್ನೂ ಹಾಕಿಕೊಂಡಿದ್ದಾರೆ..

ವರ್ಷ ಪೂರ್ತಿ ದಾಸನ ನೆನಪಿನಲ್ಲಿರಬೇಕು ಸ್ಯಾಂಡಲ್​ವುಡ್; ದರ್ಶನ್ ನೆನಪಿನಂಗಳಕ್ಕಾಗಿ ಫ್ಯಾನ್ಸ್ ಮಾಡಿದ್ದಾರೆ ಪ್ಲಾನ್..!

ಹೌದು, ನಟ ದರ್ಶನ್​ ಇನ್ನೊಂದು ವರ್ಷ ಜೈಲಲ್ಲಿದ್ರೆ ಜನರಿಗೆ ಮರೆತೇ ಹೋಗ್ಬಹುದೇನೋ. ಯಾಕಂದ್ರೆ ಈಗಿರೋರೆಲ್ಲಾ ಶಾರ್ಟ್​ ಟೈಮ್​​ ಮೆಮೋರಿ ಮಂದಿ. ಇವತ್ತಿಂದು ಇವತ್ತಿಗೆ ನಾಳೆಯದ್ದು ನಾಳೆ ನೋಡ್ಕೋಳ್ಳೋನಾ ಅನ್ನೋ ಮೈಂಡ್ ಸೆಟ್​​​​​.. ಇದೊಂದತರಾ ಒಳ್ಳೇದೆ. ಆದ್ರೆ ದಾನ ನಮ್ಮ ಮನದಿಂದ ದೂರಾಗ್ಬಾರ್ದು. ಅವರು ಜೈಲಿನಿಂದ ಹೊರ ಬರೋ ವರೆಗೂ ಸೆಲೆಬ್ರೇಷನ್ ಇರಬೇಕು ಅಂತ ನಿರ್ಧರಿಸಿರೋ ದರ್ಶನ್ ಫ್ಯಾನ್ಸ್​ ಒಂದು ಪ್ಲಾನ್ ಮಾಡಿದ್ದಾರೆ. ಅದೇನ್ ಗೊತ್ತಾ..? ದಾಸನ ಹಲವು ಹಳೇ ಹಿಟ್ ಸಿನಿಮಾಗಳನ್ನ ರೀ ರಿಲೀಸ್ ಮಾಡೋದು..

ಕಗ್ಗತ್ತಲಲ್ಲಿ ಕಂಡ ಡಿ ಬೆಳಕು.. ಕಲಾಸಿಪಾಲ್ಯ ರೀ ರಿಲೀಸ್..!

ನಟ ದರ್ಶನ್ ಜೈಲು ಸೇರಿದ ಮೇಲೆ ಅಭಿಮಾನಿ ಬಳಗದಲ್ಲಿ ಕಗ್ಗತ್ತಲು ಆವರಿಸಿದೆ. ದಾಸನಿಗೆ ಕಾಸಾ ಕಾಸ ಆಗಿದ್ದ ಫ್ಯಾನ್ಸ್​ ಎಲ್ಲರೂ ದೂರ ದೂರ ಆಗಿದ್ದಾರೆ. ಸ್ನೇಹಿತ ಬಳಗದಲ್ಲಿ ಕಿತ್ತಾಟ ಆಗುತ್ತಿದೆ. ದರ್ಶನ್ ಇಷ್ಟು ವರ್ಷ ಕಷ್ಟ ಪಟ್ಟು ಕಟ್ಟಿದ್ದ ಕೋಟೆಗೆ ರಾಜನೇ ಇಲ್ಲದಂತಾಗಿದೆ. ಆದ್ರೆ ಇನ್ನೊಂದು ವರ್ಷದಲ್ಲಿ ಮತ್ತೆ ಅವರನ್ನೆಲ್ಲಾ ಒಗ್ಗೂಡಿಸೋಕೆ ಕೆಲವೊಂದಿಷ್ಟು ಫ್ಯಾನ್ಸ್ ಭರ್ಜರಿಯಾಗೆ ಸಿದ್ಧತೆ ಮಾಡಿದ್ದಾರೆ. ಯಾಕಂದ್ರೆ ಇನ್ನೊಂದೊರ್ಷ ಕಳೆದ್ರೆ ದಚ್ಚುಗೆ ಬೇಲ್ ಸಿಗುತ್ತೆ ಅನ್ನೋ ಘಾಡವಾದ ಅವರ ನಂಬಿಕೆ.. ಅದಕ್ಕಾಗಿ ದಾಸ ನಟಿಸಿದ್ದ ಹಿಟ್ ಸಿನಿಮಾಗಳನ್ನ ಬರು ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮೊದಲು ಕಲಾಸಿಪಾಳ್ಯ ಸಿನಿಮಾ ತೆರೆಕಾಣುತ್ತೆ ಅಂತ ಹೇಳಲಾಗ್ತಿದೆ.

ನಟ ದರ್ಶನ್ ಜೈಲು ಸೇರಿದ ಮೇಲೆ ದಾಸನ ಹಲವು ಹಿಟ್ ಸಿನಿಮಾಗಳು ರೀ ರಿಲೀಸ್ ಆಗಿವೆ. ಜೋಗಿ ಪ್ರೇಮ್ ನಿರ್ದೇಶನದ ಕರಿಯಾ, ನಾಗಣ್ಣ ನಿರ್ದೇಶನದ ಸಂಗೊಳ್ಳಿ ರಾಯಣ್ಣ, ನಮ್ಮ ಪ್ರೀತಿಯ ರಾಮು, ಸಾರಥಿ, ನವಗ್ರಹ ಹಾಗು ಕಳೆದ ವರ್ಷ ಬಂದ ಡೆವಿಲ್ ಸಿನಿಮಾ ಕೂಡ ರೀ ರಿಲೀಸ್ ಆಗಿದ್ವು.

ಮತ್ತೆ ತೆರೆ ಮೇಲೆ ಬರ್ತಾರೆ ಕುಚಿಕು ಸ್ನೇಹಿತರು..!

ಒಂದ್ ಕಾಲದಲ್ಲಿ ಕುಚಿಕು ಗೆಳೆಯರಂತಿದ್ದವರು ದರ್ಶನ್ ಹಾಗು ಸುದೀಪ್.. ಆದ್ರೆ ಇವರಿಬ್ಬರ ಸ್ನೇಹ ಮುರಿದು ಬಿದ್ದಿದೆ. ಈಗ ದಾಸ ಉಳಿಸಿಕೊಂಡಿರೋ ಗೆಳೆತನ ಅಂದ್ರೆ ಅದು ಸುಂಟರಗಾಳಿ ರಕ್ಷಿತಾ ಬಳಿ ಮಾತ್ರ. ಈ ರಕ್ಷಿತಾ ಮತ್ತು ದರ್ಶನ್ ನಟನೆಯ ಸೂಪರ್ ಹಿಟ್ ಸಿನಿಮಾ ಕಲಾಸಿಪಾಳ್ಯ.. ಈ ಕಲಾಸಿಪಾಳ್ಯ ಸಿನಿಮಾ ಸಧ್ಯದಲ್ಲೇ ಮರು ಬಿಡುಗಡೆ ಆಗಲಿದೆ.

ದಾಸ ಜೈಲಿನಿಂದ ಹೊರ ಬರೋದಕ್ಕೆ ಇನ್ನೊಂದೊರ್ಷ ಸಮಯ ಬೇಕು ಅಂತ ಗೊತ್ತಾಗ್ತಿದ್ದಂತೆ, ಮೂರು ತಿಂಗಳಿಗೊಂದು ದರ್ಶನ್​​ರ ಒಂದೊಂದು ಸಿನಿಮಾನ ಮರು ಬಿಡುಗಡೆಗೆ ಅಭಿಮಾನಿ ಬಳಗ ಪಟ್ಟು ಹಿಡಿದಿದ್ದಾರೆ. ದಾಸನ ಹಿಟ್ ಸಿನಿಮಾವನ್ನ ರೀ ರಿಲೀಸ್ ಮಾಡಿ ದರ್ಶನ್​ರನ್ನ ಸದಾ ನೆನಪಿನಲ್ಲಿಸಿಕೊಳ್ಳಬೇಕು ಅನ್ನೋದು ಆ ಸೆಲೆಬ್ರಿಟಿಗಳ ಆಸೆ. ಹೀಗಾಗಿ ಇನ್ನೊಂದು ವರ್ಷ ಕಗ್ಗತ್ತಲಲ್ಲಿರಬೇಕಿದ್ದ ಡಿ ಬಳಗದಲ್ಲಿ ಬೆಳಕು ಮೂಡಲಿದೆ..