MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Duleep Trophy Final
Today's Horoscope in Kannada
Mantralaya Online Scam
Hubballi Ganeshotsava
Kalaburagi Drought List
Pitru Paksha 2026 Date
PM Modi Meeting
Karnataka Farmers
Gulbarga Bus Accident
Western Ghats ESA
Karnataka Taxi Fare Meter
Bigg Boss Kannada 13
  • Home
  • Education
  • ಮರದ ಕೆಳಗೆ ಆರಂಭವಾದ ಶಾಲೆ ಇಂದು ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಉದ್ಯಾನವನ ಕಾರಂಜಿ! ಶಿಕ್ಷಕ ಸುರೇಶ್ ಸಾಧನೆಗೆ ರಾಜ್ಯ ಸರ್ಕಾರದ ಗೌರವ

ಮರದ ಕೆಳಗೆ ಆರಂಭವಾದ ಶಾಲೆ ಇಂದು ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಉದ್ಯಾನವನ ಕಾರಂಜಿ! ಶಿಕ್ಷಕ ಸುರೇಶ್ ಸಾಧನೆಗೆ ರಾಜ್ಯ ಸರ್ಕಾರದ ಗೌರವ

ಶಾಲೆಗೆ ಕಟ್ಟಡವಿಲ್ಲ, ಬಸ್‌ ಸೌಲಭ್ಯವಿಲ್ಲ, ಗುಡ್ಡಗಾಡು ಪ್ರದೇಶ. ಇಂತಹ ಹಿಂದುಳಿದ ಗ್ರಾಮದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಒಂದೇ ಸಂಕಲ್ಪದೊಂದಿಗೆ ಕಳೆದ 18 ವರ್ಷಗಳಿಂದ ದುಡಿದ ಶಿಕ್ಷಕರೊಬ್ಬರ ಶ್ರಮಕ್ಕೆ 2026-27ನೇ ಸಾಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಗೌರವ ಸಿಕ್ಕಿದೆ.

3 Min read
Author : Ravi Janekal
Published : Sep 07 2026, 12:29 PM IST
Share this Photo Gallery
  • FB
  • TW
  • Linkdin
  • Whatsapp
111
ಸುರೇಶ್ ಕೆ 2026 27 ಕರ್ನಾಟಕ ಉತ್ತಮ ಶಿಕ್ಷ ಅವಾರ್ಡೆಡ್
Image Credit : Asianet News

ಸುರೇಶ್ ಕೆ 2026-27 ಕರ್ನಾಟಕ ಉತ್ತಮ ಶಿಕ್ಷ ಅವಾರ್ಡೆಡ್

ದೇವದುರ್ಗ ತಾಲೂಕಿನ ಸರ್ಕಾರಿ ಗುಂಡೇರದೊಡ್ಡಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಶ್ ಕೆ. ಅವರು 2026-27ನೇ ಸಾಲಿನ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ದೇವದುರ್ಗ ತಾಲೂಕಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
211
ಮರದ ಕೆಳಗೆ ಪ್ರಾರಂಭವಾಗಿದ್ದ ಸರ್ಕಾರಿಯಲ್ಲೀಗ ಸ್ಮಾರ್ಟ್ ಕ್ಲಾಸ್
Image Credit : Asianet News

ಮರದ ಕೆಳಗೆ ಪ್ರಾರಂಭವಾಗಿದ್ದ ಸರ್ಕಾರಿಯಲ್ಲೀಗ ಸ್ಮಾರ್ಟ್ ಕ್ಲಾಸ್

ಸುಮಾರು 18 ವರ್ಷಗಳ ಹಿಂದೆ ಕರಿಗುಡ್ಡ ಕ್ಲಸ್ಟರ್ ವ್ಯಾಪ್ತಿಯ ಗುಂಡೇರದೊಡ್ಡಿ ಗ್ರಾಮಕ್ಕೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಜೂರಾದಾಗ ಶಾಲೆಗೆ ಸ್ವಂತ ಕಟ್ಟಡವೇ ಇರಲಿಲ್ಲ. ಮಕ್ಕಳಿಗೆ ಮರದ ಕೆಳಗೆ ಪಾಠ ಮಾಡುವ ಪರಿಸ್ಥಿತಿ ಇತ್ತು ಮಳೆ ಮತ್ತು ಬಿಸಿಲು ತಡೆಯಲು ರಾಮಯ್ಯ ಎನ್ನುವವರೆ ಗುಡಿಸಲಿನಲ್ಲಿ ಶಾಲೆ ನಡೆಯುತ್ತಿತ್ತು.. ಕುಟುಂಬಸ್ಥರು ಕೃಷಿ ಕೆಲಸಕ್ಕೆ ಹೋದಾಗ ಅವರ ಗುಡಿಸಲಿನಲ್ಲಿ ಶಾಲೆ ನಡೆಯುತ್ತಿತ್ತು. ಗ್ರಾಮಕ್ಕೆ ಸಾರಿಗೆ ಬಸ್‌ ಕೂಡ ಬರುತ್ತಿರಲಿಲ್ಲ. ಗುಡ್ಡಗಾಡು ಪ್ರದೇಶವಾಗಿದ್ದರಿಂದ ಮೂಲಸೌಕರ್ಯಗಳ ಕೊರತೆಯೂ ಇತ್ತು. ಆದರೆ ಇಂತಹ ಪರಿಸ್ಥಿತಿಯೇ ಶಿಕ್ಷಕ ಸುರೇಶ್ ಕೆ. ಅವರ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸಿತು.

Related Articles

Related image1
ಹಾಡುತ್ತಾ, ಆಡುತ್ತಾ ಇಂಗ್ಲಿಷ್ ಕಲಿಕೆ: ಮುದ್ದಾಬಳ್ಳಿ ಮಕ್ಕಳ ನೆಚ್ಚಿನ ಶಿಕ್ಷಕ ಮಹ್ಮದ್ ಇಸ್ಮಾಯಿಲ್
Related image2
ಪಾಠ ಹೇಳುವುದಷ್ಟೇ ಅಲ್ಲ, ಶಾಲೆಯನ್ನೇ ಬದಲಿಸಿದ ಶಿಕ್ಷಕ: ಮಕ್ಕಳ ಕಲಿಕೆಗೆ ಹೊಸ ಸ್ಪರ್ಶ!
311
18 ವರ್ಷಗಳ ನಿರಂತರ ಶ್ರಮ
Image Credit : Asianet News

18 ವರ್ಷಗಳ ನಿರಂತರ ಶ್ರಮ

18 ವರ್ಷಗಳ ನಿರಂತರ ಶ್ರಮ

ಕಳೆದ 18 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುರೇಶ್ ಅವರು ಶಾಲೆಯ ಅಭಿವೃದ್ಧಿಯನ್ನು ತಮ್ಮ ಜವಾಬ್ದಾರಿಯೆಂದುಕೊಂಡು ಕೆಲಸ ಮಾಡಿದರು. ಹಂತ ಹಂತವಾಗಿ ಶಾಲೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಪ್ರಯತ್ನ ನಡೆಸಿದರು.

ಗ್ರಾಮಸ್ಥರು, ದಾನಿಗಳು ಹಾಗೂ ಶಾಲೆಯ ಹಿತೈಷಿಗಳ ಸಹಕಾರ ಪಡೆದು ಶಾಲೆಯ ರೂಪವನ್ನೇ ಬದಲಿಸಿದರು. ಇಂದು ಇದೇ ಶಾಲೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ.

411
'ಪ್ರಶಸ್ತಿ ಬಂದಿರುವುದು ಜವಾಬ್ದಾರಿ ಹೆಚ್ಚಿಸಿದೆ'
Image Credit : Asianet News

'ಪ್ರಶಸ್ತಿ ಬಂದಿರುವುದು ಜವಾಬ್ದಾರಿ ಹೆಚ್ಚಿಸಿದೆ'

ಮಕ್ಕಳು ಪಾಠ ಕಲಿಯುವುದರ ಜೊತೆಗೆ ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಶಾಲೆಯ ವಾತಾವರಣವನ್ನೇ ಕಲಿಕೆಯ ಭಾಗವನ್ನಾಗಿ ಮಾಡಿದ್ದಾರೆ.

ಪ್ರಶಸ್ತಿಯೊಂದಿಗೆ ಜವಾಬ್ದಾರಿಯೂ ಹೆಚ್ಚಾಗಿದೆ ಸೆಪ್ಟೆಂಬರ್ 5ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿ ಶಿಕ್ಷಕರನ್ನು ಸನ್ಮಾನಿಸಿದರು.

ತಮ್ಮ ಸಾಧನೆಯ ಬಗ್ಗೆ ಮಾತನಾಡಿದ ಶಿಕ್ಷಕ ಸುರೇಶ್ ಕೆ. ಅವರು, ಗ್ರಾಮೀಣ ಭಾಗದ ಗುಡ್ಡಗಾಡು ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯಲ್ಲಿ ದಾನಿಗಳ ಸಹಕಾರದಿಂದ ಹಲವು ಬದಲಾವಣೆಗಳನ್ನು ತರಲು ಸಾಧ್ಯವಾಗಿದೆ ಎಂದು ಹೇಳಿದರು.

ಶಾಲೆಯಲ್ಲಿ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಕಾರಂಜಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಾಲೆಯ ಆವರಣದಲ್ಲಿ ವಿವಿಧ ಗಿಡಮರಗಳನ್ನು ಬೆಳೆಸಲು ಗ್ರಾಮಸ್ಥರೂ ಕೈಜೋಡಿಸಿದ್ದಾರೆ. ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದ್ದು, ಇದರೊಂದಿಗೆ ತಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಅವರು ಹೇಳಿದರು.

511
ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಕಾರಂಜಿ..
Image Credit : Asianet News

ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಕಾರಂಜಿ..

ಶಾಲೆಯಲ್ಲಿ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಕಾರಂಜಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಾಲೆಯ ಆವರಣದಲ್ಲಿ ವಿವಿಧ ಗಿಡಮರಗಳನ್ನು ಬೆಳೆಸಲು ಗ್ರಾಮಸ್ಥರೂ ಕೈಜೋಡಿಸಿದ್ದಾರೆ. ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದ್ದು, ಇದರೊಂದಿಗೆ ತಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಅವರು ಹೇಳಿದರು.

611
ಒಬ್ಬ ಶಿಕ್ಷಕನ ಸಂಕಲ್ಪ ಬದಲಿಸಿದ ಶಾಲೆ
Image Credit : Asianet News

ಒಬ್ಬ ಶಿಕ್ಷಕನ ಸಂಕಲ್ಪ ಬದಲಿಸಿದ ಶಾಲೆ

ಒಂದು ಕಾಲದಲ್ಲಿ ಮರದ ಕೆಳಗೆ ಪಾಠ ನಡೆಯುತ್ತಿದ್ದ ಶಾಲೆ ಇಂದು ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸುವ ಮಟ್ಟಕ್ಕೆ ಬೆಳೆದಿದೆ. ಇದರ ಹಿಂದೆ ಸರ್ಕಾರದ ಯೋಜನೆಗಳಷ್ಟೇ ಅಲ್ಲ, ಒಬ್ಬ ಶಿಕ್ಷಕನ 18 ವರ್ಷಗಳ ನಿರಂತರ ಪರಿಶ್ರಮ, ಗ್ರಾಮಸ್ಥರ ಸಹಕಾರ ಮತ್ತು ಮಕ್ಕಳ ಮೇಲಿನ ಕಾಳಜಿಯೂ ಇದೆ.

711
43 ಮಕ್ಕಳಿಗೆ ಗುಣಮಟ್ಟದ ಶಿಕ್ಷಣ
Image Credit : Asianet News

43 ಮಕ್ಕಳಿಗೆ ಗುಣಮಟ್ಟದ ಶಿಕ್ಷಣ

ಪ್ರಸ್ತುತ 1ರಿಂದ 5ನೇ ತರಗತಿವರೆಗೆ 43 ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಏಕೋಪಾಧ್ಯಾಯ ಶಾಲೆಯಾಗಿದ್ದರೂ ಮಕ್ಕಳ ಕಲಿಕೆಗೆ ಯಾವುದೇ ಕೊರತೆಯಾಗದಂತೆ ಸುರೇಶ್ ಅವರು ಶ್ರಮಿಸುತ್ತಿದ್ದಾರೆ. ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಉದ್ಯಾನವನ, ಕಾರಂಜಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಾಲೆಯ ಗೋಡೆಗಳ ಮೇಲೂ ಮಹನೀಯರ ಚಿತ್ರಗಳನ್ನು ಬಿಡಿಸಿ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಲಾಗಿದೆ.

811
ಹಸಿರಿನಿಂದ ಕಂಗೊಳಿಸುವ ಶಾಲೆ
Image Credit : Asianet News

ಹಸಿರಿನಿಂದ ಕಂಗೊಳಿಸುವ ಶಾಲೆ

ಶಾಲೆ ಗುಡ್ಡಗಾಡು ಪ್ರದೇಶದಲ್ಲಿರುವುದರಿಂದ ನಿರ್ಲಕ್ಷ್ಯಕ್ಕೊಳಗಾಗಿತ್ತು. ಶಾಲೆ ಕಟ್ಟಡವಿರುಲು ಕುಳಿತು ಪಾಠಮಾಡುವಂತಹ ಸ್ವಚ್ಛ ವಾತಾವರಣವೇ ಇರಲಿಲ್ಲ. ಇಂತ ಶಾಲೆಯೊಂದು ಇಂದು ಹೇಗೆ ಬದಲಾಗಿದೆಯೆಂದರೆ ಶಾಲೆಯ ಆವರಣವನ್ನು ಸಂಪೂರ್ಣ ಹಸಿರೀಕರಣಗೊಳಿಸಲಾಗಿದೆ. ಇದರ ಹಿಂದೆ ಶಿಕ್ಷಕ ಸುರೇಶ್ ವಿಶೇಷ ಕಾಳಜಿಯಿದೆ, ಶ್ರಮವಿದೆ ವಿವಿಧ ಗಿಡಮರಗಳನ್ನು ಬೆಳೆಸಿ ಶಾಲೆಯನ್ನು ಪರಿಸರ ಸ್ನೇಹಿ ವಾತಾವರಣವನ್ನಾಗಿ ರೂಪಿಸಿದ್ದಾರೆ.

911
90 ಮರಗಳೊಂದಿಗೆ ಕಲಿಕಾ ಉದ್ಯಾನವನ ನಿರ್ಮಾಣ
Image Credit : Asianet News

90 ಮರಗಳೊಂದಿಗೆ ಕಲಿಕಾ ಉದ್ಯಾನವನ ನಿರ್ಮಾಣ

ಪ್ರಸ್ತು ಶಾಲಾ ಆವರಣದಲ್ಲಿ ಉತ್ತಮ ಕಲಿಕಾ ಉದ್ಯಾನವನ ನಿರ್ಮಿಸಿದ್ದು, ಆವರಣದಲ್ಲಿ 90ಕ್ಕೂ ಹೆಚ್ಚು ಮರಗಳನ್ನು ಬೆಳೆಸಲಾಗಿದ್ದು ಪ್ರತಿಯೊಂದು ಮರಕ್ಕೂ ಕಲಿಕೆಗೆ ಸಂಬಂಧಿಸಿದ ಪೋಸ್ಟರ್ಗಳನ್ನು ಹಾಕಲಾಗಿದೆ. ಇದರಿಂದ ಮಕ್ಕಳಿಗೆ ಆಟದೊಂದಿಗೆ ಪಾಠ ಕಲಿಯಲು ಅನುಕೂಲವಾಗಿದೆ.

1011
ಶಾಲಾ ಆವರಣದಲ್ಲಿ ಬೆಳೆದ ತರಕಾರಿಗಳೇ ಬಿಸಿಯೂಟಕ್ಕೆ ಬಳಕೆ!
Image Credit : Asianet News

ಶಾಲಾ ಆವರಣದಲ್ಲಿ ಬೆಳೆದ ತರಕಾರಿಗಳೇ ಬಿಸಿಯೂಟಕ್ಕೆ ಬಳಕೆ!

ಇನ್ನೊಂದು ವಿಶೇಷವೆಂದರೆ ಶಾಲಾವರಣದಲ್ಲೇ ತರಕಾರಿ ತೋಟ ಮಾಡಲಾಗಿದ್ದು ಇಲ್ಲಿಯೇ ಬೆಳೆದ ತರಕಾರಿಯನ್ನು ಬಿಸಿಯೂಟ ಬಳಸಲಾಗುತ್ತದೆ! ಸರಿಯಾದ ಮೊಬೈಲ್ ನೆಟ್ವರ್ಕ್ ಸಿಗದ ಗ್ರಾಮದಲ್ಲಿ ಇಂದು ಈ ಶಾಲೆಯಲ್ಲಿ ಓದಿದ ಮಕ್ಕಳು ಪ್ರಸ್ತುತ ಎಂಬಿಬಿಎಸ್, ಬಿ.ಎಡ್, ನರ್ಸಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

1111
ಯಾವುದೇ ಸೌಲಭಗಳಿಲ್ಲದ ಶಾಲೆಯೊಂದು ಇಂದು ತಾಲೂಕಿಗೆ ಮಾದರಿಯಾಗಿದೆ
Image Credit : Asianet News

ಯಾವುದೇ ಸೌಲಭಗಳಿಲ್ಲದ ಶಾಲೆಯೊಂದು ಇಂದು ತಾಲೂಕಿಗೆ ಮಾದರಿಯಾಗಿದೆ

ಅದಕ್ಕಾಗಿಯೇ ಸುರೇಶ್ ಕೆ. ಅವರಿಗೆ ದೊರೆತಿರುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಕೇವಲ ಒಬ್ಬ ಶಿಕ್ಷಕರಿಗೆ ಸಿಕ್ಕ ಗೌರವವಲ್ಲ. ಶಿಕ್ಷಕರು ಮನಸು ಮಾಡಿದರೆ ಗುಡ್ಡಗಾಡಿನ ಯಾವುದೇ ಸೌಲಭ್ಯಗಳಿಲ್ಲದ ಸರ್ಕಾರಿ ಶಾಲೆಯೊಂದನ್ನು ಮಾದರಿ ಶಾಲೆಯನ್ನಾಗಿ ರೂಪಿಸಬಹುದು ಎಂಬುದಕ್ಕೆ ಸಿಕ್ಕಿರುವ ರಾಜ್ಯಮಟ್ಟದ ಮಾನ್ಯತೆಯಾಗಿದೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಶಿಕ್ಷಣ
ಶಿಕ್ಷಕರ ದಿನಾಚರಣೆ
ಶಿಕ್ಷಕರು
ರಾಯಚೂರು

Latest Videos
Recommended Stories
Recommended image1
Teachers Day Special: ಮಕ್ಕಳ ಮನಸ್ಸಷ್ಟೇ ಅಲ್ಲ, ಕ್ಯಾನ್ಸರನ್ನೇ ಗೆಲ್ಲುತ್ತಿರುವ ಈ ಶಿಕ್ಷಕಿ ಯಾರು?
Recommended image2
ಹಾಡುತ್ತಾ, ಆಡುತ್ತಾ ಇಂಗ್ಲಿಷ್ ಕಲಿಕೆ: ಮುದ್ದಾಬಳ್ಳಿ ಮಕ್ಕಳ ನೆಚ್ಚಿನ ಶಿಕ್ಷಕ ಮಹ್ಮದ್ ಇಸ್ಮಾಯಿಲ್
Recommended image3
ಪಾಠ ಹೇಳುವುದಷ್ಟೇ ಅಲ್ಲ, ಶಾಲೆಯನ್ನೇ ಬದಲಿಸಿದ ಶಿಕ್ಷಕ: ಮಕ್ಕಳ ಕಲಿಕೆಗೆ ಹೊಸ ಸ್ಪರ್ಶ!
Related Stories
Recommended image1
ಹಾಡುತ್ತಾ, ಆಡುತ್ತಾ ಇಂಗ್ಲಿಷ್ ಕಲಿಕೆ: ಮುದ್ದಾಬಳ್ಳಿ ಮಕ್ಕಳ ನೆಚ್ಚಿನ ಶಿಕ್ಷಕ ಮಹ್ಮದ್ ಇಸ್ಮಾಯಿಲ್
Recommended image2
ಪಾಠ ಹೇಳುವುದಷ್ಟೇ ಅಲ್ಲ, ಶಾಲೆಯನ್ನೇ ಬದಲಿಸಿದ ಶಿಕ್ಷಕ: ಮಕ್ಕಳ ಕಲಿಕೆಗೆ ಹೊಸ ಸ್ಪರ್ಶ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved