MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • Team India: ರಿಟೈರ್ಮೆಂಟ್ ಚರ್ಚೆ ಬೆನ್ನಲ್ಲೇ ರೋಹಿತ್-ವಿರಾಟ್ ಅಚ್ಚರಿ ನಡೆ; ಆ ಹುಡುಗನ ಸ್ಥಾನಕ್ಕೆ ಎದುರಾಯ್ತು ಕುತ್ತು? ಕಾರಣವೇನು?

Team India: ರಿಟೈರ್ಮೆಂಟ್ ಚರ್ಚೆ ಬೆನ್ನಲ್ಲೇ ರೋಹಿತ್-ವಿರಾಟ್ ಅಚ್ಚರಿ ನಡೆ; ಆ ಹುಡುಗನ ಸ್ಥಾನಕ್ಕೆ ಎದುರಾಯ್ತು ಕುತ್ತು? ಕಾರಣವೇನು?

ನಿವೃತ್ತಿಯ ಚರ್ಚೆಯನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (ರೋ-ಕೋ) ಜೋಡಿ, ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಸಾಹಸಕ್ಕೆ ಕೈಹಾಕಿದೆ. ಈ ಹಿರಿಯ ಜೋಡಿಯ ಈ ಅಚ್ಚರಿಯ ನಡೆ ಈಗ 'ಆ ಹುಡುಗ'ನ ಸ್ಥಾನಕ್ಕೆ ಕುತ್ತು ತರುತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

2 Min read
Author : Bhimasi M Koleppanavar
Published : Jul 29 2026, 05:48 PM IST
Share this Photo Gallery
  • FB
  • TW
  • Linkdin
  • Whatsapp
15
ತಕ್ಕ ಉತ್ತರ ಕೊಟ್ಟಿದ್ದ ರೋಹಿತ್!
Image Credit : X/BCCI

ತಕ್ಕ ಉತ್ತರ ಕೊಟ್ಟಿದ್ದ ರೋಹಿತ್!

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಿರಿಯ ಆಟಗಾರರ ನಿವೃತ್ತಿಯ ಚರ್ಚೆಗಳು ಹೊಸದೇನಲ್ಲ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಲ್ಲಿ ಸೋಲು ಕಂಡ ನಂತರ, ನಾಯಕ ರೋಹಿತ್ ಶರ್ಮಾ ಅವರ ನಿವೃತ್ತಿಯ ವದಂತಿಗಳು ಬಲವಾಗಿ ಕೇಳಿಬಂದಿದ್ದವು. ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯವೇ ರೋಹಿತ್ ಅವರಿಗೆ ಕೊನೆಯ ಪಂದ್ಯವಾಗಬಹುದು ಎಂದೇ ಕ್ರೀಡಾಲೋಕ ಭಾವಿಸಿತ್ತು. ಆದರೆ, ಆ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ರೋಹಿತ್ ಶರ್ಮಾ ತಮ್ಮ ಮೇಲಿದ್ದ ಎಲ್ಲಾ ವದಂತಿಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ನಿವೃತ್ತಿಯ ಚರ್ಚೆಯನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (ರೋ-ಕೋ) ಜೋಡಿ, ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಸಾಹಸಕ್ಕೆ ಕೈಹಾಕಿದೆ. ಈ ಹಿರಿಯ ಜೋಡಿಯ ಈ ಅಚ್ಚರಿಯ ನಡೆ ಈಗ 'ಆ ಹುಡುಗ'ನ ಸ್ಥಾನಕ್ಕೆ ಕುತ್ತು ತರುವಂತೆ ಭಾಸವಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಶುಭಮನ್ ಗಿಲ್ ಸ್ಥಾನಕ್ಕೆ ಬಿಗ್ ಚಾಲೆಂಜ್!
Image Credit : Getty

ಶುಭಮನ್ ಗಿಲ್ ಸ್ಥಾನಕ್ಕೆ ಬಿಗ್ ಚಾಲೆಂಜ್!

ಇತ್ತೀಚೆಗಷ್ಟೇ ಐಸಿಸಿ ಪ್ರಕಟಿಸಿದ ಏಕದಿನ ಶ್ರೇಯಾಂಕದಲ್ಲಿ ಶುಭಮನ್ ಗಿಲ್ ವಿಶ್ವದ ನಂಬರ್ ಒನ್ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್‌ರನ್ನು ಹಿಂದಿಕ್ಕಿರುವ ಗಿಲ್, 801 ರೇಟಿಂಗ್ ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಆದರೆ, ಈ ಸಂತಸದ ನಡುವೆಯೇ ಗಿಲ್ ಅವರಿಗೆ ತಮ್ಮ ತಂಡದ ಹಿರಿಯ ಆಟಗಾರರಿಂದಲೇ ದೊಡ್ಡ ಚಾಲೆಂಜ್ ಎದುರಾಗಿದೆ.

Related Articles

Related image1
Cricket: ಕ್ಯಾನ್ಸರ್ ಗೆದ್ದ ಕಷ್ಟ, ತಂದೆಯ ಮೌನ ಸಂದೇಶ; ಭಾವನಾತ್ಮಕ ಹೋರಾಟದ ಮೂಲಕ ಟೀಮ್ ಇಂಡಿಯಾ ಬಾಗಿಲು ತಟ್ಟಿದ ಹುಡುಗ!
Related image2
Cricket: ಶ್ರೇಯಸ್ ಅಯ್ಯರ್ ಸೇರಿ 8 ಆಟಗಾರರು ಟೀಮ್ ಇಂಡಿಯಾದಿಂದ ಔಟ್! ಕಾರಣವೇನು?
35
ಗಿಲ್‌ಗೆ ಸವಾಲಾದ್ರಾ ರೋಹಿತ್‌-ವಿರಾಟ್!
Image Credit : Asianet News

ಗಿಲ್‌ಗೆ ಸವಾಲಾದ್ರಾ ರೋಹಿತ್‌-ವಿರಾಟ್!

ಪ್ರಸ್ತುತ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ 767 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ 758 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಭಾರತದ ಮುಂದಿನ ಏಕದಿನ ಸರಣಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿದೆ. ಈ ಸರಣಿಯಲ್ಲಿ ರೋಹಿತ್ ಮತ್ತು ವಿರಾಟ್ ತೋರುವ ಪ್ರದರ್ಶನವು ಗಿಲ್ ಅವರ ನಂಬರ್ ಒನ್ ಪಟ್ಟವನ್ನು ಕಸಿದುಕೊಳ್ಳುವ ಸಾಧ್ಯತೆಯಿದೆ. ರೇಟಿಂಗ್ ಪಾಯಿಂಟ್‌ಗಳ ವ್ಯತ್ಯಾಸ ತೀರ ಕಡಿಮೆಯಿರುವುದರಿಂದ, ಮುಂಬರುವ ಪಂದ್ಯಗಳಲ್ಲಿ 'ರೋ-ಕೋ' ಜಂಟಿ ಅಬ್ಬರ ಶುಭಮನ್ ಗಿಲ್ ಅವರನ್ನು ಎರಡನೇ ಅಥವಾ ಮೂರನೇ ಸ್ಥಾನಕ್ಕೆ ತಳ್ಳಿದರೂ ಅಚ್ಚರಿಯಿಲ್ಲ.

45
ವೈಭವ್ ಸೂರ್ಯವಂಶಿ ಮಿಂಚು ಮತ್ತು ಶ್ರೇಯಾಂಕಗಳ ಬದಲಾವಣೆ!
Image Credit : twitter

ವೈಭವ್ ಸೂರ್ಯವಂಶಿ ಮಿಂಚು ಮತ್ತು ಶ್ರೇಯಾಂಕಗಳ ಬದಲಾವಣೆ!

ಇನ್ನೊಂದೆಡೆ, ಭಾರತೀಯ ಕ್ರಿಕೆಟ್‌ನ 15 ರ ಹರೆಯದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ಜಿಗಿತ ಕಂಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ 50.33 ಸರಾಸರಿಯಲ್ಲಿ 151 ರನ್ ಗಳಿಸಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ವೈಭವ್, ಐಸಿಸಿ ಟಿ20 ಶ್ರೇಯಾಂಕದಲ್ಲಿ ಭಾರಿ ಬಡ್ತಿ ಪಡೆದು 48ನೇ ಸ್ಥಾನ ತಲುಪಿದ್ದಾರೆ.

55
ನಂ.1 ಕಿಶನ್!
Image Credit : stockPhoto

ನಂ.1 ಕಿಶನ್!

ಐಸಿಸಿ ಟಿ20 ಶ್ರೇಯಾಂಕದಲ್ಲಿ ಇಶಾನ್ ಕಿಶನ್ 910 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ತಿಲಕ್ ವರ್ಮಾ ಆರನೇ ಸ್ಥಾನಕ್ಕೆ ಮತ್ತು ಶ್ರೇಯಸ್ ಅಯ್ಯರ್ 24ನೇ ಸ್ಥಾನಕ್ಕೆ ಏರಿದ್ದಾರೆ. ಬೌಲಿಂಗ್‌ನಲ್ಲಿ ರವಿ ಬಿಷ್ಣೋಯ್ 41ನೇ ಸ್ಥಾನಕ್ಕೆ ಜಿಗಿದಿದ್ದರೆ, ವರುಣ್ ಚಕ್ರವರ್ತಿ ಗಾಯದ ಸಮಸ್ಯೆಯ ನಡುವೆಯೂ ಟಾಪ್-10ರಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ, ಜಿಂಬಾಬ್ವೆ ಸರಣಿಯಲ್ಲಿ ಸತತ ವಿಫಲರಾದ ಅಭಿಷೇಕ್ ಶರ್ಮಾ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

BM
Bhimasi M Koleppanavar
ಹುಬ್ಬಳ್ಳಿ-ಧಾರವಾಡದ ಮಧ್ಯದ ಶಿವಳ್ಳಿ ನನ್ನ ಹುಟ್ಟೂರು. ಮೈಸೂರಿನಲ್ಲಿ ಎಂ.ಎ. ವ್ಯಾಸಂಗ ಮಾಡುವಾಗಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟೆ. ಹುಬ್ಬಳ್ಳಿಯ ‘ಉದಯವಾಣಿ’ಯಿಂದ ಆರಂಭವಾದ ನನ್ನ ಮಾಧ್ಯಮ ಜರ್ನಿ, ‘ವಿಜಯವಾಣಿ’ ಮತ್ತು ‘ನ್ಯೂಸ್ 18’ ಸಂಸ್ಥೆಗಳ ಮೂಲಕ ಸಾಗಿತು. ಪ್ರಸ್ತುತ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜಕೀಯ, ಕ್ರೈಂ, ಸುದ್ದಿಗಳೇ ಅಚ್ಚು ಮೆಚ್ಚು.
ಕ್ರಿಕೆಟ್
ಕ್ರೀಡೆಗಳು
ಸುದ್ದಿ
ವಿರಾಟ್ ಕೊಹ್ಲಿ
Latest Videos
Recommended Stories
Recommended image1
ICC ODI Rankings ಪ್ರಕಟ ಶುಭ್‌ಮನ್ ಗಿಲ್ ನಂ.1; ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಎಷ್ಟನೇ ಸ್ಥಾನ?
Recommended image2
ಇಬ್ಬರು ಕೋಚ್ ಟೀಂ ಇಂಡಿಯಾದಿಂದ ಹೊರನಡೆದ ಬೆನ್ನಲ್ಲೇ ಮೌನ ಮುರಿದ ಬಿಸಿಸಿಐ, ಏನಿದು ಕೋಲಾಹಲ?
Recommended image3
ODI ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಶುಭ್‌ಮನ್ ಗಿಲ್! ಟಿ20ಯಲ್ಲಿ 230 ಸ್ಥಾನ ಜಿಗಿದ ವೈಭವ್ ಸೂರ್ಯವಂಶಿ
Related Stories
Recommended image1
Cricket: ಕ್ಯಾನ್ಸರ್ ಗೆದ್ದ ಕಷ್ಟ, ತಂದೆಯ ಮೌನ ಸಂದೇಶ; ಭಾವನಾತ್ಮಕ ಹೋರಾಟದ ಮೂಲಕ ಟೀಮ್ ಇಂಡಿಯಾ ಬಾಗಿಲು ತಟ್ಟಿದ ಹುಡುಗ!
Recommended image2
Cricket: ಶ್ರೇಯಸ್ ಅಯ್ಯರ್ ಸೇರಿ 8 ಆಟಗಾರರು ಟೀಮ್ ಇಂಡಿಯಾದಿಂದ ಔಟ್! ಕಾರಣವೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved