MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಆಪ್ತ ಸ್ನೇಹಿತನ ಮೃತದೇಹ ಹೊತ್ತು ಕಣ್ಣೀರು ಇಟ್ಟ ರಶೀದ್ ಖಾನ್.. ಫೋಟೋಗಳು

ಆಪ್ತ ಸ್ನೇಹಿತನ ಮೃತದೇಹ ಹೊತ್ತು ಕಣ್ಣೀರು ಇಟ್ಟ ರಶೀದ್ ಖಾನ್.. ಫೋಟೋಗಳು

ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಪೂರ್ ಜುಲೈ 7ರಂದು ಕೊನೆಯುಸಿರೆಳೆದಿದ್ದರು. ವಿಧಿಯ ವೈಪರೀತ್ಯವೆಂದರೆ, ಅವರ ಜನ್ಮದಿನದಂದೇ ಪಾರ್ಥಿವ ಶರೀರ ಕಾಬೂಲ್‌ಗೆ ತಲುಪಿತು. ಕುಟುಂಬಸ್ಥರು ಮತ್ತು ಸಹ ಆಟಗಾರರು ಮೃತದೇಹವನ್ನು ಕಂಡು ಆಕ್ರಂದನ ಮುಗಿಲು ಮುಟ್ಟಿತು.

2 Min read
Author : Ganesh Mabla Gowda
Published : Jul 09 2026, 09:39 AM IST
Share this Photo Gallery
  • FB
  • TW
  • Linkdin
  • Whatsapp
15
ಹುಟ್ಟುಹಬ್ಬದಂದೇ ಬಂದ ಶವಪೆಟ್ಟಿಗೆ!
Image Credit : c.com

ಹುಟ್ಟುಹಬ್ಬದಂದೇ ಬಂದ ಶವಪೆಟ್ಟಿಗೆ!

ಕಾಬೂಲ್: ವಿಧಿಯ ಆಟ ಯಾರೂ ಬಲ್ಲರು? ಸಂಭ್ರಮಿಸಬೇಕಿದ್ದ ದಿನವೇ ಸೂತಕದ ಛಾಯೆ ಆವರಿಸಿದೆ. ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ದಿಗ್ಗಜ ವೇಗಿ ಶಾಪೂರ್ ಜದ್ರಾನ್ ಅವರ ಅಂತ್ಯಕ್ರಿಯೆ ಅತೀವ ನೋವಿನ ನಡುವೆ ನಡೆದಿದೆ. ಜೀವನದ ಹೋರಾಟದಲ್ಲಿ ಗೆದ್ದಿದ್ದ ಈ ವೀರ, ಸಾವಿನ ಮುಂದೆ ಮಂಡಿಯೂರಿರುವುದು ಇಡೀ ಕ್ರಿಕೆಟ್ ಲೋಕವನ್ನೇ ಕಣ್ಣೀರಲ್ಲಿ ಮುಳುಗಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮುಗಿಲು ಮುಟ್ಟಿದ ಆಕ್ರಂದನ
Image Credit : c.com

ಮುಗಿಲು ಮುಟ್ಟಿದ ಆಕ್ರಂದನ

ಜುಲೈ 8 ಶಾಪೂರ್ ಜದ್ರಾನ್ ಅವರ 39ನೇ ಹುಟ್ಟುಹಬ್ಬ. ಮನೆಯವರೆಲ್ಲಾ ಸಂಭ್ರಮದ ಸಿದ್ಧತೆಯಲ್ಲಿದ್ದರೆ, ಅತ್ತ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಪೂರ್ ಜುಲೈ 7ರಂದು ಕೊನೆಯುಸಿರೆಳೆದಿದ್ದರು. ವಿಧಿಯ ವೈಪರೀತ್ಯವೆಂದರೆ, ಅವರ ಜನ್ಮದಿನದಂದೇ ಅವರ ಪಾರ್ಥಿವ ಶರೀರ ಕಾಬೂಲ್‌ಗೆ ತಲುಪಿತು. ಕೇಕ್ ಕತ್ತರಿಸಿ ಸಂಭ್ರಮಿಸಬೇಕಿದ್ದ ದಿನವೇ ಕುಟುಂಬಸ್ಥರು ಮತ್ತು ಸಹ ಆಟಗಾರರು ಅವರ ಮೃತದೇಹವನ್ನು ಕಂಡು ಆಕ್ರಂದನ ಮುಗಿಲು ಮುಟ್ಟಿತು.

Related Articles

Related image1
ನಂಬಿಕೆ ಹುಸಿ ಮಾಡಿರುವ ಮೂರು ರತ್ನಗಳು.. RCBಯಿಂದ ಮೂವರಿಗೆ ಗೇಟ್‌ಪಾಸ್?
Related image2
ಅಯ್ಯರ್, ಗಂಭೀರ್ ಗೆ ಮತ್ತೊಂದು ಮುಖಭಂಗ! ಟೀಂ ಇಂಡಿಯಾ ಸೋಲಿಗೆ ಇಲ್ಲಿದೆ 5 ಕಾರಣಗಳು
35
ಮೃತದೇಹಕ್ಕೆ ಹೆಗಲು ಕೊಟ್ಟು ಕಣ್ಣೀರಿಟ್ಟ ರಶೀದ್ ಖಾನ್
Image Credit : c.com

ಮೃತದೇಹಕ್ಕೆ ಹೆಗಲು ಕೊಟ್ಟು ಕಣ್ಣೀರಿಟ್ಟ ರಶೀದ್ ಖಾನ್

ಕಾಬೂಲ್ ವಿಮಾನ ನಿಲ್ದಾಣಕ್ಕೆ ಶಾಪೂರ್ ಪಾರ್ಥಿವ ಶರೀರ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು ಹಾಗೂ ಕ್ರಿಕೆಟಿಗರ ಕಣ್ಣೀರ ಕೋಡಿ ಹರಿಯಿತು. ಅಫ್ಘಾನಿಸ್ತಾನದ ಸ್ಟಾರ್ ಆಟಗಾರ ರಶೀದ್ ಖಾನ್ ತಮ್ಮ ಹಿರಿಯ ಸಹೋದರನಂತಿದ್ದ ಶಾಪೂರ್ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಅತ್ತರು. ಅಷ್ಟೇ ಅಲ್ಲದೆ, ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ತಾವೇ ಮುಂದೆ ನಿಂತು ಶಾಪೂರ್ ಅವರ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸಾಗಿದರು. ವಿಶ್ವದ ಶ್ರೇಷ್ಠ ಸ್ಪಿನ್ನರ್ ತನ್ನ ಆಪ್ತ ಗೆಳೆಯನ ಶವಪೆಟ್ಟಿಗೆಯನ್ನು ಹೊತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸುತ್ತಿವೆ.

45
ದೆಹಲಿಯಲ್ಲಿ ಹೋರಾಡಿ ಸೋತ 'ವೇಗದ ಸರದಾರ'
Image Credit : c.com

ದೆಹಲಿಯಲ್ಲಿ ಹೋರಾಡಿ ಸೋತ 'ವೇಗದ ಸರದಾರ'

ರೋಗನಿರೋಧಕ ಶಕ್ತಿಗೆ (Immune System) ಸಂಬಂಧಿಸಿದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಶಾಪೂರ್ ಅವರು ದೆಹಲಿ-ಎನ್‌ಸಿಆರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾರತದ ನೆಲದಲ್ಲಿ ಕೊನೆಯುಸಿರೆಳೆದ ಇವರು, ತಮ್ಮ ಕೆರಿಯರ್‌ನಲ್ಲಿ ಭಾರತದ ದಿಗ್ಗಜರಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರಂತಹ ಘಟಾನುಘಟಿಗಳ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಎತ್ತರದ ನಿಲುವು, ಹಾರುವ ಉದ್ದನೆಯ ಕೂದಲು ಮತ್ತು ಬೆಂಕಿಯಂತಹ ವೇಗದ ಬೌಲಿಂಗ್‌ಗೆ ಇವರು ಹೆಸರುವಾಸಿಯಾಗಿದ್ದರು.

55
ಅಂತಿಮಯಾತ್ರೆ
Image Credit : c.com

ಅಂತಿಮಯಾತ್ರೆ

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ನೇತೃತ್ವದಲ್ಲಿ ಗುರುವಾರ ಕಾಬೂಲ್‌ನ ಈದ್ಗಾ ಮಸೀದಿಯಲ್ಲಿ ಅಂತಿಮ ಪ್ರಾರ್ಥನೆ ನಡೆದಿದೆ. ನಂತರ ಮರಂಜನ್ ಹಿಲ್ ಸ್ಮಶಾನದಲ್ಲಿ ಅವರನ್ನು ಸಕಲ ಗೌರವಗಳೊಂದಿಗೆ ಸುಪುರ್ದೆ-ಎ-ಖಾಕ್ (ಅಂತ್ಯಕ್ರಿಯೆ) ಮಾಡಲಾಗಿದೆ. ಅಫ್ಘಾನ್ ಕ್ರಿಕೆಟ್ ತಂಡ ಬೆಳೆದು ನಿಲ್ಲಲು ಭದ್ರ ಬುನಾದಿ ಹಾಕಿದ್ದ ಶಾಪೂರ್, ಇಂದು ದೈಹಿಕವಾಗಿ ಇಲ್ಲದಿರಬಹುದು. ಆದರೆ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿರುವ ರಶೀದ್ ಖಾನ್‌ರಂತಹ ಆಟಗಾರರು ಪ್ರತಿ ವಿಕೆಟ್ ಪಡೆದಾಗಲೂ ಶಾಪೂರ್ ನೆನಪಾಗುತ್ತಲೇ ಇರುತ್ತಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GM
Ganesh Mabla Gowda
ಕ್ರಿಕೆಟ್
ಕ್ರೀಡೆಗಳು
ಸುದ್ದಿ
ನ್ಯೂಸ್‌ ರೌಂಡ್‌ಅಪ್

Latest Videos
Recommended Stories
Recommended image1
IND vs ENG: ಟೀಂ ಇಂಡಿಯಾ ಹೆಡ್‌ ಕೋಚಿಂದ್ ಬಿಗ್‌ ಮೇಸೇಜ್‌; ವೈಭವ್‌ ಸೇರಿ ಇನ್ನೋರ್ವಗೆ ಶಾಕ್‌? ಇನ್ನಿಬ್ಬರಿಗೆ ಮಾಡು ಇಲ್ಲವೇ, ಮಡಿ!
Recommended image2
Cricket: 76ಕ್ಕೆ ಆಲೌಟ್, ಗಂಭೀರ್ ಎದುರೇ ಆಕ್ರೋಶ; ವಿಡಿಯೋ ವೈರಲ್! ಇಂಗ್ಲೆಂಡ್‌ನಲ್ಲಿ ಗೌತಿಗೆ ತೀವ್ರ ಮುಖಭಂಗ!
Recommended image3
ಸೌರವ್ ಗಂಗೂಲಿ ₹40 ಕೋಟಿ ಬಂಗಲೆಯಲ್ಲಿದೆ 48 ರೂಮ್‌ಗಳು, ವಾಲ್ ಆಫ್ ಫೇಮ್ ಮತ್ತೆ ಕ್ರಿಕೆಟ್ ಪಿಚ್!
Related Stories
Recommended image1
ನಂಬಿಕೆ ಹುಸಿ ಮಾಡಿರುವ ಮೂರು ರತ್ನಗಳು.. RCBಯಿಂದ ಮೂವರಿಗೆ ಗೇಟ್‌ಪಾಸ್?
Recommended image2
ಅಯ್ಯರ್, ಗಂಭೀರ್ ಗೆ ಮತ್ತೊಂದು ಮುಖಭಂಗ! ಟೀಂ ಇಂಡಿಯಾ ಸೋಲಿಗೆ ಇಲ್ಲಿದೆ 5 ಕಾರಣಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved