- Home
- Sports
- Cricket
- Ajinkya Rehane: ಕಾಡಿದ್ದು ವಯಸ್ಸಲ್ಲ, ಬಿಸಿಸಿಐ ಒತ್ತಡವೂ ಅಲ್ಲ; ಕ್ರಿಕೆಟ್‌ಗೆ ರಹಾನೆ ಗುಡ್‌ಬೈ ಹಿಂದಿದೆ ಬೇರೆಯದೇ ಟ್ವಿಸ್ಟ್!
Ajinkya Rehane: ಕಾಡಿದ್ದು ವಯಸ್ಸಲ್ಲ, ಬಿಸಿಸಿಐ ಒತ್ತಡವೂ ಅಲ್ಲ; ಕ್ರಿಕೆಟ್‌ಗೆ ರಹಾನೆ ಗುಡ್‌ಬೈ ಹಿಂದಿದೆ ಬೇರೆಯದೇ ಟ್ವಿಸ್ಟ್!
ಕ್ರಿಕೆಟ್‌ಗೆ ವಿದಾಯ ಹೇಳಿರುವ ಅಜಿಂಕ್ಯ ರಹಾನೆ ಅವರ ಈ ನಿರ್ಧಾರದ ಹಿಂದೆ ಬಿಸಿಸಿಐ ಅಥವಾ ವಯಸ್ಸಿನ ಕಾರಣಕ್ಕಿಂತ, ಕೆಕೆಆರ್ ಫ್ರಾಂಚೈಸಿಯ ನಿರ್ಧಾರ ಪ್ರಮುಖ ಪಾತ್ರ ವಹಿಸಿದೆ. ಮುಂಬರುವ ಐಪಿಎಲ್‌ನಲ್ಲಿ ಕಡೆಗಣನೆಗೆ ಒಳಗಾಗುವ ಬದಲು, ಗೌರವಯುತವಾಗಿ ನಿವೃತ್ತಿ ಹೊಂದುವ ಹಾದಿಯನ್ನು ಅವರು ಆಯ್ದುಕೊಂಡಿದ್ದಾರೆ.

ಸಾಲು-ಸಾಲು ಕಷ್ಟ!
ಸಾಲು-ಸಾಲು ಕಷ್ಟಗಳನ್ನು ಕಂಡು ಮೈದಾನದಲ್ಲಿ ಬೆವರು ಸುರಿಸಿ, ಶ್ರಮವನ್ನೆ ಜೀವಾಳವಾಗಿಸಿಕೊಂಡು, ತಮ್ಮ ಪ್ರತಿಭೆ ಮೂಲಕ ಗುರುತಿಸಿಕೊಂಡ ಹಲವಾರು ಪ್ರತಿಭೆಗಳಿಗೆ ಸಂಘರ್ಷ ಬೇತಾಳನಂತೆ ಬೆನ್ನಿಗೆ ಇರುತ್ತದೆ. ಇವರಿಗೆ ಕೊಹ್ಲಿ, ಶರ್ಮಾ, ಧೋನಿಗೆ ಸಿಕ್ಕಷ್ಟು ಅವಕಾಶ ಸಿಕ್ಕಿಸಿರುವುದಿಲ್ಲ, ಅಂಥವರ ಲಿಸ್ಟ್‌ಲ್ಲಿಯೇ ರೆಹಾನೆ ಬರ್ತಾರೆ. ಇದ್ದ ಅವಕಾಶವನ್ನೆ ಬಳಿಸಿಕೊಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ. ಆದರೆ ಅದಕ್ಕೆ ಕಾರಣ ಬಿಸಿಸಿಐ ಮತ್ತು ವಯಸ್ಸಿನ ಕಾರಣವಲ್ಲವಂತೆ, ಹಾಗಾದರೆ ನೈಜ್ ಕಾರಣ ಏನು? ಎನ್ನುವುದನ್ನು ನೋಡೋಣ ಬನ್ನಿ.
ಕೆಕೆಆರ್ (KKR) ವಹಿಸಲಿಲ್ವಾ ಆಸಕ್ತಿ?
ಐಪಿಎಲ್ ವಲಯದ ಒಳಗಿನ ಮೂಲಗಳ ಪ್ರಕಾರ ಮತ್ತು ಪ್ರಮುಖ ಕ್ರಿಕೆಟ್ ವಿಶ್ಲೇಷಣೆಯಂತೆ, ರಹಾನೆ ಅವರ ಈ ದಿಢೀರ್ ನಿರ್ಧಾರದ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಒಂದು ಪ್ರಮುಖ ನಿರ್ಧಾರ ಅಡಗಿದೆ. ಕಳೆದ ಸೀಸನ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ರಹಾನೆ ಅವರನ್ನು ಮುಂಬರುವ ಐಪಿಎಲ್ ಆವೃತ್ತಿಗಾಗಿ ನಾಯಕರನ್ನಾಗಿ ಮುಂದುವರಿಸಲು ಅಥವಾ ತಂಡದಲ್ಲೇ ಉಳಿಸಿಕೊಳ್ಳಲು ಕೆಕೆಆರ್ ಮ್ಯಾನೇಜ್‌ಮೆಂಟ್ ಆಸಕ್ತಿ ಹೊಂದಿರಲಿಲ್ಲ ಎನ್ನಲಾಗಿದೆ.
ರೆಹಾನಿಗೆ ತಲುಪಿತ್ತು ಆ ನ್ಯೂಸ್!
ಪ್ರಸ್ತುತ ಫ್ರಾಂಚೈಸಿಯು ಯುವ ಮತ್ತು ಆಕ್ರಮಣಕಾರಿ ಆಟಗಾರರತ್ತ ಹೆಚ್ಚು ಗಮನ ಹರಿಸುತ್ತಿದ್ದು, ಈಗಾಗಲೇ ಬೇರೆ ತಂಡದಿಂದ ದೊಡ್ಡ ಮಟ್ಟದ ಆಟಗಾರನೊಬ್ಬನನ್ನು ಟ್ರೇಡ್ ಮಾಡಿಕೊಳ್ಳಲು ತೆರೆಮರೆಯಲ್ಲಿ ಮಾತುಕತೆ ನಡೆಸುತ್ತಿದೆ. ಮುಂಬರುವ ಸೀಸನ್‌ನಲ್ಲಿ ಆ ಹೊಸ ಆಟಗಾರನಿಗೆ ನಾಯಕತ್ವದ ಪಟ್ಟ ಕಟ್ಟಲು ಮಾಲೀಕರು ಯೋಜನೆ ರೂಪಿಸಿದ್ದಾರೆ. ಈ ಬದಲಾವಣೆಯ ಗಾಳಿ ರಹಾನೆಗೆ ಮುಂಚಿತವಾಗಿಯೇ ತಲುಪಿತ್ತು.
ಗೌರವಯುತ ವಿದಾಯದ ಹಾದಿ!
ರಹಾನೆಗೆ ಈಗ 38 ವರ್ಷ. ಭಾರತ ಟೆಸ್ಟ್ ತಂಡದಿಂದಲೂ ಅವರು 2023ರ ಜುಲೈನಿಂದಲೇ ಹೊರಗುಳಿದಿದ್ದರು. ಮುಂಬರುವ ಐಪಿಎಲ್ ಹರಾಜಿನಲ್ಲಿ ಕಡೆಗಣನೆಗೆ ಒಳಗಾಗುವುದು, ಅಥವಾ ಯಾವುದೇ ತಂಡಗಳು ತನ್ನನ್ನು ಖರೀದಿಸದೆ ಅನ್‌ಸೋಲ್ಡ್ ಆಗಿ ಉಳಿಯುವುದಕ್ಕಿಂತ, ತಾವೇ ಸ್ವತಃ ಗೌರವಯುತವಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದು ಸೂಕ್ತ ಎಂದು ರಹಾನೆ ಭಾವಿಸಿದ್ದಾರೆ. ಒಬ್ಬ ಆಟಗಾರನಾಗಿ ಅಂಗಳದಲ್ಲಿ ಗಳಿಸಿದ ಅಪಾರ ಗೌರವಕ್ಕೆ ಯಾವುದೇ ಧಕ್ಕೆ ಬಾರದಂತೆ ನಿರ್ಗಮಿಸುವುದು ರಹಾನೆಯಂತಹ ಜಂಟಲ್‌ಮನ್ ಕ್ರಿಕೆಟರ್‌ನ ಶೈಲಿಗೆ ಸೂಕ್ತವಾಗಿತ್ತು.
ಪ್ರಯಾಣದ ಸುಲಭವಾಗಿರಲಿಲ್ಲ!
ರಹಾನೆಯವರ ಈ ಪಯಣ ಸುಲಭದ್ದಾಗಿರಲಿಲ್ಲ. ಮುಂಬೈನ ಬಡತನದ ರಸ್ತೆಗಳಲ್ಲಿ ತಾಯಿ ಕಿಟ್‌ಬ್ಯಾಗ್ ಹೊತ್ತು 8 ಕಿ.ಮೀ ನಡೆಸಿಕೊಂಡು ಕರೆದೊಯ್ಯುತ್ತಿದ್ದ ದಿನಗಳಿಂದ ಹಿಡಿದು, ಭಾರತ ತಂಡದ ಹಂಗಾಮಿ ನಾಯಕನಾಗಿ ವಿದೇಶಿ ಮಣ್ಣಿನಲ್ಲಿ ತ್ರಿರಂಗ ಧ್ವಜ ಹಾರಿಸುವವರೆಗೆ ಅವರದ್ದು ರೋಚಕ ಪಯಣ. ಕಷ್ಟದ ದಿನಗಳಲ್ಲಿ ತಾಯಿಗೆ ಬೆನ್ನೆಲುಬಾಗಿ ನಿಂತು, ರಹಾನೆ ಬೆಳೆಯಲು ಸಾಥ್ ನೀಡಿದ್ದು ಅವರ ಕುಟುಂಬದ ಶ್ರಮ ಮತ್ತು ಶಿಸ್ತು. ಆಟೋಗೆ ದುಡ್ಡಿಲ್ಲದೆ ಕಾಲ್ನಡಿಗೆಯಲ್ಲೇ ದಿನದ ಪಯಣ ಶುರು ಮಾಡುತ್ತಿದ್ದ ಆ ಹುಡುಗ, ಮುಂದೆ ಭಾರತ ಕ್ರಿಕೆಟ್‌ನ 'ಮಹಾಗೋಡೆ'ಯಾಗಿ, ಕೋಟಿ ಕೋಟಿ ಅಭಿಮಾನಿಗಳ ಹೃದಯ ಗೆದ್ದದ್ದು ಒಂದು ಪವಾಡವೇ ಸರಿ.
ಯುವ ಪಡೆಯ ಯುಗ ಮತ್ತು ರಹಾನೆ ನಿರ್ಗಮನ!
ಇಂದಿನ ಕ್ರಿಕೆಟ್ ಜಗತ್ತು ವೇಗವಾಗಿ ಬದಲಾಗುತ್ತಿದೆ. ಐಪಿಎಲ್‌ನಂತಹ ಮೆಗಾ ಟೂರ್ನಿಗಳು ಈಗ ಯುವ ರಕ್ತ ಮತ್ತು ಅತಿ ಆಕ್ರಮಣಕಾರಿ ಶೈಲಿಯ ಆಟಕ್ಕೆ ಆದ್ಯತೆ ನೀಡುತ್ತಿವೆ. ಈ ಹಂತದಲ್ಲಿ, ಕಾಲದ ಕರೆಯನ್ನು ಅರ್ಥಮಾಡಿಕೊಂಡ ರಹಾನೆ, ತಮ್ಮ ಭವಿಷ್ಯ ಮತ್ತು ವಯಸ್ಸನ್ನು ಪರಿಗಣಿಸಿ ಈ ಒಟ್ಟಾರೆ ನಿರ್ಧಾರಕ್ಕೆ ಬಂದಿದ್ದಾರೆ. ಅಮ್ಮನ ತ್ಯಾಗದಿಂದ ಶುರುವಾದ ಆ 8 ಕಿಲೋಮೀಟರ್‌ನ ಸಣ್ಣ ಹೆಜ್ಜೆ, ಇಂದು ಜಗತ್ತಿನಾದ್ಯಂತ ಲಕ್ಷಾಂತರ ಯುವಕರಿಗೆ ಸ್ಪೂರ್ತಿಯಾಗಿದೆ. ಅಂಗಳದಲ್ಲಿ ರಹಾನೆಯ ಬ್ಯಾಟಿಂಗ್ ಅಥವಾ ನಾಯಕತ್ವ ಇನ್ಮುಂದೆ ಕಾಣ ಸಿಗದಿರಬಹುದು, ಆದರೆ ಕೆಕೆಆರ್ ಹಿಂಜರಿದರೂ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅವರ ಹೆಸರನ್ನು ಎಂದಿಗೂ ಅಳಿಸಿಹಾಕಲು ಸಾಧ್ಯವಿಲ್ಲ!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

