MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ವಿವಾಹಿತ ನಿರ್ದೇಶಕರೊಂದಿಗೆ ಲಿಂಕಪ್‌ ಊರ್ಮಿಳಾ ವೃತ್ತಿ ಜೀವನವನ್ನೇ ಕಸಿಯಿತು!

ವಿವಾಹಿತ ನಿರ್ದೇಶಕರೊಂದಿಗೆ ಲಿಂಕಪ್‌ ಊರ್ಮಿಳಾ ವೃತ್ತಿ ಜೀವನವನ್ನೇ ಕಸಿಯಿತು!

ಊರ್ಮಿಳಾ ಮಾತೋಂಡ್ಕರ್  (Urmila Matondkar) ಹೆಸರು ಬಂದಾಗಲೆಲ್ಲ ‘ರಂಗೀಲಾ’ ನೆನಪಾಗುತ್ತದೆ. ಈ ಸಿನಿಮಾದಲ್ಲಿನ ಊರ್ಮಿಳಾರ  ಅಭಿನಯದ ಜೊತೆಗೆ ಸೆಕ್ಸಿ ಲುಕ್‌ ಇಂದಿಗೂ ಜನರ ಮನಸ್ಸಿನಲ್ಲಿಅಚ್ಚಳಿಯದೆ ಉಳಿದಿದೆ. 4 ಫೆಬ್ರವರಿ 1974 ರಂದು ಮುಂಬೈನ ಮರಾಠಿ ಹಿಂದೂ ಕುಟುಂಬದಲ್ಲಿ ಜನಿಸಿದ ಹುಡುಗಿ, ತನ್ನ ಬಾಲ್ಯದಲ್ಲೇ ಸಿನಿಮಾ ಜಗತ್ತಿನಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ್ದರು. ನಟಿಯ ಜೀವನಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ಘಟನೆಗಳು ಇಲ್ಲಿವೆ.

2 Min read
Author : Contributor Asianet | Asianet News
| Updated : Feb 04 2022, 05:55 PM IST
Share this Photo Gallery
  • FB
  • TW
  • Linkdin
  • Whatsapp
111

ಊರ್ಮಿಳಾ ಮಾತೋಂಡ್ಕರ್ ಬಾಲ್ಯದಿಂದಲೂ ನಟನೆಯಲ್ಲಿ ಮುಂದು. 3  ವಯಸ್ಸಿನಲ್ಲಿ, ಅವರು ಚಲನಚಿತ್ರ ಜಗತ್ತಿನಲ್ಲಿ ತಮ್ಮ ಮೊದಲ ಹೆಜ್ಜೆಗಳನ್ನು ಹಾಕಿದರು. 1977ರಲ್ಲಿ ‘ಕರ್ಮ’ ಚಿತ್ರದಲ್ಲಿ ಬಾಲ ಕಲಾವಿದರಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.

211

1983 ರಲ್ಲಿ ಬಿಡುಗಡೆಯಾದ 'ಮಾಸೂಮ್' ಚಿತ್ರದಿಂದ ಅವರಿಗೆ ದೊಡ್ಡ ಮನ್ನಣೆ ಸಿಕ್ಕಿತು. ಇದರಲ್ಲಿ ಅವರ ಮೇಲೆ ಚಿತ್ರೀಕರಿಸಿದ ‘ಲಕ್ಡಿ ಕಿ ಕಥಿ, ಕಥಿ ಪೆ ಘೋಡಾ’ ಹಾಡು ಇಂದಿಗೂ ಫೇಮಸ್.
 

311

46ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟಿ ಮಲಯಾಳಂನ ‘ಚಾಣಕ್ಯನ್’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅವರ ಮೊದಲ ಚಿತ್ರ 1991 ರಲ್ಲಿ ಬಿಡುಗಡೆಯಾದ ನರಸಿಂಹ. ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದ್ದವು. 

411

1995 ರ ರಾಮ್ ಗೋಪಾಲ್ ವರ್ಮಾ ಅವರ ರಂಗೀಲಾ ಸಿನಿಮಾದ ಮೂಲಕ  ಊರ್ಮಿಳಾ ಮಾತೋಂಡ್ಕರ್  ಜನರ ಹೃದಯವನ್ನು ಆಳಲು ಪ್ರಾರಂಭಿಸಿದರು ಮತ್ತು ರಂಗೀಲಾ ಗರ್ಲ್‌ ಎಂದೇ ಫೇಮಸ್‌ ಆದರು.     

511

ರಾಮ್ ಗೋಪಾಲ್ ವರ್ಮಾ ಊರ್ಮಿಳಾ ಮಾತೋಂಡ್ಕರ್ ಅವರನ್ನು ಹುಚ್ಚರಂತೆ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತದೆ ಮತ್ತು  ಅವರ ಜೊತೆ ಮಾತ್ರ ಸಿನಿಮಾ ಮಾಡುತ್ತಿದ್ದರು. 15 ಕೊಠಡಿಗಳಿರುವ ತನ್ನ ಕಚೇರಿಗೆ ನಟಿಯ ಹೆಸರನ್ನೇ ಇಟ್ಟಿದ್ದರು. ಆಗ ಊರ್ಮಿಳಾ ಮತ್ತು ರಾಮ್ ಗೋಪಾಲ್ ವರ್ಮಾ ಸಂಬಂಧ ಸುದ್ದಿಯಲ್ಲಿತ್ತು.

611

ರಾಮ್ ಗೋಪಾಲ್ ವರ್ಮಾ ಈಗಾಗಲೇ ಮದುವೆಯಾಗಿದ್ದರು. ಊರ್ಮಿಳಾ ಜೊತೆಗಿನ ಸಂಪರ್ಕದ ನಂತರ, ಅವರ ವೈವಾಹಿಕ ಜೀವನವು ಹದಗೆಡಲು ಪ್ರಾರಂಭಿಸಿತು. ಒಮ್ಮೆ ಊರ್ಮಿಳಾ ಅವರಿಗೆ ರಾಮ್ ಗೋಪಾಲ್ ವರ್ಮಾ ಅವರ ಪತ್ನಿ ಕೆನ್ನೆಗೆ ಹೊಡೆದರು ಎಂದು ಹೇಳಲಾಗುತ್ತದೆ. ಇದರಿಂದ ಕೋಪಗೊಂಡ ನಿರ್ದೇಶಕರು ಪತ್ನಿಗೆ ವಿಚ್ಛೇದನ ನೀಡಿದರು.
 

711

ಆಗ ಚಿತ್ರರಂಗದ ಹಲವು ನಿರ್ದೇಶಕರು ರಾಮಗೋಪಾಲ್ ಜೊತೆ ಮನಸ್ತಾಪ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದರಿಂದಾಗಿ ಊರ್ಮಿಳಾ ಅವರ ಸಿನಿಮಾಗೆ ಯಾರೂ ಸಹಿ ಹಾಕಿರಲಿಲ್ಲ.ಊರ್ಮಿಳಾ ರಾಮ್ ಗೋಪಾಲ್ ವರ್ಮಾ ಜೊತೆ ಒಟ್ಟು 13 ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಕ್ರಮೇಣ ಇಬ್ಬರ ನಡುವಿನ ಅಂತರ ಹೆಚ್ಚಾಗತೊಡಗಿತು. 

811
ರಂಗೀಲಾ ಸಿನಿಮಾಕ್ಕೆ ಮೊದಲು, ರಾಮ್‌ಗೋಪಾಲ್ ವರ್ಮಾ 1992ರ ತೆಲುಗು ಚಿತ್ರ ಆಂಥಮ್, ಶ್ರೋಹಿ 1993ರಲ್ಲಿ 'ಗಾಯಮ್' ಸಿನಿಮಾದಲ್ಲಿ ಉರ್ಮಿಳಾಗೆ ಅವಕಾಶ ನೀಡಿದರು. ಉರ್ಮಿಳಾ ಬಗ್ಗೆ RVGಗೆ ತುಂಬಾ ಹುಚ್ತಿತ್ತು. ಅವರು ತಮ್ಮ ಪ್ರತಿಯೊಂದೂ ಚಿತ್ರದಲ್ಲಿಯೂ ಊರ್ಮಿಳಾರನ್ನು ತೆಗೆದುಕೊಳ್ಳುತ್ತಿದ್ದರು.

ರಂಗೀಲಾ ಸಿನಿಮಾಕ್ಕೆ ಮೊದಲು, ರಾಮ್‌ಗೋಪಾಲ್ ವರ್ಮಾ 1992ರ ತೆಲುಗು ಚಿತ್ರ ಆಂಥಮ್, ಶ್ರೋಹಿ 1993ರಲ್ಲಿ 'ಗಾಯಮ್' ಸಿನಿಮಾದಲ್ಲಿ ಉರ್ಮಿಳಾಗೆ ಅವಕಾಶ ನೀಡಿದರು. ಉರ್ಮಿಳಾ ಬಗ್ಗೆ RVGಗೆ ತುಂಬಾ ಹುಚ್ತಿತ್ತು. ಅವರು ತಮ್ಮ ಪ್ರತಿಯೊಂದೂ ಚಿತ್ರದಲ್ಲಿಯೂ ಊರ್ಮಿಳಾರನ್ನು ತೆಗೆದುಕೊಳ್ಳುತ್ತಿದ್ದರು.

ರಾಮ್ ಗೋಪಾಲ್ ವರ್ಮಾ ಊರ್ಮಿಳಾ ಅವರನ್ನು ಚಲನಚಿತ್ರಗಳಲ್ಲಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ ನಂತರ, ಉದ್ಯಮದಲ್ಲಿ ಯಾರೂ ಅವರನ್ನು ಕೆಲಸಕ್ಕಾಗಿ ಸಂಪರ್ಕಿಸಲಿಲ್ಲ. ಈ ಕಾರಣದಿಂದಾಗಿ ಯಶಸ್ವಿ ನಟಿಯ ವೃತ್ತಿಜೀವನವು ಮುಳುಗಿತು.

911

ಊರ್ಮಿಳಾ ಅವರ ಯಶಸ್ವಿ ಚಲನಚಿತ್ರಗಳಲ್ಲಿ ಸತ್ಯ, ಜುದಾಯಿ, ಸುಂದರ್, ಜಂಗಲ್, ಮಸ್ತ್, ಕೌನ್, ಭೂತ್, ಪ್ಯಾರ್ ತುನೆ ಕ್ಯಾ ಕಿಯಾ, ಏಕ್ ಹಸೀನಾ ಥಿ, ಪಿಂಜಾರ್ ಮತ್ತು ಮೈನೆ ಗಾಂಧಿ ಕೊ ನಹೀ ಮಾರಾ ಸೇರಿವೆ.
 

1011

ಊರ್ಮಿಳಾ ಸಿನಿಮಾದಿಂದ ದೂರವಾದ ನಂತರ ಕಾಶ್ಮೀರಿ ಮಾಡೆಲ್ ಮತ್ತು ಉದ್ಯಮಿ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು 2016 ರಲ್ಲಿ ವಿವಾಹವಾದರು. ಆಗ ಊರ್ಮಿಳಾ ಅವರಿಗೆ 42 ವರ್ಷ, ಮೊಹ್ಸಿನ್ ಅವರಿಗಿಂತ 9 ವರ್ಷ ಚಿಕ್ಕವರಾಗಿದ್ದರು. ಅವರ ಕೊನೆಯ ಬಾರಿಗೆ 2018 ರಲ್ಲಿ ಬಿಡುಗಡೆಯಾದ ಬ್ಲ್ಯಾಕ್‌ಮೇಲ್, ಸಿನಿಮಾದಲ್ಲಿ ಐಟಂ ನಂಬರ್‌ ಮಾಡಿದರು.

1111
ಊರ್ಮಿಳಾ ಬಹಳ ಸಮಯದಿಂದ ಸಿನಿಮಾದಿಂದ ದೂರವಾಗಿದ್ದಾರೆ. ಅವರು ಕೊನೆಯ ಬಾರಿಗೆ 2018ರಲ್ಲಿ 'ಬ್ಲ್ಯಾಕ್ಮೇಲ್' ನಲ್ಲಿ ಐಟಂ ನಂಬರ್‌ 'ಬೆವಾಫಾ ಬ್ಯೂಟಿ'ಯಲ್ಲಿ ಕಾಣಿಸಿಕೊಂಡರು.

ಊರ್ಮಿಳಾ ಬಹಳ ಸಮಯದಿಂದ ಸಿನಿಮಾದಿಂದ ದೂರವಾಗಿದ್ದಾರೆ. ಅವರು ಕೊನೆಯ ಬಾರಿಗೆ 2018ರಲ್ಲಿ 'ಬ್ಲ್ಯಾಕ್ಮೇಲ್' ನಲ್ಲಿ ಐಟಂ ನಂಬರ್‌ 'ಬೆವಾಫಾ ಬ್ಯೂಟಿ'ಯಲ್ಲಿ ಕಾಣಿಸಿಕೊಂಡರು.

ಸಿನಿಮಾ ರಂಗದಿಂದ ದೂರವಾಗಿ ರಾಜಕೀಯಕ್ಕೆ ಕಾಲಿಟ್ಟ ಊರ್ಮಿಳಾ ಅವರು 2019ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತರು. ಆ ನಂತರ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಈಗ ನಟಿ ಶಿವಸೇನೆ ಪಕ್ಷಕ್ಕೆ ಸೇರಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CA
Contributor Asianet
ಬಾಲಿವುಡ್

Latest Videos
Recommended Stories
Recommended image1
ನಟಿ Sai Pallavi ಗೆ Filmfare ತಂದು ಕೊಟ್ಟ ಸಿನಿಮಾಗಳಿವು.. ಮಿಸ್ ಮಾಡ್ದೇ ನೋಡಿ
Recommended image2
ವಿಜಯ್ ಮನದನ್ನೆ ರಶ್ಮಿಕಾರ ಒಟ್ಟೂ ಆಸ್ತಿ ಗುಟ್ಟು ರಟ್ಟಾಯ್ತು.. ಆದ್ರೆ ಈ ಗಂಡ-ಹೆಂಡ್ತಿ ಇದಕ್ಕೂ ಮೀರಿ ಮಾಡ್ತಿರೋದೇನು?!
Recommended image3
ಗಿಲ್ಲಿ ನಟ 'ಟಾಕ್ಸಿಕ್' ಸಿನಿಮಾಗೂ ಎಂಟ್ರಿ.. ರಾಕಿ ಭಾಯ್ ಯಶ್ ಜೊತೆಗೆ ಬಿಗ್ ಬಾಸ್ ವಿನ್ನರ್ ಹವಾ..?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved