ಪೋರ್ನ್ ನಟಿ ಭಾಗ 2; ರೇಪ್ ಬೇರೆ, ಸಂಭೋಗ ಬೇರೆ.. ಫಿಲ್ಟರ್ ಬಿಟ್ಟು ಕಂಗನಾ ಏಟು!
ಮುಂಬೈ(ಸೆ. 17) ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್ ಬಿಸಿಯಾಗಿಯೇ ಇದೆ. ಹೇಳಿಕೆಗಳು, ವಾಕ್ ಸಮರಗಳು ಒಂದಾದ ಮೇಲೆ ಒಂದು ನಡೆಯುತ್ತಲೆ ಇದೆ. ಕಂಗನಾ ರಣಾವತ್ ಮತ್ತು ಊರ್ಮಿಳಾ ನಡುವೆ ಬೆಂಕಿ ಹೊತ್ತಿಕೊಂಡಿದೆ.
ನಟಿ ಊರ್ಮಿಳಾ ಮಾತೋಂಡ್ಕರ್ ನೀಲಿ ಚಿತ್ರಗಳ ನಟಿ ಎಂದು ಕಂಗನಾ ಸಂದರ್ಶನವೊಂದರಲ್ಲಿ ಹೇಳಿದ್ದು ಜ್ವಲಿಸುತ್ತಿದೆ.
ಡ್ರಗ್ಸ್ ಘಾಟಿನ ವಿಚಾರದಲ್ಲಿ ಊರ್ಮಿಳಾ ಮತ್ತು ಕಂಗನಾ ನಡುವೆ ವಾಗ್ವಾದ ಶುರುವಾಗಿದ್ದು, ಈಗ ಇಬ್ಬರೂ ವೈಯಕ್ತಿಕ ನೆಲೆಯಲ್ಲಿ ಕೆಸರು ಎರೆಚಾಟ ಮಾಡಿಕೊಳ್ಳುತ್ತಿದ್ದಾರೆ.
ಶೇ.99ರಷ್ಟು ಬಾಲಿವುಡ್ ಸೆಲೆಬ್ರಿಟಿಗಳು ಮಾದಕ ವಸ್ತು ಸೇವನೆ ಮಾಡುತ್ತಾರೆ ಎಂದು ಕಂಗನಾ ಹೇಳಿದ್ದ ಮಾತಿಗೆ ಊರ್ಮಿಳಾ ವಿರೋಧ ವ್ಯಕ್ತಪಡಿಸಿದ್ದರು.
ಯಾರು ಡ್ರಗ್ಸ್ ಬಳಸುತ್ತಿದ್ದಾರೋ ಅಂಥವರ ಹೆಸರನ್ನು ನೇರವಾಗಿ ಹೇಳಲಿ. ಹಾಗೆ ಮಾಡಿದರೆ ನಾನೇ ಮೊದಲು ಕಂಗನಾಗೆ ಬೆಂಬಲ ನೀಡುತ್ತೇನೆ. ಅವರು ಹೆಸರು, ಯಶಸ್ಸು, ಹಣ ಗಳಿಸಿರುವುದು ಚಿತ್ರರಂಗದಿಂದ ಅದನ್ನು ಉಳಿಸಿಕೊಳ್ಳಬೇಕು, ಇಷ್ಟು ದಿನ ಯಾಕೆ ಸುಮ್ಮನೆ ಇದ್ದೀರಿ ಎಂದು ಊರ್ಮಿಳಾ ಪ್ರಶ್ನೆ ಮಾಡಿದ್ದರು.
ಊರ್ಮಿಳಾ ನನ್ನ ಬಗ್ಗೆ ಏನೇನೋ ಹೇಳಿದ್ದಾರೆ. ನಾನು ಬಿಜೆಪಿ ಪರ ವಕಾಲತ್ತು ಮಾಡುತ್ತೇನೆ ಎಂದಿದ್ದಾರೆ, ಅವರೊಬ್ಬರು ಸಾಫ್ಟ್ ನೀಲಿ ಚಿತ್ರ ತಾರೆ ಎಂದು ಕಂಗನಾ ಹೇಳಿದ್ದರು.
ಕಂಗನಾ ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಟೀಕಾಕಾರರನ್ನು ಕಂಗನಾ ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಊರ್ಮಿಳಾ ನನ್ನನ್ನು ವೇಶ್ಯೆ ಎಂದು ಕರೆದಾಗ ನೀವೆಲ್ಲ ಎಲ್ಲಿ ಇದ್ದಿರಿ, ಮಹಿಳಾವಾದ ಆಗ ನಿಮಗೆ ಕಾಣಿಸಲಿಲ್ಲವೆ ಎಂದು ಕಂಗನಾ ಕಿಡಿ ಕಾರಿದ್ದಾರೆ.
ನಕಲಿ ಮಹಿಳಾವಾದಿಗಳೆ ನಿಮಗೆ ನಾಚಿಕೆಯಾಗಬೇಕು ಎಂದು ಖಾರವಾಗಿ ಹೇಳಿದ್ದಾರೆ.
ಮನುಷ್ಯನ ದೇಹ ಒಂದು ಶರೀರ ಮಾತ್ರ ಅಲ್ಲ, ಇಲ್ಲಿ ಭಾವನೆಗಳಿವೆ, ಯೋಚನೆಗಳಿವೆ.. ಸಿದ್ಧಾಂತಗಳಿವೆ.. ಅತ್ಯಾಚಾರ ಎನ್ನುವುದು ಸಂಭೋಗ ಅಲ್ಲ! ಎಂದು ಠಕ್ಕರ್ ನೀಡಿದ್ದಾರೆ.
ಒಟ್ಟಿನಲ್ಲಿ ಕಂಗನಾ ರವತ್ ಇಡೀ ಬಾಲಿವುಡ್ ಮೇಲೆ ಆಗಾಗ ಚಾಟಿ ಬೀಸುತ್ತಲೇ ಇದ್ದಾರೆ.