ರಂಗೀಲಾ ನಟಿ ಊರ್ಮಿಳಾ ಪ್ರೀತಿಯಲ್ಲಿ ಹುಚ್ಚರಾಗಿದ್ದ ರಾಮ್ ಗೋಪಾಲ್ ವರ್ಮಾ!

First Published Feb 6, 2021, 9:55 AM IST

ಬಾಲಿವುಡ್‌ನಲ್ಲಿ 'ಚಮ್ಮ ಚಮ್ಮಾ ಗರ್ಲ್' ಎಂದು ಪ್ರಸಿದ್ಧಿಯಾದ ಊರ್ಮಿಳಾ ಮಾತೋಂಡ್ಕರ್ ಅವರಿಗೆ 47 ವರ್ಷ. ಫೆಬ್ರವರಿ 4,1974ರಂದು ಮುಂಬೈನಲ್ಲಿ ಜನಿಸಿದ ಉರ್ಮಿಳಾ ಬಾಲ ಕಲಾವಿದೆಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಪ್ರಮುಖ ನಟಿಯಾಗಿ ಊರ್ಮಿಳಾ ಅವರ ಮೊದಲ ಚಿತ್ರ 'ನರಸಿಂಹ', ರಾಮ್ ಗೋಪಾಲ್ ವರ್ಮಾರ 'ರಂಗೀಲಾ' ಮೂಲಕ ಎಲ್ಲರ ಗಮನ ಸೆಳೆದರು. ಒಂದು ಕಾಲದಲ್ಲಿ, ರಾಮ್ ಗೋಪಾಲ್ ಮತ್ತು ಉರ್ಮಿಳಾರ ಸಂಬಂಧದ ಸುದ್ದಿ ತುಂಬಾ ಚರ್ಚೆಯಾಗಿತ್ತು. ರಾಮ್‌ಪ್ರತಿ ಚಿತ್ರದಲ್ಲೂ ಊರ್ಮಿಳಾ ಇರುತ್ತಿದ್ದರು.