ಕೆಲವು ಬೆದರಿಕೆ ಬಂದ ಹಿನ್ನೆಲೆಯಲ್ಲಿ ನನಗೆ ಮುಂಬೈನಲ್ಲಿ ಸುರಕ್ಷಿತೆ ಎನಿಸುವುದಿಲ್ಲ ಎಂದಿದ್ದ ಬಾಲಿವುಡ್‌ ಕ್ವೀನ್‌ ಈಗ ನನ್ನ ಪ್ರೀತಿಯ ನಗರ ಮುಂಬೈ ಎಂದು ಹೇಳಿದ್ದಾರೆ. ಬಾಲಿವುಡ್ ಕ್ವೀನ್‌ನ ಈ ಹೇಳಿಕೆಯನ್ನು ಟೀಕಿಸಿದ್ದಾರೆ ನಟಿ ಊರ್ಮಿಳಾ ಮಾಂಟೋಡ್ಕರ್.

ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರ ಹೋಲಿಸಿದ ಕಂಗನಾ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು. ಮುಂಬೈ ಆಡಳಿತವನ್ನು ತಾಲಿಬಾನ್ ಆಡಳಿತಕ್ಕೆ ಹೋಲಿಸಿಯೂ ಕಂಗನಾ ಮಾಡತನಾಡಿದ್ದರು.

ಹಸಿರು ಸೀರೆಯಲ್ಲಿ ಮಲ್ಲಿಗೆ ಮುಡಿದು ಟ್ರೆಡಿಷನಲ್‌ ಲುಕ್‌ನಲ್ಲಿ ದೇವಸ್ಥಾನಕ್ಕೆ ಹೋದ ಕಂಗನಾ!

ನಟಿ ಹಿಮಾಚಲ ಪ್ರದೇಶದಿಂದ ಮುಂಬೈಗೆ ಸ್ಪೆಷಲ್ ಸೆಕ್ಯುರಿಟಿಯಲ್ಲಿ ಬಂದಾಗಲಂತೂ ಎಲ್ಲರ ಕಣ್ಣು ಕಂಗನಾ ಮೇಲಿತ್ತು. ಆದರೆ ಈಗ ನಟಿ ತಮ್ಮ ನಿಲುವು ಬದಲಾಯಿಸಿ ಮುಂಬೈ ನನ್ನ ಪ್ರೀತಿಯ ನಗರ ಎಂದು ಹೇಳಿದ್ದಾರೆ.

ಸಹೋದರಿ ರಂಗೋಲಿ ಜೊತೆ ಮುಂಬೈಗೆ ಬಂದ ಕಂಗನಾ ಮುಂಬಾ ದೇವಿ ಹಾಗೂ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಕಂಗನಾಳ ಹೇಳಿಕೆಗೆ ನಟಿ, ರಾಜಕಾರಣಿ ಊರ್ಮಿಳಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಂಗೀ ನಿನಗೇನಾದರೂ ತಲೆ ಕೆಟ್ಟಿದ್ಯಾ ಎಂದು ಪ್ರಶ್ನಿಸಿದ್ದಾರೆ ಕಂಗನಾ.