- Home
- Entertainment
- Cine World
- ಪಾಕ್ನಲ್ಲಿ ನನ್ನ ಸುಂದರ ಕನಸುಗಳಿವೆ, ನಮ್ಮವರು ಅಲ್ಲಿಯವರೇ: Shah Rukh Khan ವಿಡಿಯೋ ವೈರಲ್
ಪಾಕ್ನಲ್ಲಿ ನನ್ನ ಸುಂದರ ಕನಸುಗಳಿವೆ, ನಮ್ಮವರು ಅಲ್ಲಿಯವರೇ: Shah Rukh Khan ವಿಡಿಯೋ ವೈರಲ್
ಬಾಂಗ್ಲಾ ಆಟಗಾರನನ್ನು ತಮ್ಮ ಕೆಕೆಆರ್ ತಂಡಕ್ಕೆ ಖರೀದಿಸಿದ್ದಕ್ಕಾಗಿ ಶಾರುಖ್ ಖಾನ್ ಟೀಕೆಗೆ ಗುರಿಯಾಗಿದ್ದಾರೆ. ಈ ನಡುವೆ, ಪಾಕಿಸ್ತಾನದ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿರುವ ಮತ್ತು ತಮ್ಮ ಕುಟುಂಬದ ಮೂಲ ಪೇಶಾವರದ್ದು ಎಂದು ಹೇಳಿಕೊಂಡಿರುವ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.

ಶಾರುಖ್ ಖಾನ್ ಪ್ರೀತಿ
ಬಾಲಿವುಡ್ ಬಾದ್ಶಾಹ್ ಶಾರುಖ್ ಖಾನ್ (Shahrukh Khan) ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಬಾಂಗ್ಲಾ ಆಟಗಾರರನ್ನು ತಮ್ಮ ತಂಡಕ್ಕೆ ಖರೀದಿ ಮಾಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಾಲೀಕ ಆಗಿದ್ದಾರೆ ಶಾರುಖ್. ಬಾಂಗ್ಲಾದೇಶದಲ್ಲಿ ಹಿಂದೂಗಳ ಮಾರಣ ಹೋಮ ನಡೆಯುತ್ತಿರುವ ಸಂದರ್ಭದಲ್ಲಿ, ನಟನ ಈ ನಡೆಗೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ.
ಇದೇ ಮೊದಲಲ್ಲ
ಅಷ್ಟಕ್ಕೂ ಶಾರುಖ್ ಖಾನ್ ಸೇರಿದಂತೆ ಬಾಲಿವುಡ್ ಖಾನ್ ನಟರ ಬಗ್ಗೆ ಇದೇ ಮೊದಲ ಬಾರಿ ಟೀಕೆ ಬರುತ್ತಿರುವುದಲ್ಲ. ಬದಲಿಗೆ ಈ ಹಿಂದೆ ಪೆಹಲ್ಗಾಮ್ನಲ್ಲಿ ಧರ್ಮ ಕೇಳಿ ಹಿಂದೂಗಳ ಮೇಲೆ ಉಗ್ರರು ನಡೆಸಿದ ದಾಳಿಯ ಸಂದರ್ಭದಲ್ಲಿಯಾಗಲೀ ಅಥವಾ ಆಪರೇಷನ್ ಸಿಂದೂರ್ ಸಮಯದಲ್ಲಾಗಲೀ ಅಥವಾ ಪಾಕಿಸ್ತಾನದ ಉಗ್ರರು ನಡೆಸುವ ನರಮೇಧದ ಸಮಯದಲ್ಲಾಗಲೀ, ಎಲ್ಲಿ ತಮ್ಮ ಪಾಕಿಸ್ತಾನದ ಅಭಿಮಾನಿಗಳಿಗೆ ನೋವಾಗಿಬಿಡುತ್ತದೆಯೋ ಎನ್ನುವ ಕಾರಣಕ್ಕೆ ಈ ನಟರು ಒಂದೇ ಒಂದು ಮಾತನಾಡದೇ ಗಪ್ಚುಪ್ ಆಗಿದ್ದವರು. ಕೊನೆಗೆ ಭಾರಿ ಟ್ರೋಲ್ ಆಗುತ್ತಲೇ ಒಂದು ಗೋಡೆಯ ಮೇಲೆ ದೀಪ ಇಟ್ಟವರಂತೆ ಒಂದು ಲೈನ್ ಬರೆದು ಸುಮ್ಮನಾಗಿದ್ದರು ಶಾರುಖ್ ಖಾನ್!
ವಿಡಿಯೋ ವೈರಲ್
ಇವೆಲ್ಲವುಗಳ ನಡುವೆಯೇ, ಇದೀಗ ನಟ ಶಾರುಖ್ ಖಾನ್ (Shah Rukh Khan) ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ನಟ ಪಾಕಿಸ್ತಾನದ ಮೇಲೆ ತಮಗಿರುವ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಸಾಧ್ಯವಾದರೆ ಒಂದು ದಿನ ನನ್ನ ಇಡೀ ಕುಟುಂಬದ ಜೊತೆ ಪಾಕಿಸ್ತಾನಕ್ಕೆ ಭೇಟಿ ನೀಡಿ, ಅಲ್ಲಿಯ ಪರಿಸರದ ಬಗ್ಗೆ ಮಕ್ಕಳಿಗೂ ತೋರಿಸುವುದಾಗಿ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿಯೂ ಪಾಪ್ಯುಲರ್
ಡಿವೈಎನ್ಟಿ ಎನ್ನುವ ಖಾತೆಯಲ್ಲಿ ಇದರ ವಿಡಿಯೋ ಶೇರ್ ಮಾಡಲಾಗಿದೆ. ನೀವು ಪಾಕಿಸ್ತಾನದಲ್ಲಿಯೂ ತುಂಬಾ ಪಾಪ್ಯುಲರ್ ಆಗಿದ್ದೀರಿ. ನಿಮಗೆ ಏನು ಎನ್ನಿಸುತ್ತದೆ ಎಂದು ಆ್ಯಂಕರ್ ಕೇಳಿದ್ದಾಳೆ. ಅದಕ್ಕೆ ಶಾರುಖ್ ಖಾನ್, ನಾನು ಪಾಕಿಸ್ತಾನದ ಪೇಶಾವರದವನು. ನಮ್ಮ ಹಿರಿಯರು ಎಲ್ಲಾ ಇಲ್ಲೇ ಇದ್ದವರು. ನಾನು 15 ವರ್ಷ ಇರುವಾಗ ನನ್ನ ತಂದೆ ಇಲ್ಲಿಗೆ ಕರೆದುಕೊಂಡು ಬಂದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಸುಂದರ ನೆನಪುಗಳು
ನನ್ನ ತಂದೆಯ ಜೊತೆಗಿನ ಸುಂದರ ದಿನಗಳನ್ನು ನಾನು ಪಾಕಿಸ್ತಾನದ ಕರಾಚಿ, ಪೇಶಾವರ ಸೇರಿದಂತೆ ಹಲವು ಸ್ಥಳಗಳಲ್ಲಿ ಕಳೆದಿದ್ದೇನೆ. ಇಲ್ಲಿ ನನ್ನ ಸುಂದರ ನೆನಪುಗಳಿವೆ. ಒಂದು ದಿನ ನನ್ನ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬರುವ ಕನಸು ಇದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

