ಮೆಹಂದಿಯಲ್ಲಿ ರಶ್ಮಿಕಾ ಮೀರಿಸಿದ್ರಾ ವಿಜಯ್ ದೇವರಕೊಂಡ? ಫೋಟೋಸ್ ಹಂಚಿಕೊಂಡ ನಟಿ
ಮೆಹಂದಿಯಲ್ಲಿ ರಶ್ಮಿಕಾ ಮೀರಿಸಿದ್ರಾ ವಿಜಯ್ ದೇವರಕೊಂಡ? ಫೋಟೋಸ್ ಹಂಚಿಕೊಂಡ ನಟಿ, ಮದುವೆ ಬಳಿಕ ಇದೀಗ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮೆಹಂದಿಗೆ ಧರಿಸಿದ್ದ ಡ್ರೆಸ್ ಮತ್ತೆ ಭಾರಿ ಚರ್ಚೆಯಾಗುತ್ತಿದೆ.

ರಶ್ಮಿಕಾ ವಿಜಯ್ ಡ್ರೆಸ್
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಜೈಪುರದಲ್ಲಿ ಅದ್ಧೂರಿಯಾಗಿ ನಡಿದೆ. ಬಳಿಕ ಹೈದರಾಬಾದ್‌ನಲ್ಲಿ ಆರತಕ್ಷತೆಯೂ ಜರುಗಿತ್ತು. ಮದುವೆಯಲ್ಲಿ ರಶ್ಮಿಕಾ ಅಪ್ಸರೆಯಂತೆ ಕಂಗೊಳಿಸಿದ್ದರು. ರಶ್ಮಿಕಾ ಮಂದಣ್ಣ ಸೌಂದರ್ಯವನ್ನು ಡಬಲ್ ಮಾಡುವ ರೇಶ್ಮೆ ಸೇರೆ, ಆಭರಣ ಎಲ್ಲರು ಮೆಚ್ಚಿಕೊಂಡಿದ್ದರು. ಆದರೆ ದೇವರಕೊಂಡ ಸಾಂಪ್ರಾದಾಯಿಕ ಉಡುಗೆ ತೊಡಗೆಗೆ ಭಾರಿ ಮೆಚ್ಚುಗೆ ಪಾತ್ರವಾಗಿತ್ತು. ದೇವರಕೊಂಡ ಟ್ರಡೀಶನಲ್ ಲುಕ್‌ಗೆ ಹಲವರು ಫಿದಾ ಆಗಿದ್ದರು.
ಮೆಹೆಂದಿಯಲ್ಲಿ ಯಾರು ಮಿಂಚಿಂಗ್?
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಗೂ ಮೊದಲು ನಡೆದ ಮೆಹಂದಿ ಕಾರ್ಯಕ್ರಮದ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದೀಗ ಮತ್ತೆ ಇವರ ಡ್ರೆಸ್ ಚರ್ಚೆಯಾಗುತ್ತಿದೆ. ಮಹೆಂದಿ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ಸೌಂದರ್ಯ ಅಭಿಮಾನಿಗಳು ಮನಸೋತಿದ್ದಾರೆ. ಮಹೆಂದಿ ಕಾರ್ಯಕ್ರಮದಲ್ಲಿ ವಿಜಯ್ ಆಕರ್ಷಕವಾಗಿ ಕಂಡರೂ ರಶ್ಮಿಕಾಗೆ ಫುಲ್ ಮಾರ್ಕ್ಸ್ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
ಮೆಹಂದಿಯಲ್ಲಿ ರಾಜಸ್ಥಾನಿ ರಂಗು
ಮೆಹಂದಿ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಧರಿಸಿದ್ದ ಡ್ರೆಸ್ ಡಿಸೈನ್ ರಾಜಸ್ಥಾನಿ ಸಾಂಪ್ರದಾಯಿಕ ಶೈಲಿಗೆ ಹೋಲಿಕೆಯಾಗಿತ್ತು. ವಿಜಯ್ ಹಾಗೂ ರಶ್ಮಿಕಾ ಮಹೆಂದಿ, ಸಂಗೀತ ಸೆರೆಮನಿ, ಮದುವೆ, ಆರತಕ್ಷತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಈ ದೋಡಿ ಡ್ರೆಸ್ ಪ್ರಮುಖ ಆಕರ್ಷಣೆಯಾಗಿದೆ.
ಫೋಟೋ ಹಂಚಿಕೊಂಡ ರಶ್ಮಿಕಾ
ರಶ್ಮಿಕಾ ಮಂದಣ್ಣ ತಮ್ಮ ಮೆಹಂದಿ ಸಂಭ್ರಮದ ಫೋಟೋ ಹಂಚಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಹಾಗೂ ಕುಟುಂಬಸ್ಥರು ಅದ್ಧೂರಿಯಾಗಿ ಮಹೆಂದಿ ಸಂಭ್ರಮ ಆಚರಿಸಿದ್ದಾರೆ. ಸಂಪ್ರದಾಯಬದ್ಧವಾಗಿ ನಡೆದ ಮೆಹಂದ ಕಾರ್ಯಕ್ರಮಕ್ಕೆ ಫೋಟೋಗಳಿಗೆ ಅಭಿಮಾನಿಗಳು ನೇರವಾಗಿ ಡ್ರೆಸ್ ಬಗ್ಗೆ ಪ್ರಶ್ನಿಸಿದ್ದಾರೆ.
ಜಾಲಿಡೇ ಮೂಡ್‌ನಲ್ಲಿ ಸೆಲೆಬ್ರೆಟಿ ಜೋಡಿ
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರು ಸದ್ಯ ಸಿನಿಮಾದಿಂದ ಬ್ರೇಕ್ ಪಡೆದಿದ್ದಾರೆ. ಹಾಲಿಡೇ ಮೂಡ್‌ನಲ್ಲಿರುವ ಈ ಸೆಲೆಬ್ರೆಟಿ ಜೋಡಿ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. ಇತ್ತೀಚೆಗೆ ತಿರುಪತಿ ದೇವಸ್ಥಾನಕ್ಕೆ ಈ ಜೋಡಿ ಭೇಟಿ ನೀಡಿ ದೇವರ ದರ್ಶನ ಪಡೆದಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

