- Home
- Entertainment
- Cine World
- ರಶ್ಮಿಕಾ-ರಕ್ಷಿತ್ ಶೆಟ್ಟಿ ಬ್ರೇಕಪ್ ಆಗಿದ್ಯಾಕೆ? ಆಮೇಲೆ ಆಗಿದ್ದೇನು? ಘಟನೆಯ ಅಸಲಿ ಸತ್ಯ ತೆರೆದಿಟ್ಟ ಪ್ರಮೋದ್ ಶೆಟ್ಟಿ
ರಶ್ಮಿಕಾ-ರಕ್ಷಿತ್ ಶೆಟ್ಟಿ ಬ್ರೇಕಪ್ ಆಗಿದ್ಯಾಕೆ? ಆಮೇಲೆ ಆಗಿದ್ದೇನು? ಘಟನೆಯ ಅಸಲಿ ಸತ್ಯ ತೆರೆದಿಟ್ಟ ಪ್ರಮೋದ್ ಶೆಟ್ಟಿ
ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಅವರ ಬ್ರೇಕಪ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ರಕ್ಷಿತ್ ಅವರ ಆಪ್ತ ಸ್ನೇಹಿತ ಪ್ರಮೋದ್ ಶೆಟ್ಟಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಚೈಲ್ಡಿಶ್ ಬುದ್ಧಿಯೇ ಇದಕ್ಕೆ ಕಾರಣ ಎಂದು ಪ್ರಮೋದ್ ಅಭಿಪ್ರಾಯಪಟ್ಟಿದ್ದಾರೆ

ಮದ್ವೆ ಖುಷಿಯಲ್ಲಿ ರಶ್ಮಿಕಾ
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ (Rashmika Mandanna marriage) ಮತ್ತ ನಟ ವಿಜಯ್ ದೇವರಕೊಂಡ ಅವರ ಮದುವೆ ಬರುವ ಫೆಬ್ರುವರಿಯಲ್ಲಿ ನಡೆಯುತ್ತಿದೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ, 30 ವರ್ಷದ ಈ ಚೆಲುವೆ ಡೇಟಿಂಗ್, ಮದ್ವೆ ವಿಷಯದಲ್ಲಿಯೂ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಕನ್ನಡದ ನಟಿ ರಕ್ಷಿತ್ ಶೆಟ್ಟಿಜೊತೆ ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ಆಗಿರುವ ಫೋಟೋಗಳು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬಹುತೇಕರಿಗೆ ತಿಳಿದಿರುವಂತೆ ಇವರಿಬ್ಬರೂ ಮದುವೆಯಾಗುವ ಸಿದ್ಧತೆ ನಡೆಸಿದ್ದರು. ಆದರೆ ಅದು ಮುರಿದು ಬಿದ್ದಿತ್ತು. ಈಗಲೂ ಇಬ್ಬರೂ ಸಿಂಗಲ್ ಆಗಿದ್ದಾರೆ.
'ದಿ ಗರ್ಲ್‌ಫ್ರೆಂಡ್'
ಇತ್ತೀಚೆಗೆ 'ದಿ ಗರ್ಲ್‌ಫ್ರೆಂಡ್' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇದರಲ್ಲಿ ಅವರು, ಟಾಕ್ಸಿಕ್ ಬಾಯ್‌ಫ್ರೆಂಡ್ ಕಾರಣಕ್ಕೆ ನೋವು ಅನುಭವಿಸುವ ಯುವತಿಯಾಗಿದ್ದಾರೆ. ಇದು ತಮ್ಮದೇ ನಿಜ ಜೀವನದ ಕಥೆ ಎನ್ನುವ ಅರ್ಥದಲ್ಲಿ ಸಂದರ್ಶನದಲ್ಲಿ ರಶ್ಮಿಕಾ ಹೇಳಿಕೊಂಡಿದ್ದರು. ಆಗ ಮತ್ತೆ ರಕ್ಷಿತ್ ಶೆಟ್ಟಿ ಹೆಸರು ಮುನ್ನೆಲೆಗೆ ಬಂದಿತ್ತು.
'ಕಿರಿಟ್ ಪಾರ್ಟಿ’ ಸಿನಿಮಾ
'ಕಿರಿಟ್ ಪಾರ್ಟಿ’ ಸಿನಿಮಾ ವೇಳೆ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ರಶ್ಮಿಕಾ ಮಂದಣ್ಣ ಎಂಗೇಜ್ ಆಗಿದ್ದರು. ಆದರೆ ಕೆಲವೇ ತಿಂಗಳಲ್ಲಿ ಸಂಬಂಧ ಅಲ್ಲಿಗೇ ಮುಗಿಯಿತು. ಅವರಿವರ ಜೊತೆ ಆಗಾಗ್ಗೆ ಹೆಸರು ಕೇಳಿಬರುತ್ತಿದ್ದರೂ ಈ ವಿಷಯದಲ್ಲಿ ರಶ್ಮಿಕಾ ಹೆಸರು ಹೆಚ್ಚಾಗಿ ಥಳಕು ಹಾಕಿಕೊಂಡಿದ್ದು ವಿಜಯ್ ದೇವರಕೊಂಡ ಜೊತೆ. ಇದಾದ ಬಳಿಕ ಇವರ ಮದುವೆಯ ಕುರಿತು ಹೋದಲ್ಲೆಲ್ಲಾ ಪ್ರಶ್ನೆಗಳು ಎದುರಾಗುತ್ತಿರುತ್ತವೆ.
ಪ್ರಮೋದ್ ಶೆಟ್ಟಿ ಮಾತು
ಇದೀಗ ಆ ಬಗ್ಗೆ ನಟ, ನಿರ್ದೇಶಕ ಹಾಗೂ ರಕ್ಷಿತ್ ಅವರ ಆಪ್ತ ಸ್ನೇಹಿತ ಪ್ರಮೋದ್ ಶೆಟ್ಟಿ ಅವರು ಈ ವಿಷಯದ ಬಗ್ಗೆ ರಿವೀಲ್ ಮಾಡಿದ್ದಾರೆ. ಪ್ಯೂರ್ ಪೋಸ್ಟ್ ಹಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ, ಪ್ರಮೋದ್ ಶೆಟ್ಟಿ ಅವರು ಇದರ ಬಗ್ಗೆ ರಿವೀಲ್ ಮಾಡಿದ್ದಾರೆ. ಇವರಿಬ್ಬರ ಬ್ರೇಕಪ್ ವಿಚಾರ ತುಂಬಾ ಹಿಂದಿನದ್ದು, ಇಬ್ಬರೂ ಅದನ್ನು ಮರೆತಂತಿದೆ. ಆದರೆ ಆ ಸಮಯದಲ್ಲಿ ಬ್ರೇಕಪ್ ಆದ ಮೇಲೆ ರಕ್ಷಿತ್ ಅದರಿಂದ ಹೊರಬರಲು ತುಂಬಾ ಸಮಯ ತೆಗೆದುಕೊಂಡ. ಆದರೆ ಕ್ರಮೇಣ ಹೊರಕ್ಕೆ ಬಂದ ಮೇಲೆ ಅದರ ಬಗ್ಗೆ ಯೋಚನೆ ಮಾಡಲಿಲ್ಲ. ಈಗ ಇರುವುದರಲ್ಲೇ ಖುಷಿಯಾಗಿದ್ದಾನೆ ಎಂದಿದ್ದಾರೆ.
ಆರೋಪ ಮಾಡಲಿಲ್ಲ
ರಕ್ಷಿತ್ ಎಷ್ಟೇ ಆದರೂ, ರಶ್ಮಿಕಾ ಮೇಲೆ ಯಾವತ್ತೂ ಆರೋಪ ಮಾಡಿದವನಲ್ಲ. ಈ ಬಗ್ಗೆ ಬೇರೆ ಬೇರೆ ಸಂದರ್ಶನಗಳಲ್ಲಿ ವಿಷಯ ಕೇಳಿದರೂ, ಆತ ಮಾತನಾಡಲಿಲ್ಲ ಅಥವಾ ಆಕೆ ಮೇಲೆ ಆರೋಪ ಮಾಡಲಿಲ್ಲ. ಹಾಗೆ ಮಾಡುವುದು ಸರಿ ಕೂಡ ಅಲ್ಲ ಎನ್ನುವುದು ಆತನಿಗೆ ತಿಳಿದಿದೆ ಎಂದಿದ್ದಾರೆ.
ಚೈಲ್ಡಿಶ್ ಬುದ್ಧಿ
ಇದೇ ವೇಳೆ ಬ್ರೇಕಪ್ ಬಗ್ಗೆ ಮಾತನಾಡಿರುವ ಪ್ರಮೋದ್ ಶೆಟ್ಟಿ (Pramod Shetty), ಆಗ ಅವರದ್ದು ಚಿಕ್ಕ ವಯಸ್ಸು. ಏನೋ ಚೈಲ್ಡಿಶ್ ಬುದ್ಧಿ ಇದ್ದಾಗ ಹೀಗೆ ಏನೇನೋ ನಡೆದು ಹೋಗುತ್ತದೆ. ಬಹುತೇಕ ಮಂದಿಯ ಜೀವನದಲ್ಲಿ ಇಂಥ ಘಟನೆ ಆಗುವುದು ಇದೆ. ಅದಕ್ಕೇ ತಲೆ ಕೆಡಿಸಿಕೊಂಡು ಕುಳಿತುಕೊಳ್ಳಬಾರದು. ಆ ಚೈಲ್ಡಿಶ್ ಬುದ್ಧಿ ಎಲ್ಲರ ಜೀವನದಲ್ಲೂ ಒಂದು ಘಟ್ಟವಾಗಿರುತ್ತದೆ. ಅವನಿಗೂ ಹಾಗೆಯೇ ಆಗಿದೆ ಎಂದಿದ್ದಾರೆ. ಯಾರ ಲೈಫ್ ಯಾರಿಂದಲೂ ಉದ್ಧಾರ ಆಗಲ್ಲ, ಯಾರಿಂದಲೂ ಹಾಳಾಗಲ್ಲ ಎನ್ನುವುದು ನನ್ನ ಅನಿಸಿಕೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

