Rakshit shetty ಜೊತೆ ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್! ಮತ್ತೆ ವೈರಲ್ ಆಗ್ತಿವೆ ಫೋಟೋಗಳು
ಸದ್ಯ ರಶ್ಮಿಕಾ ಮಂದಣ್ಣ ಹೆಸರು ವಿಜಯ ದೇವರಕೊಂಡ ಜೊತೆ ಥಳಕು ಹಾಕಿಕೊಂಡಿದೆ. ಆದರೆ ಇದಕ್ಕೂ ಮುನ್ನ ನಟ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ಮೆಂಟ್ ಆಗಿದ್ದು, ಅದರ ಫೋಟೋಗಳು ವೈರಲ್ ಆಗ್ತಿವೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ
ಟಾಲಿವುಡ್‌ನ ಮೋಸ್ಟ್ ರೊಮ್ಯಾಂಟಿಕ್ ಜೋಡಿಯಾಗಿ ಗುರುತಿಸಿಕೊಂಡಿರುವವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಹಲವು ವರ್ಷಗಳಿಂದ ಗಾಸಿಪ್ ನಡೆಯುತ್ತಲೇ ಇದೆ. ಇವರಿಬ್ಬರೂ ಮದುವೆಯಾಗುತ್ತಾರೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳೂ ಸಿಕ್ಕಿವೆ. ಇವುಗಳ ನಡುವೆಯೇ, ಮೂರನೇ ಸಿನಿಮಾದಲ್ಲಿ ಮತ್ತೆ ಜೊತೆಯಾಗುತ್ತಿದ್ದಾರೆ. ಈಗಾಗಲೇ ಇವರಿಬ್ಬರು ತೆಲುಗಿನ ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಇದೀಗ 3ನೇ ಬಾರಿ ಮತ್ತೆ ತೆರೆಮೇಲೆ ಒಂದಾಗಲು ಸಜ್ಜಾಗಿದ್ದಾರೆ.
ಮದುವೆ ಸುದ್ದಿಯಲ್ಲಿರೋ ರಶ್ಮಿಕಾ ಮಂದಣ್ಣ
ಅಷ್ಟಕ್ಕೂ, 29 ವರ್ಷದ ಈ ಚೆಲುವೆ ಡೇಟಿಂಗ್, ಮದ್ವೆ ವಿಷಯದಲ್ಲಿಯೂ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಕನ್ನಡದ ನಟಿ ರಕ್ಷಿತ್ ಶೆಟ್ಟಿಜೊತೆ ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ಆಗಿರುವ ಫೋಟೋಗಳು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬಹುತೇಕರಿಗೆ ತಿಳಿದಿರುವಂತೆ ಇವರಿಬ್ಬರೂ ಮದುವೆಯಾಗುವ ಸಿದ್ಧತೆ ನಡೆಸಿದ್ದರು. ಆದರೆ ಅದು ಮುರಿದು ಬಿದ್ದಿತ್ತು. ಈಗಲೂ ಇಬ್ಬರೂ ಸಿಂಗಲ್ ಆಗಿದ್ದಾರೆ.
ಕಿರಿಕ್ ಪಾರ್ಟಿ ವೇಳೆ ರಕ್ಷಿತ್ ಜೊತೆ ಫ್ರೆಂಡ್ಷಿಪ್
'ಕಿರಿಟ್ ಪಾರ್ಟಿ’ ಸಿನಿಮಾ ವೇಳೆ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ರಶ್ಮಿಕಾ ಮಂದಣ್ಣ ಎಂಗೇಜ್ ಆಗಿದ್ದರು. ಆದರೆ ಕೆಲವೇ ತಿಂಗಳಲ್ಲಿ ಸಂಬಂಧ ಅಲ್ಲಿಗೇ ಮುಗಿಯಿತು. ಅವರಿವರ ಜೊತೆ ಆಗಾಗ್ಗೆ ಹೆಸರು ಕೇಳಿಬರುತ್ತಿದ್ದರೂ ಈ ವಿಷಯದಲ್ಲಿ ರಶ್ಮಿಕಾ ಹೆಸರು ಹೆಚ್ಚಾಗಿ ಥಳಕು ಹಾಕಿಕೊಂಡಿದ್ದು ವಿಜಯ್ ದೇವರಕೊಂಡ ಜೊತೆ. ಇದಾದ ಬಳಿಕ ಇವರ ಮದುವೆಯ ಕುರಿತು ಹೋದಲ್ಲೆಲ್ಲಾ ಪ್ರಶ್ನೆಗಳು ಎದುರಾಗುತ್ತಿರುತ್ತವೆ.
ಮದುವೆ ಬಗ್ಗೆ ಎದುರಾಗಿತ್ತು ಪ್ರಶ್ನೆ
ಅದೇ ರೀತಿ ಈಗ ಮದುವೆಯ ಪ್ರಶ್ನೆಯೊಂದು ಅವರಿಗೆ ಎದುರಾಗಿತ್ತು. ಬಾಲಿವುಡ್ ನಟ ಟೈಗರ್ ಶ್ರಾಫ್ ಜತೆ ಸಿನಿಮಾ ಪ್ರಚಾರಕ್ಕೆ ಹೋಗಿದ್ದ ವೇಳೆ ಮದುವೆಯ ವಿಷಯ ಇವರಿಗೆ ಕೇಳಲಾಗಿತ್ತು. ಆಗ ಮದುವೆಯ ಕುರಿತು ಮಾತನಾಡಿದ ನಟಿ, ಎಲ್ಲರೂ ಶಾಕ್ ಆಗುವಂಥ ಸ್ಟೇಟ್ಮೆಂಟ್ ಕೊಟ್ಟುಬಿಟ್ಟಿದ್ದರು.
ಮದುವೆಯಾಗಿದ್ದೇನೆ ಎಂದಿದ್ದ ರಶ್ಮಿಕಾ
ಅಷ್ಟಕ್ಕೂ ಪತ್ರಕರ್ತರು ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದಕ್ಕೆ, ನಟಿ ನಾನು ಈಗಾಗಲೇ ಮದುವೆಯಾಗಿದ್ದೇನೆ ಎಂದಿದ್ದರು. ಈಗಾಗಲೇ ಗುಟ್ಟಾಗಿ ಮದುವೆ ಆಗಿಬಿಟ್ಟಿದೆ ಎಂದು ಹೇಳಿಕೊಂಡಿದ್ದರು. ಅರೆಕ್ಷಣ ಅಲ್ಲಿದ್ದವರು ದಂಗಾಗಿದ್ದರು. ಹಾಗೆ ನೋಡಿದರೆ ಕೆಲವು ನಟಿಯರು ಗುಟ್ಟಾಗಿ ಮದ್ವೆಯಾದದ್ದು ಇದೆ.
ನರುಟೋ ಕುರಿತು ರಶ್ಮಿಕಾ
ಹಾಗೆಯೇ ರಶ್ಮಿಕಾ ಕೂಡ ಆಗಿಬಿಟ್ರಾ ಎನ್ನುವ ಗುಮಾನಿ ಶುರುವಾಗಿದೆ. ನಂತರ ಜೋರಾಗಿ ನಕ್ಕ ರಶ್ಮಿಕಾ ಮಂದಣ್ಣ ತಾವು ಮದ್ವೆಯಾಗಿದ್ದು ಯಾರು? ಆ ಹುಡುಗ ಯಾರು ಎಂಬ ಬಗ್ಗೆ ವಿವರಿಸುವುದಾಗಿ ಹೇಳಿದಾಗ ಎಲ್ಲರ ಕಿವಿ ನೆಟ್ಟಗಾಗಿತ್ತು.
ನರುಟೋ ಕುರಿತು ರಶ್ಮಿಕಾ
ಅಷ್ಟಕ್ಕೂ ರಶ್ಮಿಕಾ ಮದ್ವೆಯಾದದ್ದು ನರುಟೊನನ್ನಂತೆ (Naruto). ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ. ಅವನಿಗೆ ನನ್ನನ್ನು ಅರ್ಪಿಸಿಕೊಂಡಿದ್ದೇನೆ. ನನ್ನ ಹೃದಯದಲ್ಲಿದ್ದಾನೆ ಎಂದಿದ್ದರು. ಆಗ ಜೋರಾಗಿ ಅಲ್ಲಿದ್ದವರು ನಕ್ಕಿದ್ದಾರೆ. ಅಷ್ಟಕ್ಕೂ ಈ ನರುಟೊ, ಕಾರ್ಟೂನ್ ಪಾತ್ರ. ನರುಟೊ ನಿಂಜಾ ವಾರಿಯರ್ ಇದರ ಹೆಸರು.
ರಶ್ಮಿಕಾ ರಹಸ್ಯ ಮದುವೆ
ಮಕ್ಕಳಿಂದ ಹಿಡಿದು ಹಿರಿಯರೂ ಈ ಪಾತ್ರವನ್ನು ಇಷ್ಟಪಡುತ್ತಾರೆ. ರಶ್ಮಿಕಾ ಅವರು ರಹಸ್ಯವಾಗಿ ಮದುವೆಯಾಗುವಷ್ಟು ನರುಟೊವನ್ನು ಇಷ್ಟಪಡುತ್ತೇನೆ ಎಂದಿದ್ದರು.