- Home
- Entertainment
- Cine World
- ಗೋವಾದಲ್ಲಿ ಹೊಸ ವರ್ಷ: ಆ 6 ನಿಮಿಷಕ್ಕೆ 6 ಕೋಟಿ ಪಡೆದ KGF ಮಿಲ್ಕಿ ಬ್ಯೂಟಿ Tamannaah Bhatia!
ಗೋವಾದಲ್ಲಿ ಹೊಸ ವರ್ಷ: ಆ 6 ನಿಮಿಷಕ್ಕೆ 6 ಕೋಟಿ ಪಡೆದ KGF ಮಿಲ್ಕಿ ಬ್ಯೂಟಿ Tamannaah Bhatia!
ಹೊಸ ವರ್ಷಾಚರಣೆ ಅಂಗವಾಗಿ ಗೋವಾದಲ್ಲಿ ನಡೆದ ಪಾರ್ಟಿಯೊಂದರಲ್ಲಿ ನಟಿ ತಮನ್ನಾ ಭಾಟಿಯಾ ಐಟಂ ಡಾನ್ಸ್ ಮಾಡಿದ್ದಾರೆ. ಕೇವಲ ಆರು ನಿಮಿಷಗಳ ಈ ಪ್ರದರ್ಶನಕ್ಕೆ ಅವರು ಬರೋಬ್ಬರಿ ಆರು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಮಿಲ್ಕಿ ಬ್ಯೂಟಿ ತಮನ್ನಾ
ನಿಖಿಲ್ ಕುಮಾರಸ್ವಾಮಿ ಜೊತೆ ಜಾಗ್ವಾರ್ ಹಾಗೂ ಕೆಜಿಎಫ್ ಸಿನಿಮಾದಲ್ಲಿ ಕಾಣಿಸಿಕೊಂಡಿರೋ ಬಾಲಿವುಡ್ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದರೂ, ಇದೀಗ ಅವರು ಅದಕ್ಕಿಂತಲೂ ಹೆಚ್ಚಿನ ದುಡ್ಡನ್ನು ಐಟಂ ಸಾಂಗ್ನಿಂದಲೇ ಪಡೆಯುತ್ತಿದ್ದಾರೆ.
ಆರು ಕೋಟಿ ಸಂಭಾವನೆ
ಇದೇ ಹೊಸವರ್ಷದ ಸಂದರ್ಭದಲ್ಲಿ ಗೋವಾದಲ್ಲಿ ನಟಿ ನಡೆಸಿಕೊಟ್ಟಿರೋ ಐಟಂ ಸಾಂಗ್ ಒಂದು ಇದೀಗ ಭರ್ಜರಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ತಮನ್ನಾ ಸೊಂಟ ಬಳುಕಿಸಲು ಬರೋಬ್ಬರಿ ಆರು ಕೋಟಿ ರೂಪಾಯಿ ಪಡೆದುಕೊಂಡಿದ್ದಾರಂತೆ!
ಹೊಸ ವರ್ಷಾಚರಣೆ
ಕೇವಲ ಆರು ನಿಮಿಷಗಳ ಈ ಡಾನ್ಸ್ಗೆ ತಮನ್ನಾ ಭಾಟಿಯಾ ಆರು ಕೋಟಿ ರೂಪಾಯಿ ಪಡೆದುಕೊಂಡಿರುವುದಾಗಿ ವರದಿಯಾಗಿದೆ. ಡಿಸೆಂಬರ್ 31ರ ಮಧ್ಯರಾತ್ರಿ ಹೊಸ ವರ್ಷದ ರಾತ್ರಿ ಆಚರಣೆಯ ಸಂದರ್ಭದಲ್ಲಿ ನಟಿ ಬಾಗಾ ಬೀಚ್‌ನಲ್ಲಿ ಪ್ರದರ್ಶನ ನೀಡಿದ್ದರು. ಅವರ ನೃತ್ಯ ಸುಮಾರು ಆರು ನಿಮಿಷಗಳ ಕಾಲ ನಡೆಯಿತು. ಇದು ಆನ್‌ಲೈನ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಸೆಲೆಬ್ರಿಟಿಗಳ ಕಿಕ್
ಗೋವಾದ ಹೊಸ ವರ್ಷದ ಪಾರ್ಟಿಗಳಲ್ಲಿ ಸೆಲೆಬ್ರಿಟಿಗಳ ಪ್ರದರ್ಶನ ಹೊಸತೇನಲ್ಲ. ಇಂಥ ಕಾರ್ಯಕ್ರಮಗಳಲ್ಲಿ ಘಟಾನುಘಟಿ ಸೆಲೆಬ್ರಿಟಿಗಳನ್ನು ಕರೆಸಲಾಗುತ್ತದೆ. ಅವರಿಗೆ ಕೋಟಿ ಕೋಟಿ ಲೆಕ್ಕದಲ್ಲಿಯೇ ಹಣ ನೀಡಲಾಗುತ್ತದೆ. ಈ ವರ್ಷ ತಮನ್ನಾ ಸೇರಿದಂತೆ ಕೆಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿತ್ತು.
ಅಮಲಿನಲ್ಲಿ ತೇಲಾಟ
ಇಂಥ ಸೆಲೆಬ್ರಿಟಿಗಳು ಕುಣಿಯಲು ಶುರು ಮಾಡಿದರೆ, ಅಲ್ಲಿ ಮತ್ತನ್ನು ಏರಿಸಿಕೊಂಡವರಿಗೆ ಮತ್ತಷ್ಟು ಕಿಕ್ ಸಿಗುತ್ತದೆ. ಹೀಗೆ ಕಿಕ್ ಮತ್ತಷ್ಟು ಏರಿಸಿಕೊಳ್ಳಲು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಆದ್ದರಿಂದ ಹೀಗೆ ಐಟಂ ಸಾಂಗ್ ಮಾಡುವವರಿಗೆ ಕೋಟಿ ಕೋಟಿ ಕೊಟ್ಟರೂ ಆಯೋಜಕರಿಗೆ ಯಾವುದೇ ರೀತಿಯ ನಷ್ಟ ಆಗುವುದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

