- Home
- Entertainment
- Cine World
- ಕೆಜಿಗಟ್ಟಲೆ ಚಿನ್ನಾಭರಣ ಧರಿಸಿದ್ದ Rashmika Mandanna ಸ್ಲಿಪ್ಪರ್ ಮೇಲೆ ಫ್ಯಾನ್ಸ್ ಕಣ್ಣು: ಇಷ್ಟು ಕಡಿಮೆ ರೇಟಾ?
ಕೆಜಿಗಟ್ಟಲೆ ಚಿನ್ನಾಭರಣ ಧರಿಸಿದ್ದ Rashmika Mandanna ಸ್ಲಿಪ್ಪರ್ ಮೇಲೆ ಫ್ಯಾನ್ಸ್ ಕಣ್ಣು: ಇಷ್ಟು ಕಡಿಮೆ ರೇಟಾ?
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ನಂತರ, ರಶ್ಮಿಕಾ ಧರಿಸಿದ್ದ 7 ಕೋಟಿ ಮೌಲ್ಯದ ಆಭರಣಗಳು ಮತ್ತು ಚಿನ್ನದ ಸೀರೆ ಗಮನ ಸೆಳೆದಿದೆ. ಆದರೆ, ಎಲ್ಲರನ್ನೂ ಅಚ್ಚರಿಗೊಳಿಸಿದ್ದು ಅವರು ಧರಿಸಿದ್ದ ಚಪ್ಪಲಿಯ ಬೆಲೆ ತುಂಬಾ ಕಡಿಮೆ ಇದ್ದು, ಅದರ ಬಗ್ಗೆ ಅಭಿಮಾನಿಗಳಲ್ಲಿ ಚರ್ಚೆ ಶುರುವಾಗಿದೆ.

ವಿರೋಶ್ ಜೋಡಿ
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ (Rashmika Mandanna and Vijaya Devarakonda) ಮದುವೆ ಸಡಗರ ಮುಗಿದಿದೆ. ಮದುವೆ ಮುಗಿದ ಬಳಿಕ ಮದುವೆ ಕುರಿತಾದ ಕೆಲವೊಂದು ಇಂಟರೆಸ್ಟಿಂಗ್ ವಿಷ್ಯಗಳು ಒಂದೊಂದಾಗಿ ಹೊರ ಬರುತ್ತಿವೆ.
ಟೆಂಪಲ್ ಡಿಸೈನ್ ಒಡವೆ
ವಿರೋಶ್ ಜೋಡಿಯ ಮದುವೆಯಲ್ಲಿ ಗಮನ ಸೆಳೆದದ್ದು ರಶ್ಮಿಕಾ ಧರಿಸಿದ್ದ ಚಿನ್ನಾಭರಣಗಳು. ಸುಮಾರು 10 ತಿಂಗಳಿನಿಂದ ಟೆಂಪಲ್ ಡಿಸೈನ್ ಆಭರಣಗಳನ್ನು ವಿಶೇಷ ವಿನ್ಯಾಸಕಾರರು ರೆಡಿ ಮಾಡಿದ್ದಾರೆ.
ಏಳು ಕೋಟಿ ಆಭರಣ
ನಟಿ ಸುಮಾರು ಏಳು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಧರಿಸಿರುವುದಾಗಿ ವರದಿಯಾಗಿದೆ. ಅವರು ಉಟ್ಟ ಸೀರೆ ಕೂಡ ಚಿನ್ನದ ದಾರಗಳಿಂದ ಲೇಪಿತವಾಗಿತ್ತು.
ವಜ್ರ ಬ್ಯಾನ್
ವಜ್ರಗಳು ನೆಗೆಟಿವ್ ಎನರ್ಜಿ ತರುವ ಹಿನ್ನೆಲೆಯಲ್ಲಿ ಹಾಗೂ ಅದಕ್ಕೆ ಶೀತಲ ಗುಣ ಇರುವ ಕಾರಣ, ಮತ್ತು ದಕ್ಷಿಣದ ಮದುವೆಗಳಲ್ಲಿ ಹೆಚ್ಚಾಗಿ ಚಿನ್ನಕ್ಕೇ ಮಹತ್ವ ಇರುವ ಕಾರಣದಿಂದ ಕೇವಲ ಚಿನ್ನಾಭರಣಗಳನ್ನೇ ಈ ಜೋಡಿ ಧರಿಸಿದೆ.
ಸ್ಲಿಪ್ಪರ್ ಮೇಲೆ ಕಣ್ಣು
ಇವೆಲ್ಲವುಗಳ ನಡುವೆ ರಶ್ಮಿಕಾ ಧರಿಸಿರುವ ಸ್ಲಿಪ್ಪರ್ ಮೇಲೆ ಈಗ ನೆಟ್ಟಿಗರ ಕಣ್ಣು ಬಿದ್ದಿದೆ. ಗೋಲ್ಡನ್ ಬಣ್ಣದ ಈ ಸ್ಲಿಪ್ಪರ್ ಬೆಲೆ ಏನಿಲ್ಲವೆಂದರೂ ಒಂದು ಲಕ್ಷ ರೂಪಾಯಿ ಇರುತ್ತದೆ ಎಂದೇ ಬಹುತೇಕ ಎಲ್ಲರೂ ಅಂದುಕೊಂಡಿದ್ದರು.
ಬೆಲೆ ಇಷ್ಟೇನಾ?
ಆದರೆ, ಅಭಿಮಾನಿಗಳಿಗೆ ಶಾಕ್ ಆಗಿದೆ. ಇದರ ಬೆಲೆಯನ್ನು ಸಂಶೋಧನೆ ಮಾಡಿದ್ದಾರೆ ರಶ್ಮಿಕಾ ಅಭಿಮಾನಿಗಳು. ಅಪರಾಜಿತಾ ತೂರ್ ಬ್ರ್ಯಾಂಡ್ನ ಚಪ್ಪಲಿ ಇದಾಗಿದೆ. ಇದಕ್ಕೆ ಕೇವಲ 24, 399 ರೂಪಾಯಿ ಇರುವುದನ್ನು ಕಂಡಿರುವ ಫ್ಯಾನ್ಸ್ ದಂಗಾಗಿದ್ದಾರೆ. ನಟಿ ಇಷ್ಟು ಕಡಿಮೆ ಬೆಲೆಯ ಚಪ್ಪಲಿ ಏಕೆ ಧರಿಸಿದ್ರು ಎಂದು ಪ್ರಶ್ನಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

