Aishwarya Rai ಯಿಂದ Alia Bhatt ವರೆಗೆ ಗಂಡನಿಗಿಂತ ಹೆಚ್ಚು ಸಂಪಾದಿಸುವ ನಟಿಯರು
ಬಿ-ಟೌನ್‌ನಲ್ಲಿರುವ ಹಲವಾರು ನಟಿಯರು ತಮ್ಮ ಸಂಗಾತಿಗಳಿಗಿಂತ ಹೆಚ್ಚು ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ. ಹಾಗೇಯೇ ಅವರು ತಮ್ಮ ಗಂಡನಿಗೆ ಹೆಚ್ಚು ಸಂಪಾದನೆ ಸಹ ಮಾಡುತ್ತಿದ್ದಾರೆ. ಪತಿಯರಿಗಿಂತ ಹೆಚ್ಚು ಫೇಮಸ್ ಆಗಿರುವ ಬಾಲಿವುಡ್‌ನ ನಟಿಯರು ಇವರು

ಐಶ್ವರ್ಯಾ ರೈ ಬಚ್ಚನ್ ತನ್ನ ಪತಿ ಅಭಿಷೇಕ್ ಬಚ್ಚನ್ ಅವರಿಗಿಂತ ಹೆಚ್ಚು ಯಶಸ್ವಿಯಾಗಿದ್ದಾರೆ. ಆದರೆ ಅಭಿಷೇಕ್‌ಗಿಂತ ಉತ್ತಮ ಜೀವನ ಸಂಗಾತಿಯನ್ನು ತಾನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಐಶ್ವರ್ಯಾ ಒಪ್ಪಿಕೊಳ್ಳುತ್ತಾರೆ. ಅವರು ಹೆಂಡತಿ ಯಶಸ್ಸಿನ ಕಾರಣದಿಂದಾಗಿ ಆಗಾಗ್ಗೆ ಅಪಹಾಸ್ಯಕ್ಕೊಳಗಾಗುತ್ತಾರೆ. ಆದರೂ ಅವರ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ
Image: Alia Bhatt/Instagram
ಆಲಿಯಾ ಭಟ್ ಪ್ರಸ್ತುತ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚಿಗೆ ನಟಿ ತಮ್ಮ ದೀರ್ಘಕಾಲದ ಪ್ರೀತಿ ನಟ ರಣಬೀರ್ ಕಪೂರ್ ಅವರನ್ನು ಮದುವೆಯಾಗಿದ್ದಾರೆ. ರಣಬೀರ್ ಕಪೂರ್ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದರೂ, ಅವರ ನಟನಾ ವೃತ್ತಿಜೀವನದಲ್ಲಿ ಇನ್ನೂ ಬಹಳ ದೂರ ಸಾಗಬೇಕಾಗಿದೆ. ಅವರು ಹೆಮ್ಮೆಯಿಂದ ಆಲಿಯಾರ ಸಾಧನೆಯನ್ನು ಉಲ್ಲೇಖಿಸುತ್ತಾರೆ.
ರಣವೀರ್ ಸಿಂಗ್ ಆಗಾಗ್ಗೆ ತನ್ನ ಪತ್ನಿ ದೀಪಿಕಾ ಪಡುಕೋಣೆ ತನ್ನ ಸ್ಫೂರ್ತಿ ಎಂದು ಒಪ್ಪಿಕೊಳ್ಳುತ್ತಾರೆ. ಮತ್ತು ತನ್ನ ಹೆಂಡತಿಯ ಪ್ರತಿಯೊಂದು ಸಾಧನೆಗಳನ್ನು ಅನುಸರಿತ್ತಾರೆ ಹಾಗೂ ದೀಪಿಕಾ ಪಡುಕೋಣೆಯನ್ನು ಹೋಗಳುವ ಯಾವ ಅವಕಾಶವನ್ನು ಸಹ ರಣವೀರ್ ಸಿಂಗ್ ಬಿಡುವುದಿಲ್ಲ.
ಬಿಪಾಶಾ ಬಸು ಸಂಪಾದನೆ ಅವರ ಗಂಡನಿಗಿಂತ ಹೆಚ್ಚಾಗಿದೆ. ಅವರು ಬಾಲಿವುಡ್‌ನ ಟಾಪ್ ನಟರಲ್ಲಿ ಒಬ್ಬರು ಮತ್ತು ಅವರ ಸ್ಟೈಲ್ ಹಾಗೂ ಲುಕ್ ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಆಕರ್ಷಿಸಿದೆ. ನಟಿ 2016 ರಲ್ಲಿ, ಕರಣ್ ಸಿಂಗ್ ಗ್ರೋವರ್ ಅವರನ್ನು ವಿವಾಹವಾದರು.
ಸೈಫ್ ಅಲಿ ಖಾನ್ ಅವರಂತಹ ಸ್ಪರ್ಧೆಯ ಮನೋಭಾವ ಉಳ್ಳದ ಸಂಗಾತಿಯನ್ನು ಹೊಂದಿರುವ ಕರೀನಾ ಕಪೂರ್ ಅತ್ಯಂತ ಸಂತೋಷ ಮಹಿಳೆ. ಸೈಫ್ ಕೇವಲ ಬಾಲಿವುಡ್‌ನ ಅತ್ಯಂತ ಜೆಂಟಲಮ್ಯಾನ್ ಮಾತ್ರವಲ್ಲ, ಅತ್ಯಂತ ಉದಾರವಾದ ಮನಸ್ಸಿನ ಬದುಕಲು ಅವಕಾಶ ಮಾಡಿಕೊಡುವ ವ್ಯಕ್ತಿ. ಅವರು ತನ್ನ ಹೆಂಡತಿಯ ಯಶಸ್ಸಿನ ಬಗ್ಗೆ ಅಸೂಯೆ ಪಟ್ಟಿಲ್ಲ.ಬದಲಾಗಿ, ಅವರು ಬಿಲ್‌ಗಳನ್ನು ಪಾವತಿಸುತ್ತಾರೆ ಎಂದು ಸೈಫ್ ಕೃತಜ್ಞನಾಗಿದ್ದಾರೆ.
ಅರ್ಚನಾ ಪುರಾನ್ ಸಿಂಗ್ ತನ್ನ ಸಂಗಾತಿಗಿಂತ ಹೆಚ್ಚು ಯಶಸ್ವಿಯಾಗಿದ್ದಾರೆ ಮತ್ತು ಅವರ ಪತಿ ಸಹ ಅದರ ಬಗ್ಗೆ ಸಾಕಷ್ಟು ಹೆಮ್ಮೆಪಡುತ್ತಾರೆ. ನಮ್ಮ ಜೀವನವು ಅಭಿಮಾನ್ ಚಲನಚಿತ್ರದಂತೆ ಇರುತ್ತದೆ ಹೆಂಡತಿಯ ವೃತ್ತಿಯು ತನ್ನ ಗಂಡನಿಗಿಂತ ವೇಗವಾಗಿ ಬೆಳೆಯುತ್ತದೆ ಎಂದು ಪಾರ್ಮೀತ್ ಮತ್ತು ನಾನು ತಮಾಷೆ ಮಾಡುತ್ತಿದ್ದೆವು. ಆದರೆ ಜೆಂಡರ್ ಸ್ಟೀರಿಯೊ ಟೈಪಿಂಗ್ ಎಂದಿಗೂ ಬಳಸಬಾರದು ಎಂದು ನಾನು ನಂಬುತ್ತೇನೆ ಮತ್ತು ಅದಕ್ಕೆ ಅಂಟಿಕೊಳ್ಳುವುದನ್ನು ಸಮಾಜವು ತಪ್ಪಿಸಬೇಕು ಎಂದು ಅರ್ಚನಾ ಪುರಾನ್ ಸಿಂಗ್ ಹೇಳಿದ್ದಾರೆ.