- Home
- Entertainment
- TV Talk
- ಬೇರೆ ರಾಜ್ಯಗಳಲ್ಲೂ ಡಿಮ್ಯಾಂಡ್ ಸೃಷ್ಟಿಸಿದ Ninna Jothe Nanna Kathe Serial: ಇದು ಕನ್ನಡದ ತಾಕತ್ತು!
ಬೇರೆ ರಾಜ್ಯಗಳಲ್ಲೂ ಡಿಮ್ಯಾಂಡ್ ಸೃಷ್ಟಿಸಿದ Ninna Jothe Nanna Kathe Serial: ಇದು ಕನ್ನಡದ ತಾಕತ್ತು!
Ninna Jothe Nanna Kathe Serial: ನಿನ್ನ ಜೊತೆ ನನ್ನ ಕಥೆ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಒಳ್ಳೆಯ ಟಿಆರ್‌ಪಿ ಪಡೆಯುತ್ತಿದೆ. ಇದು ಅಪ್ಪಟ ಕನ್ನಡದ ಕಥೆ. ಈಗ ಈ ಸೀರಿಯಲ್ ಖ್ಯಾತಿ ಬೇರೆ ರಾಜ್ಯಗಳಿಗೂ ಹರಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಕಾಂಟ್ರ್ಯಾಕ್ಟ್ ಮ್ಯಾರೇಜ್ ಕಥೆ
ಹೌದು, ಭೂಮಿ ಹಾಗೂ ಅಜಿತ್ ರಾಮ್‌ನಾರಾಯಣ್ ಕಥೆ ವೀಕ್ಷಕರಿಗೆ ಇಷ್ಟವಾಗಿದೆ. ಮನೆಯಲ್ಲಿ ಹೇಳುವ ಹುಡುಗಿಯನ್ನು ಮದುವೆ ಆಗಲು ಇಷ್ಟವಿಲ್ಲದ ಅಜಿತ್, ಭೂಮಿ ಜೊತೆ ಒಂದು ವರ್ಷದ ಮಟ್ಟಿಗೆ ಕಾಂಟ್ರ್ಯಾಕ್ಟ್ ಮ್ಯಾರೇಜ್ ಆಗುತ್ತಾನೆ. ಆಮೇಲೆ ಇಬ್ಬರಿಗೂ ಪ್ರೀತಿ ಹುಟ್ಟುವುದು.
ಮುಂದೆ ಇವರಿಬ್ಬರೂ ಒಂದಾಗ್ತಾರಾ?
ಪ್ರೀತಿ ಹುಟ್ಟಿದರೂ ಕೂಡ ಪರಸ್ಪರ ಇವರಿಬ್ಬರೂ ಒಂದಾಗೋದಿಲ್ಲ. ಇದೇ ಕಥೆ ಸುತ್ತ ಧಾರಾವಾಹಿ ಸಾಗುವುದಿಲ್ಲ. ಮುಂದೆ ಇವರಿಬ್ಬರು ಒಂದಾಗ್ತಾರಾ? ಬೇರೆ ಬೇರೆ ಸವಾಲುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕಿದೆ.
ಜನರಿಗೆ ಈ ಸೀರಿಯಲ್ ಇಷ್ಟ
ಅಜಿತ್, ಭೂಮಿ ಕೋಳಿ ಜಗಳ, ಇವರಿಬ್ಬರ ಕೆಮಿಸ್ಟ್ರಿ, ಡೈಲಾಗ್ ಡೆಲಿವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಕೂಡ ಇದೆ.
ಮಲಯಾಳಂ ಭಾಷೆಗೆ ರಿಮೇಕ್
ಹೌದು, ಈ ಧಾರಾವಾಹಿ ಈಗ ಮಲಯಾಳಂ ಭಾಷೆಗೆ ರಿಮೇಕ್ ಆಗುತ್ತಿದೆ. ಈಗಾಗಲೇ ಸೀರಿಯಲ್ ಪ್ರೋಮೋ ಶೂಟಿಂಗ್ ಕೂಡ ಆಗಿದೆ. ಕನ್ನಡದ ಕಥೆಯೊಂದು ಮಲಯಾಳಂ ಭಾಷೆಗೆ ರಿಮೇಕ್ ಆಗುತ್ತಿರೋದು ನಿಜಕ್ಕೂ ಖುಷಿಯ ವಿಷಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

