ಅಷ್ಟಕ್ಕೂ Ranbir Kapoorಗೂ ನಂಬರ್ 8ಕ್ಕೂ ಏನು ಕನೆಕ್ಷನ್ ಗೊತ್ತಾ?
ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಅವರ ಅದೃಷ್ಟ ಸಂಖ್ಯೆ 8 ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ ಈ ಸಂಖ್ಯೆಯ ಜೊತೆ ರಣಬೀರ್ ಕಪೂರ್ ಅವರಿಗೆ ಇರುವ ಕನೆಕ್ಷನ್ ಯಾವುದು ಎಂಬುದು ತಿಳಿದಿಲ್ಲ. ಈಗ ಸ್ವತಃ ರಣಬೀರ್ ಕಪೂರ್ ಅದರ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ರಣಬೀರ್ ಕಪೂರ್ ಅವರು 8 ನೇ ಸಂಖ್ಯೆಯ ಬಗ್ಗೆ ಏಕೆ ವಿಚಿತ್ರವಾದ ಆಕರ್ಷಣೆಯನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ನಟ ರಣಬೀರ್ ಕಪೂರ್ ಅವರಿಗೆ ಸಂಖ್ಯೆ 8 ಎಂದರೆ ತುಂಬಾ ಇಷ್ಟ. ದುಬೈನಲ್ಲಿ ಮಾಧ್ಯಮ ಸಂವಾದದ ಸಂದರ್ಭದಲ್ಲಿ, ಅವರು ಅದರ ಹಿಂದಿನ ನಿಜವಾದ ಕಾರಣವನ್ನು ಎಲ್ಲರೊಂದಿಗೆ ಹಂಚಿಕೊಂಡರು. ರಣಬೀರ್ ಕಪೂರ್ ಅವರು 8 ನೇ ಸಂಖ್ಯೆಯ ಬಗ್ಗೆ ಏಕೆ ವಿಚಿತ್ರವಾದ ಆಕರ್ಷಣೆಯನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಈ ದಿನಗಳಲ್ಲಿ ಸೆಲೆಬ್ರಿಟಿ ಫುಟ್‌ಬಾಲ್ ಕಪ್ 2022 ಗಾಗಿ ದುಬೈನಲ್ಲಿರುವ ರಣಬೀರ್ ಅಲ್ಲಿ ಮಾಧ್ಯಮ ಸಂವಾದದ ಸಮಯದಲ್ಲಿ ನಂಬರ್ 8 ರ ಜೊತೆ ತಮ್ಮ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.
ರಣಬೀರ್ ತಾಯಿಯ ಜನ್ಮ ಸಂಖ್ಯೆ 8. 'ನನಗೆ 8 ಸಂಖ್ಯೆಗೆ ವಿಚಿತ್ರವಾದ ಸಂಬಂಧವಿದೆ. ಏಕೆಂದರೆ ಇದು ನನ್ನ ತಾಯಿಯ ಜನ್ಮ ಸಂಖ್ಯೆ, ಜುಲೈ 8. ಜೊತೆಗೆ ನಾನು ಈ ಸಂಖ್ಯೆ ಕಾಣಿಸುವ ರೀತಿಯನ್ನು ಪ್ರೀತಿಸುತ್ತೇನೆ. ಇದನ್ನು ಅಡ್ಡಲಾಗಿ ನೋಡಿದರೆ, ಇದು ಅನಂತತೆಯ ಸಂಕೇತವಾಗಿದೆ. ಅದಕ್ಕಾಗಿಯೇ ನಾನು 8 ನಂಬರ್ ಅನ್ನು ಧರಿಸುತ್ತೇನೆ'.
ರಣಬೀರ್ ಕಪೂರ್ ಅವರ ಫುಟ್ಬಾಲ್ ಜೆರ್ಸಿಯಿಂದ ಅವರ ಪತ್ನಿ ಮತ್ತು ನಟಿ ಆಲಿಯಾ ಭಟ್ ಅವರ ಆಭರಣಗಳ ಮೇಲೆ '8' ಸಂಖ್ಯೆ ಕಾಣಿಸಿಕೊಂಡಿದೆ. ಆಲಿಯಾ ಭಟ್ ಅವರ ಮಂಗಳಸೂತ್ರದ ಪೆಂಡೆಂಟ್ ಸಹ 8ರ ಆಕಾರ ಹೊಂದಿದೆ. ಮದುವೆಯ ದಿನದಂದು ನಟಿ ಧರಿಸಿದ್ದ ವಜ್ರದ ಪೆಂಡೆಂಟ್ ಅನಂತತೆಯ ಸಂಕೇತವನ್ನು ಹೊಂದಿತ್ತು.
ರಣಬೀರ್ ಕಪೂರ್ 14 ಏಪ್ರಿಲ್ 2022 ರಂದು ಆಲಿಯಾ ಭಟ್ ಅವರನ್ನು ವಿವಾಹವಾದರು. ಮದುವೆಯಲ್ಲಿ ಕುಟುಂಬಸ್ಥರು ಮಾತ್ರ ಹಾಜರಿದ್ದರು. ಯಾಕೆಂದರೆ ರಣಬೀರ್ ಮತ್ತು ಆಲಿಯಾ ಇಬ್ಬರಿಗೂ ಮದುವೆಯಲ್ಲಿ ಹೆಚ್ಚು ಆಡಂಬರ ಬೇಕಾಗಿಲ್ಲ.
ಇತ್ತೀಚಿನ ಸಂದರ್ಶನವೊಂದರಲ್ಲಿ, ರಣಬೀರ್ ತಾಯಿ ನೀತು ಕಪೂರ್, ರಿಷಿ ಕಪೂರ್ ತನ್ನ ಮಗ ತುಂಬಾ ಗ್ರ್ಯಾಂಡ್ ಮದುವೆಯಾಗಬೇಕೆಂದು ಬಯಸಿದ್ದರು ಎಂದು ಹೇಳಿದ್ದಾರೆ. ಆದರೆ ರಣಬೀರ್ ಯಾವಾಗಲೂ ಸಣ್ಣ ಪ್ರಮಾಣದಲ್ಲಿ ಮದುವೆಯನ್ನು ಬಯಸಿದ್ದರು ಮತ್ತು ಅದಕ್ಕಾಗಿ ಅವರು ತಮ್ಮ ತಂದೆಯನ್ನು ಒಪ್ಪಿಸುತ್ತಿದ್ದರು.
'ಅವರು (ರಿಷಿ) ಶೋಮ್ಯಾನ್ ಮತ್ತು ಅವರು (ರಣಬೀರ್) ಶೋಮ್ಯಾನ್ ಮಗ. ಅವರು ತಮ್ಮ ತಂದೆಯನ್ನು ಒಪ್ಪಿಸಿದ್ದರು. ರಣಬೀರ್ ತುಂಬಾ ಶಾಂತ' ಎಂದು ನೀತು ಹೇಳಿದರು.
ರಣಬೀರ್ ಅನೇಕ ಚಲನಚಿತ್ರಗಳನ್ನು ಹೊಂದಿದ್ದು, ಅದು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ. ಇವುಗಳಲ್ಲಿ ಅಯನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ', ಕರಣ್ ಮಲ್ಹೋತ್ರಾ ನಿರ್ದೇಶನದ 'ಶಂಶೇರಾ', ಲವ್ ರಂಜನ್ ಅವರ ಹೆಸರಿಡದ ಚಿತ್ರ ಮತ್ತು ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಆನಿಮಲ್' ಸೇರಿವೆ.