- Home
- Entertainment
- Cine World
- Disha Patani: ಹಾಲಿವುಡ್ ಚಿತ್ರದಲ್ಲಿ ದಿಶಾ ಪಟಾನಿ; ಆ ನಟನೊಂದಿಗೆ ರೊಮಾನ್ಸ್.. ಚಾನ್ಸ್ ಸಿಗೋ ಸೀಕ್ರೆಟ್ ಹೇಳಿದ ನಟಿ!
Disha Patani: ಹಾಲಿವುಡ್ ಚಿತ್ರದಲ್ಲಿ ದಿಶಾ ಪಟಾನಿ; ಆ ನಟನೊಂದಿಗೆ ರೊಮಾನ್ಸ್.. ಚಾನ್ಸ್ ಸಿಗೋ ಸೀಕ್ರೆಟ್ ಹೇಳಿದ ನಟಿ!
'ಕೆವಿನ್ ಸ್ಪೇಸಿ ಅದ್ಭುತ ನಿರ್ದೇಶಕ. ಅವರು ನಟರಿಗೆ ಬಹಳಷ್ಟು ಸ್ವಾತಂತ್ರ್ಯ ಕೊಡುತ್ತಾರೆ. ಪ್ರತಿಯೊಂದು ಸೀನ್‌ಗೂ ನಮ್ಮ ಭಾವನೆಗಳನ್ನು ಹೇಗೆ ತೋರಿಸಬೇಕು ಎಂದು ಚರ್ಚೆ ಮಾಡುತ್ತಿದ್ದರು, ರಿಹರ್ಸಲ್ ಹಾಗೂ ಡಿಬೇಟ್ ಮಾಡಿಸುತ್ತಿದ್ದರು. ಅವರ ಜೊತೆ ಕೆಲಸ ಮಾಡಿದ್ದು ನನಗೆ ಹೊಸ ಅನುಭವ ನೀಡಿದೆ'

ಬಾಲಿವುಡ್ ನಟಿ ದಿಶಾ ಪಟಾನಿ (Disha Patani) ಈಗ ಹಾಲಿವುಡ್‌ನಲ್ಲೂ(Hollywood) ತಮ್ಮ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ. ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಮತ್ತು ಟಬು ಅವರ ಬಳಿಕ, ದಿಶಾ ಕೂಡ ಹಾಲಿವುಡ್ ಸಿನಿಮಾ ಮೂಲಕ ಅಂತರರಾಷ್ಟ್ರೀಯ ಸಿನಿ ವೇದಿಕೆಗೆ ಕಾಲಿಡುತ್ತಿದ್ದಾರೆ. ದಿಶಾಗೆ ಬಂದಿರುವ ಅವಕಾಶ ಅಂತಿಂಥದಲ್ಲ, ಈ ಸ್ಟೋರಿ ನೋಡಿ..
ದಿಶಾ ಪಟಾನಿ, ಆಸ್ಕರ್ ಪ್ರಶಸ್ತಿ ವಿಜೇತ ನಟ ಕೆವಿನ್ ಸ್ಪೇಸಿ ನಿರ್ದೇಶನದ ‘Hooligards Saga: The Portal of Force’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸುದ್ದಿ ತಿಳಿದಿದ್ದೇ ತಡ, ದಿಶಾ ಹಾಗೂ ಕೆವಿನ್ ಸ್ಪೇಸಿ ಅಭಿಮಾನಿಗಳು ಅವರಿಬ್ಬರ ರೊಮಾನ್ಸ್ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
ತಮಗೆ ಸಿಕ್ಕ ಈ ಸಿನಿಮಾ ಚಾನ್ಸ್ ಬಗ್ಗೆ ಮಾತನಾಡಿರುವ ದಿಶಾ, ಕೆವಿನ್ ಸ್ಪೇಸಿ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. 'ಕೆವಿನ್ ಸ್ಪೇಸಿ ಅದ್ಭುತ ನಿರ್ದೇಶಕ. ಅವರು ನಟರಿಗೆ ಬಹಳಷ್ಟು ಸ್ವಾತಂತ್ರ್ಯ ಕೊಡುತ್ತಾರೆ. ಪ್ರತಿಯೊಂದು ಸೀನ್‌ಗೂ ನಮ್ಮ ಭಾವನೆಗಳನ್ನು ಹೇಗೆ ತೋರಿಸಬೇಕು ಎಂದು ಚರ್ಚೆ ಮಾಡುತ್ತಿದ್ದರು, ರಿಹರ್ಸಲ್ ಹಾಗೂ ಡಿಬೇಟ್ ಮಾಡಿಸುತ್ತಿದ್ದರು. ಅವರ ಜೊತೆ ಕೆಲಸ ಮಾಡಿದ್ದು ನನಗೆ ಹೊಸ ಅನುಭವ ನೀಡಿದೆ' ಎಂದು ಹೇಳಿದ್ದಾರೆ.
ಹಾಲಿವುಡ್ ಚಾನ್ಸ್ ಸೀಗೋದು ಅಷ್ಟು ಸುಲಭವಲ್ಲ!
ನಟಿ ದಿಶಾ ಪಟಾನಿ 'ಹಾಲಿವುಡ್‌ನಲ್ಲಿ ಅವಕಾಶ ಪಡೆಯುವುದು ಸುಲಭವಲ್ಲ. ಭಾರತದಲ್ಲೇ ಕುಳಿತು ಹಾಲಿವುಡ್‌ನಲ್ಲಿ ಪಾತ್ರ ಸಿಗುತ್ತದೆ ಎಂದು ನಿರೀಕ್ಷೆ ಮಾಡಬಾರದು. ಆಡಿಷನ್, ಏಜೆನ್ಸಿ, ವೀಸಾ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ದಾಟಬೇಕು. ಮೊದಲು ಅಲ್ಲಿಗೆ ಹೋಗಬೇಕು, ಅಲ್ಲೇ ಇದ್ದು ಪ್ರಯತ್ನ ಮಾಡಬೇಕು, ಆಗ ಮಾತ್ರ ಅವಕಾಶ ಸಿಗುವ ಸಂಭವ ಜಾಸ್ತಿ ಇರುತ್ತವೆ. ಇನ್ನು ಹಾಲಿವುಡ್‌ನಲ್ಲಿ ಆಡಿಷನ್ ಪ್ರಕ್ರಿಯೆ ತುಂಬಾ ವೃತ್ತಿಪರವಾಗಿರುತ್ತದೆ. ಕೆಲವೊಮ್ಮೆ ನಿಮ್ಮ ಹಿಂದಿನ ಕೆಲಸ ನೋಡಿ ಅವಕಾಶ ಸಿಗಬಹುದು. ಆದರೆ, ಹೆಚ್ಚಿನ ಪಾತ್ರಗಳಿಗೆ ಆಡಿಷನ್ ಕಡ್ಡಾಯವಾಗಿರುತ್ತದೆ, ಶಾರ್ಟ್ ಕಟ್ ಅಲ್ಲಿ ನಡೆಯಲ್ಲ' ಎಂದಿದ್ದಾರೆ.
ದಿಶಾ ಪಟಾನಿ ಈಗಾಗಲೇ ಈ ಸಿನಿಮಾದ ಶೂಟಿಂಗ್‌ನಲ್ಲಿ ನರತರಾಗಿದ್ದಾರೆ. ಈ ಮೂಲಕ ದಿಶಾ ಪಟಾನಿ ಜಾಗತಿಕ ಸಿನಿ ಪ್ರೇಕ್ಷಕರ ಮುಂದೆ ತಮ್ಮ ಪ್ರತಿಭೆ ತೋರಿಸಲು ಸಜ್ಜಾಗಿದ್ದಾರೆ. ಹಾಲಿವುಡ್‌ನಲ್ಲಿ ಅವರ ಮೊದಲ ಸಿನಿಮಾ 'ಹೂಲಿಗಾರ್ಡ್ ಸಾಗಾ: ದಿ ಪೋರ್ಟ್‌ಲ್ ಆಫ್ ಫೋರ್ಸ್' ಚಿತ್ರವು ಯಾವ ಮಟ್ಟಿಗೆ ಸದ್ದು ಮಾಡಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.