'ಒಂದು ಸಿನೆಮ ಚಿತ್ರಮಂದಿರದಲ್ಲಿ ನೋಡುವ ಅನುಭವವನ್ನೇ ಅತ್ಯಂತ ದುಬಾರಿ ಮಾಡಿರುವ ಮಲ್ಟಿಫ್ಲೆಕ್ಸ್‌ ( Multiplex) ಗಳು ಒಂದು ಕಡೆ. ಸುಲಭವಾಗಿ ಮನೆಯಲ್ಲೇ ನೋಡಲು ಸಾಧ್ಯ ಮಾಡಿಕೊಟ್ಟ OTT ಗಳು ಮತ್ತೊಂದು ಕಡೆ. ಈ ಎರಡರ ಒತ್ತಡ ಅರಿಯದೇ ಹಿಂದಿನಂತೆ ಬಹಳ ಜಾಸ್ತಿ ಸಂಭಾವನೆ ಬಯಸುವ ನಟರು-ತಂತ್ರಜ್ಞರು ಇನ್ನೊಂದು ಕಡೆ.

ಕನ್ನಡ ಚಿತ್ರರಂಗ ಅವನತಿಯ ಕಡೆ ಸಾಗುತ್ತಿದೆ ಕೆಎಂ ಚೈತನ್ಯ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಯಾಂಡಲ್‌ವುಡ್ ಸಿನಿರಂಗಕ್ಕೆ ಹಲವು ಸಿನಿಮಾ ಕೊಡುಗೆ ಕೊಟ್ಟಿರುವ ನಿರ್ದೇಶಕ ಕೆಎಂ ಚೈತನ್ಯ (KM Chaitanya) ಅವರು ಇದೀಗ ಹೊಸದೊಂದು ಹೇಳಿಕೆ ಕೊಡುವ ಮೂಲಕ ಭಾರೀ ಸಂಚಲನ ಸೃಷ್ಟಿಸಿದ್ದಾರೆ. 'ಆ ದಿನಗಳು, ಆಟಗಾರ, ಸೂರ್ಯಕಾಂತಿ, ಪರಾರಿ, ಬಲರಾಮ ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕೆಎಂ ಚೈತನ್ಯ ಅವರು 'ಕನ್ನಡ ಚಿತ್ರರಂಗದ ಅವನತಿ' ಬಗ್ಗೆ ಮಾತನ್ನಾಡಿದ್ದಾರೆ. ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ.

ಕೆಎಂ ಚೈತನ್ಯ ಪೋಸ್ಟ್‌ನಲ್ಲಿ ಏನಿದೆ?

'ಒಂದು ಸಿನೆಮ ಚಿತ್ರಮಂದಿರದಲ್ಲಿ ನೋಡುವ ಅನುಭವವನ್ನೇ ಅತ್ಯಂತ ದುಬಾರಿ ಮಾಡಿರುವ Multiplex ಗಳು ಒಂದು ಕಡೆ. ಸುಲಭವಾಗಿ ಮನೆಯಲ್ಲೇ ನೋಡಲು ಸಾಧ್ಯ ಮಾಡಿಕೊಟ್ಟ OTT ಗಳು ಮತ್ತೊಂದು ಕಡೆ. ಈ ಎರಡರ ಒತ್ತಡ ಅರಿಯದೇ ಹಿಂದಿನಂತೆ ಬಹಳ ಜಾಸ್ತಿ ಸಂಭಾವನೆ ಬಯಸುವ ನಟರು-ತಂತ್ರಜ್ಞರು ಇನ್ನೊಂದು ಕಡೆ. ಇವೆಲ್ಲವೂ ಸೇರಿ ನಮ್ಮ ಚಿತ್ರರಂಗ ಅವನತಿಯ ಕಡೆ ಸಾಗುತ್ತಿದೆ. ಇದನ್ನು ತಡೆಯಲು ಎಲ್ಲರೂ ಸೇರಿ ಯೋಚನೆ ಮಾಡಬೇಕಿದೆ' ಎಂದು ಅವರು ಪೋಸ್ಟ್ ಮಾಡಿದ್ದಾರೆ.

ನಿರ್ದೇಶಕ ಕೆಎಂ ಚೈತನ್ಯ ಅವರ ಪೋಸ್ಟ್‌ಗೆ ಸಹಜವಾಗಿಯೇ ಸಾಕಷ್ಟು ಪರ-ವಿರೋಧಧ ಚರ್ಚೆಗಳು ಆರಂಭವಾಗಿವೆ. ಕೆಎಂ ಚೈತನ್ಯ ಅವರು ಯಾವುದೇ ನಟರ ಹೆಸರು ಹೇಳಿಲ್ಲ. ಸದ್ಯ ಕನ್ನಡ ಚಿತ್ರರಂಗದ 'ಕರಾವಳಿ' ವಿವಾದವನ್ನೂ ಸಹ ಉಲ್ಲೇಖಿಸಿಲ್ಲ. ಹೀಗಾಗಿ ಅವರ ಪೋಸ್ಟ್‌ಗೆ ಯಾರೂ ಕೂಡ ಯಾರನ್ನೂ ಎಳೆದು ತರುವ ಅಗತ್ಯವಿಲ್ಲ. ಎಕೆಂದರೆ, ಕೆಎಂ ಚೈತನ್ಯ ಅವರೂ ಸಹ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ, ಹಲವು ಹೀರೋಗಳ ಜೊತೆಗೆ ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ಹೇಳಿರೋ ಮಾತು ಇಡೀ ಕನ್ನಡ ಚಿತ್ರರಂಗ, ಅದರ ಬೆಳವಣಿಗೆಯನ್ನು ಕುರಿತು ಹೇಳಿದ್ದು. ಅದು ಯಾವುದೇ ನಿರ್ಧಿಷ್ಟವಾಗಿ ಯಾವುದೇ ನಟರನ್ನು ಕುರಿತು ಹೇಳಿದ್ದಲ್ಲ ಎನ್ನಬಹುದು. ಇದೇ ಅನಿಸಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ಹೇಳುತ್ತಿದ್ದಾರೆ.

ಪೋಸ್ಟ್ ಹಾಗೂ ಚರ್ಚೆಯ ಸಾರಾಂಶವೇನು?

ಅದೇನೇ ಆಗಿರಲಿ, ಕೆಎಂ ಚೈತನ್ಯ ಹೇಳಿಕೆಗೆ ಲಿಂಗದೇವರು, ನಾಗೇಂದ್ರ ಪ್ರಸಾದ್ ಸೇರಿದಂತೆ ಕೆಲವು ಕನ್ನಡದ ನಿರ್ದೇಶಕರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಎಲ್ಲಾ ಹೇಳಿಕೆಗಳ ಸಾರ ಒಂದೇ, ಅದು ಕನ್ನಡ ಚಿತ್ರರಂಗ ಸದ್ಯಕ್ಕೆ ಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಕನ್ನಡ ಚಿತ್ರರಂಗದ ಅವನತಿಯನ್ನು ತಡೆಯಬೇಕಾದರೆ ಎಲ್ಲಾ ನಿರ್ಮಾಪಕರು, ನಟನಟಿಯರು, ತಂತ್ರಜ್ಞರು ಸೇರಿದಂತೆ ಎಲ್ಲರೂ ಮಾತುಕತೆಯಲ್ಲಿ ಪಾಲ್ಗೊಂಡು ಒಮ್ಮತದ ಅಭಿಪ್ರಾಯಕ್ಕೆ ಬರಬೇಕು. ಚಿತ್ರಗಳನ್ನು ಮೊದಲು ಥಿಯೇಟರ್‌ನಲ್ಲಿ ಬಿಡುಗಡೆ ಮಾಡಿ ಆ ಬಳಿಕ ಟಿವಿ ಹಾಗೂ ಒಟಿಟಿ ಮೂಲಕ ಪ್ರೇಕ್ಷಕರು ಮನೆಯಲ್ಲೇ ಕುಳಿತು ನೋಡುವಂತೆ ಆಗಬೇಕು' ಎಂಬ ಅಭಿಪ್ರಾಯ ಎಲ್ಲರ ಪೋಸ್ಟ್ ಸಾರಾಂಶ ಎನ್ನಬಹುದು.