ಜಿಯೋ ಟಿವಿ ಪ್ರೋ ಪ್ಯಾಕ್ ಲಾಂಚ್, ಕೇವಲ 55 ರೂಪಾಯಿಗೆ 1000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ ಲಭ್ಯ
ಜಿಯೋ ಇದೀಗ ಮತ್ತೊಂದು ಆಫರ್ ಮೂಲಕ ಬಂಪರ್ ಕೊಡುಗೆ ನೀಡಿದೆ. ಕೇವಲ 55 ರೂಪಾಯಿಗೆ 30 ದಿನಗಳ ವ್ಯಾಲಿಟಿಡಿಯಲ್ಲಿ ಬರೋಬ್ಬರಿ 1000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಸ್ ನೀಡುತ್ತಿದೆ. ಹೊಸ ಪ್ಲಾನ್ ಕುರಿತ ಡಿಟೇಲ್ಸ್ ಇಲ್ಲಿದೆ.

55 ರೂಪಾಯಿಗೆ 1000ಕ್ಕೂ ಹೆಚ್ಚು ಚಾನೆಲ್
ರಿಲಯನ್ಸ್ ಜಿಯೋ ಮತ್ತೊಂದು ಹೊಸ ಆಫರ್ ಮೂಲಕ ಧೂಳೆಬ್ಬಿಸಿದೆ. ಇದೀಗ ರಿಲಯನ್ಸ್ ಜಿಯೋ ಟಿವಿ ಪ್ರೊ ಪ್ಯಾಕ್ ಕೇವಲ 55 ರೂಪಾಯಿಗೆ ಬಿಡುಗಡೆ ಮಾಡಿದೆ. ಇದು 30 ದಿನಗಳ ವ್ಯಾಲಿಟಿಡಿ ಹೊಂದಿದೆ ಈ ಪ್ಯಾಕ್ ಮೂಲಕ, ಬಳಕೆದಾರರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಜಿಯೋ ಟಿವಿ ಅಪ್ಲಿಕೇಶನ್ ಮೂಲಕ 1000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಆನಂದಿಸಲು ಸಾಧ್ಯ.
1000 ಚಾನೆಲ್ ವಿಶೇಷತೆ, ಯಾವೆಲ್ಲಾ ಚಾನೆಲ್ ಲಭ್ಯ
ಈ ಹೊಸ ಯೋಜನೆಯಲ್ಲಿ 16 ಕ್ಕೂ ಹೆಚ್ಚು ಭಾಷಾ ಚಾನೆಲ್‌ಗಳನ್ನು ಸೇರಿಸಲಾಗಿದೆ. ಇದರಲ್ಲಿ 150 ಕ್ಕೂ ಹೆಚ್ಚು ಪ್ರೀಮಿಯಂ ಚಾನೆಲ್‌ಗಳು ಸಹ ಲಭ್ಯವಿರುತ್ತವೆ. ವೀಕ್ಷಕರು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಮನರಂಜನೆ, ಚಲನಚಿತ್ರಗಳು, ಸುದ್ದಿಗಳು, ಮಕ್ಕಳ ಕಾರ್ಯಕ್ರಮಗಳು ನೋಡಬಹುದು. ಈ ಪ್ಯಾಕ್, ಸ್ಟಾರ್ ಪ್ಲಸ್ ಎಚ್‌ಡಿ, ಕಲರ್ಸ್ ಎಚ್‌ಡಿ, ಸೋನಿ ಎಂಟರ್ ಟೈನ್‌ಮೆಂಟ್ ಟೆಲಿವಿಷನ್ ಎಚ್‌ಡಿ, ಸೋನಿ ಎಸ್‌ಎಬಿ ಎಚ್‌ಡಿ, ಡಿಸ್ಕವರಿ, ಅನಿಮಲ್ ಪ್ಲಾನೆಟ್, ಸನ್ ಟಿವಿ ನೆಟ್ವರ್ಕ್, ಇಟಿವಿ ಸೇರಿದಂತೆ ದೇಶದ ಪ್ರಮುಖ, ಜನಪ್ರಿಯ ಚಾನೆಲ್‌ಗಳನ್ನು ಒಳಗೊಂಡಿದೆ. ಆದರೆ ಜಿಯೋಸ್ಟಾರ್ ಮತ್ತು ಸೋನಿಯ ಸ್ಪೋರ್ಟ್ಸ್ ಚಾನೆಲ್‌ಗಳು ಈ ಪ್ಯಾಕ್‌ನ ಭಾಗವಾಗುವುದಿಲ್ಲ.
ರೀಚಾರ್ಜ್ ಬೆನ್ನಲ್ಲೇ ಆಟೋಮ್ಯಾಟಿಕ್ ಆಗಿ ಸಕ್ರೀಯ
ಈ ಸೇವೆಯನ್ನು ಪಡೆಯಲು, ಗ್ರಾಹಕರು ಕೇವಲ ₹ 55 ರೀಚಾರ್ಜ್ ಮಾಡಬೇಕಾಗುತ್ತದೆ. ಇದರ ನಂತರ, ನಿಮ್ಮ ಜಿಯೋ ಸಂಖ್ಯೆಯೊಂದಿಗೆ ಜಿಯೋ ಟಿವಿ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿದ ತಕ್ಷಣ ಲಭ್ಯವಿರುವ ಎಲ್ಲಾ ಪ್ರೀಮಿಯಂ ಚಾನೆಲ್‌ಗಳು ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತವೆ. ಇದಕ್ಕೆ ಯಾವುದೇ ಪ್ರತ್ಯೇಕ ಸಕ್ರಿಯಗೊಳಿಸುವಿಕೆಯ ಅಗತ್ಯವಿಲ್ಲ.
ಮನೋರಂಜನೆ ಪ್ಯಾಕ್
ಇದು ಮನರಂಜನೆಯ ಪ್ಯಾಕ್ ಆಗಿದೆ. ಇದು ಧ್ವನಿ ಕರೆಗಳು ಅಥವಾ ಎಸ್ಎಂಎಸ್ ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿಲ್ಲ. ಈ ಸೇವೆಯನ್ನು ಬಳಸಲು ಗ್ರಾಹಕರು ಸಕ್ರಿಯ ಜಿಯೋ ಪ್ರೀಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ಸಂಪರ್ಕವನ್ನು ಹೊಂದಿರಬೇಕು. ಈ ಪ್ಯಾಕ್ ಜಿಯೋ ಟಿವಿ ಅಪ್ಲಿಕೇಶನ್ ಮೂಲಕ ಒಂದು ಟೈಮ್‌ನಲ್ಲಿ ಕೇವಲ ಒಂದು ಮೊಬೈಲ್‌ನಲ್ಲಿ ಬಳಸಬಹುದು.
ಕೈಗೆಟುಕುವ ಬೆಲೆಯಲ್ಲಿ ಬಿಗ್ ಬಂಪರ್
ಜಿಯೋದ ಈ ಹೊಸ 55 ರೂ.ಗಳ ಜಿಯೋ ಟಿವಿ ಪ್ರೊ ಪ್ಯಾಕ್ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ರೀಚಾರ್ಜ್ ಮಾಡಲು ಲಭ್ಯವಿದೆ. ಈಗ ವೀಕ್ಷಕರು ತಮ್ಮ ನೆಚ್ಚಿನ ಟಿವಿ ಧಾರಾವಾಹಿಗಳು, ಬ್ರೇಕಿಂಗ್ ನ್ಯೂಸ್, ಮಕ್ಕಳ ವ್ಯಂಗ್ಯಚಿತ್ರಗಳು ಮತ್ತು ಪ್ರಾದೇಶಿಕ ಭಾಷಾ ಕಾರ್ಯಕ್ರಮಗಳನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಆನಂದಿಸಲು ಸಾಧ್ಯವಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

