Astrology Predictions: ಬುಧನ ಕೃಪೆಯಿಂದ ಈ 4 ರಾಶಿಯವರಿಗೆ ಒಲಿಯಲಿದೆ ಜಾಕ್‌ಪಾಟ್
ಬುಧ ಗ್ರಹ ಹಸ್ತ ನಕ್ಷತ್ರ ಪ್ರವೇಶ ಮಾಡಿರೋದ್ರಿಂದ 4 ರಾಶಿಯವರ ಅದೃಷ್ಟವೇ ಬದಲಾಗಲಿದೆ. ಇವರಿಗೆ ಬ್ಯುಸಿನೆಸ್‌ನಲ್ಲಿ ಭರ್ಜರಿ ಲಾಭ, ಹೊಸ ಕೆಲಸದ ಆಫರ್ ಜೊತೆಗೆ ಅನಿರೀಕ್ಷಿತ ಹಣದ ಹರಿವು ಸಿಗಲಿದೆ. ಆ ಲಕ್ಕಿ ರಾಶಿಗಳು ಯಾವುವು ಅಂತ ಇಲ್ಲಿ ನೋಡೋಣ.

ಬುಧ ಸಂಚಾರ 2026
ನವಗ್ರಹಗಳ ರಾಜಕುಮಾರ ಅಂತಾನೇ ಕರೆಸಿಕೊಳ್ಳುವ ಬುಧ ಗ್ರಹ, ಸದ್ಯ ತನ್ನದೇ ರಾಶಿಯಾದ ಕನ್ಯಾ ರಾಶಿಯಲ್ಲಿದ್ದಾನೆ. ಇದರ ಜೊತೆಗೆ ಚಂದ್ರನ ಆಳ್ವಿಕೆಯಲ್ಲಿರುವ 'ಹಸ್ತ ನಕ್ಷತ್ರ'ದಲ್ಲಿ ಬುಧ ಸಂಚರಿಸುತ್ತಿದ್ದಾನೆ. ಕನ್ಯಾ ರಾಶಿಯಲ್ಲಿ ಬುಧ ಬಲಶಾಲಿಯಾಗಿರೋದ್ರಿಂದ ಹಾಗೂ ಹಸ್ತ ನಕ್ಷತ್ರದ ಸಂಚಾರ ಸೇರಿರೋದ್ರಿಂದ ವಿಶೇಷ ಫಲಗಳು ಸಿಗಲಿವೆ. ಸೆಪ್ಟೆಂಬರ್ 21ರವರೆಗೆ ಬುಧ ಇದೇ ನಕ್ಷತ್ರದಲ್ಲಿ ಇರುತ್ತಾನೆ.
ಬುಧನ ಈ ನಕ್ಷತ್ರ ಬದಲಾವಣೆಯಿಂದ ಕೆಲವು ರಾಶಿಯವರು ಉದ್ಯೋಗ, ವ್ಯಾಪಾರ ಹಾಗೂ ಹೂಡಿಕೆಯಲ್ಲಿ ಭಾರಿ ಪ್ರಗತಿ ಕಾಣಲಿದ್ದಾರೆ. ಆ ಅದೃಷ್ಟದ ರಾಶಿಗಳು ಯಾವುವು ಅಂತ ನೋಡೋಣ.
1. ಮಿಥುನ ರಾಶಿ
ಮಿಥುನ ರಾಶಿಯವರು ತಮ್ಮ ವೃತ್ತಿಜೀವನದ ಗುರಿಗಳನ್ನು ಈ ಅವಧಿಯಲ್ಲಿ ಬೇಗನೆ ತಲುಪುತ್ತಾರೆ. ನಿಮ್ಮ ಬಾಕಿ ಉಳಿದಿದ್ದ ಕೆಲಸಗಳೆಲ್ಲಾ ಯಶಸ್ವಿಯಾಗಿ ಮುಗಿಯಲಿವೆ. ಆಫೀಸ್‌ನಲ್ಲಿ ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದ್ದು, ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ.
ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸುವಂತಹ ವಿಶೇಷ ವ್ಯಕ್ತಿಯೊಬ್ಬರ ಪರಿಚಯ ನಿಮಗಾಗಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗೋದ್ರಿಂದ ಎಂಥದ್ದೇ ಸವಾಲುಗಳನ್ನಾದರೂ ಧೈರ್ಯದಿಂದ ಎದುರಿಸಿ ಗೆಲ್ಲುತ್ತೀರಿ. ಕುಟುಂಬದಲ್ಲಿ ನೆಮ್ಮದಿ ಇರಲಿದ್ದು, ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.
2. ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರ ಜೀವನದಲ್ಲಿ ದೊಡ್ಡ ಮಟ್ಟದ ಏಳಿಗೆಯಾಗಲಿದೆ. ನಿಮ್ಮ ಸ್ಪಷ್ಟ ಮಾತುಗಾರಿಕೆಯಿಂದ ಎಂಥದ್ದೇ ಕಠಿಣ ಸಮಸ್ಯೆಗಳನ್ನಾದರೂ ಸುಲಭವಾಗಿ ಬಗೆಹರಿಸುತ್ತೀರಿ. ಇಲ್ಲಿಯವರೆಗೆ ನಿಮ್ಮ ಕೆರಿಯರ್‌ನಲ್ಲಿದ್ದ ಅಡೆತಡೆಗಳೆಲ್ಲಾ ದೂರವಾಗಲಿವೆ. ಆರ್ಥಿಕ ಸ್ಥಿತಿ ತುಂಬಾನೇ ಬಲಗೊಳ್ಳಲಿದೆ.
ಹಲವು ಮೂಲಗಳಿಂದ ಹಣ ನಿಮ್ಮ ಕೈಸೇರಲಿದೆ. ಖರ್ಚುಗಳು ಕಡಿಮೆಯಾಗಿ, ಉಳಿತಾಯ ಹೆಚ್ಚಾಗಲಿದೆ. ಹೊಸ ಕೆಲಸ ಹುಡುಕುತ್ತಿರುವವರಿಗೆ ಒಳ್ಳೆ ಆಫರ್ ಸಿಗಲಿದೆ. ಕೆಲಸದಲ್ಲಿರುವವರಿಗೆ ಪ್ರಮೋಷನ್ ಸಿಗುವ ಚಾನ್ಸ್ ತುಂಬಾನೇ ಇದೆ. ಒಟ್ಟಾರೆಯಾಗಿ ನಿಮ್ಮ ಜೀವನದಲ್ಲಿ ಯಶಸ್ಸು ಮತ್ತು ಅದೃಷ್ಟ ಒಟ್ಟಿಗೆ ಸಾಗಲಿವೆ.
3. ಕನ್ಯಾ ರಾಶಿ
ಬುಧ ನಿಮ್ಮದೇ ರಾಶಿಯಲ್ಲಿ ಸಂಚರಿಸುತ್ತಿರೋದ್ರಿಂದ, ಹೂಡಿಕೆ ಹಾಗೂ ವ್ಯಾಪಾರದಲ್ಲಿ ನಿಮಗೆ ಅನಿರೀಕ್ಷಿತ ಲಾಭ ಸಿಗಲಿದೆ. ಸ್ವಂತ ಬ್ಯುಸಿನೆಸ್ ಮಾಡುತ್ತಿರುವವರು ತಮ್ಮ ವ್ಯಾಪಾರವನ್ನು ವಿಸ್ತರಿಸಲಿದ್ದು, ಲಾಭದಾಯಕ ಡೀಲ್‌ಗಳನ್ನು ಕುದುರಿಸಲಿದ್ದಾರೆ. ದೀರ್ಘಾವಧಿ ಹೂಡಿಕೆ ಮಾಡಲು ಇದು ಹೇಳಿ ಮಾಡಿಸಿದ ಸಮಯ.
ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಹೊಸ ಸ್ಕಿಲ್‌ಗಳನ್ನು ಕಲಿಯಲು ಇದು ಬೆಸ್ಟ್ ಟೈಮ್. ಪೋಷಕರ ಆರೋಗ್ಯ ಸುಧಾರಿಸಲಿದೆ. ವಿದೇಶದಲ್ಲಿ ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್ ಸಿಗಲಿದೆ.
4. ಸಿಂಹ ರಾಶಿ
ಸಿಂಹ ರಾಶಿಯವರಿಗೆ ಬುಧನ ಈ ನಕ್ಷತ್ರ ಸಂಚಾರದಿಂದ ಅನಿರೀಕ್ಷಿತ ಹಣದ ಹರಿವು ಸಿಗಲಿದೆ. ಆರ್ಥಿಕವಾಗಿ ದಿಢೀರ್ ಪ್ರಗತಿ ಕಾಣಲಿದ್ದೀರಿ. ಬಹಳ ದಿನಗಳಿಂದ ಬರಬೇಕಿದ್ದ ಹಣ ನಿಮ್ಮ ಕೈಸೇರಲಿದೆ. ಸಮಾಜದಲ್ಲಿ ನಿಮ್ಮ ಗೌರವ, ಪ್ರತಿಷ್ಠೆ ಹೆಚ್ಚಾಗಲಿದೆ. ಬ್ಯುಸಿನೆಸ್ ಪಾರ್ಟ್‌ನರ್‌ಗಳಿಂದ ಒಳ್ಳೆ ಲಾಭ ಗಳಿಸುತ್ತೀರಿ.
ನಿಮ್ಮ ಅದ್ಭುತ ಮಾತುಗಾರಿಕೆಯಿಂದಲೇ ಹಲವು ಕೆಲಸಗಳನ್ನು ಸುಲಭವಾಗಿ ಸಾಧಿಸುತ್ತೀರಿ. ಕಲೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ವಿಶೇಷ ಮನ್ನಣೆ ಸಿಗಲಿದೆ. ಕುಟುಂಬದಲ್ಲಿ ಖುಷಿಯ ವಾತಾವರಣ ಇರಲಿದ್ದು, ದೂರದ ಪ್ರಯಾಣದಿಂದ ಭರ್ಜರಿ ಲಾಭ ಪಡೆಯಲಿದ್ದೀರಿ.