Chanakya Niti: ಮದುವೆ ಆಗುವ ಹುಡುಗ ಬಡವನಿದ್ರೂ ಸರಿ, ಚಾಣಕ್ಯ ಹೇಳುವಂತೆ ಈ 5 ಗುಣಗಳಿರಲಿ!
ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಅನ್ನೋದು ಪ್ರಮುಖ ಘಟ್ಟ. ಬಹುಮುಖ್ಯ ನಿರ್ಧಾರಗಳಲ್ಲಿ ಒಂದು. ಮೊದಲ ಭೇಟಿಯಲ್ಲಿ ಇಷ್ಟವಾದರೆಂದೋ ಮದುವೆ ಆದವರಿದ್ದಾರೆ. ಆಕರ್ಷಕ ವ್ಯಕ್ತಿತ್ವ, ಡ್ರೆಸ್, ಹೇರ್ ಸ್ಟೈಲ್ಒ ಳ್ಳೆಯ ಕೆಲಸ ಸಂಬಳ ಇದೆಯೆಂದು ಸಂಗಾತಿಯ ಆಯ್ಕೆ ಮಾಡುವುದು ಸರಿಯಲ್ಲ. ಚಾಣಕ್ಯ ಹೇಳೋದೇನು?

ಚಾಣಕ್ಯ ನೀತಿ: ಮದುವೆಗೂ ಮುನ್ನ ಈ 5 ವಿಷಯಗಳನ್ನು ಗಮನಿಸಿ
ಆದರೆ ಇಂದು ಮದುವೆಯಾಗಲು ಮುಖ್ಯವಾಗಿ ಸ್ಯಾಲರಿ, ಉದ್ಯೋಗ, ಶ್ರೀಮಂತಿಕೆ ನೋಡಿ ಕಣ್ಮುಚ್ಚಿ ಮದುಗೆಗೆ ಒಪ್ಪುವವರು ಇದ್ದಾರೆ. ಇದು ಸರಿಯಲ್ಲಿ ಏಕೆಂದರೆ ಒಬ್ಬ ವ್ಯಕ್ತಿಯ ಸ್ವಭಾವ, ಆಲೋಚನೆಗಳನ್ನು ಅರ್ಥ ಮಾಡಿಕೊಳ್ಳಲು ಆತ ದಿನನಿತ್ಯದ ಜೀವನದಲ್ಲಿ ಹೇಗೆ ವರ್ತಿಸುತ್ತಾನೆ ಎನ್ನುವುದು ಮುಖ್ಯ. ವಿಶೇಷವಾಗಿ ಕೋಪ ಬಂದಾಗ ಹೇಗೆ ನಡೆದುಕೊಳ್ಳುತ್ತಾನೆ, ಇತರರನ್ನು ಹೇಗೆ ಗೌರವಿಸುತ್ತಾನೆ, ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುತ್ತಾನೆ ಎಂಬುದರಿಂದ ಆತನ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬಹುದು. ಕೇವಲ ಹಣ, ಉದ್ಯೋಗ, ಅಂತಸ್ತು ನೋಡಿ ಆಕರ್ಷಿತರಾದರೆ ಈ ಆಕರ್ಷಣೆ ಸಂಬಂಧ ಬಹಳ ದಿನ ಉಳಿಲಾರದು!
ಚಾಣಕ್ಯ ಹೇಳಿದ ಆ ಐದು ಗುಣಗಳು ಯಾವವು?
ಆಚಾರ್ಯ ಚಾಣಕ್ಯರೂ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ವ್ಯಕ್ತಿಯ ಗುಣ, ನಡತೆ ಮತ್ತು ಸ್ವಭಾವಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಆದರೆ ಇಂದಿನ ಸಂಬಂಧಗಳು, ಜೀವನಶೈಲಿ ಹಿಂದಿನ ಕಾಲದಂತಿಲ್ಲ. ಹೀಗಾಗಿ, ಚಾಣಕ್ಯನೀತಿಯ ಈ ವಿಚಾರಗಳನ್ನು ಇಂದಿಗೂ ಮಾರ್ಗದರ್ಶನ ನೀಡಲಿವೆ. ಮದುವೆಯ ನಿರ್ಧಾರವನ್ನು ಪರಸ್ಪರ ಅರ್ಥಮಾಡಿಕೊಳ್ಳುವಿಕೆ, ಮುಕ್ತವಾಗಿ ಮಾತನಾಡುವುದು, ಪರಸ್ಪರ ಗೌರವ ಕೊಡುವುದು ಮುಖ್ಯ. ಹೀಗಾಗಿ ಸಂಗಾತಿಯ ನಿಜವಾದ ನಡವಳಿಕೆಯನ್ನು ಗಮನಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
ನೀವು ಯಾರನ್ನಾದರೂ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಈ ಐದು ಗುಣಗಳು ಅವನಲ್ಲಿವೆಯೋ ಇಲ್ಲವೋ ಎಂಬುದನ್ನ ಅರ್ಥ ಮಾಡಿಕೊಳ್ಳಿ. ನಂತರ ನಿಮ್ಮ ನಿರ್ಧಾರ ತಿಳಿಸಿ.
1. ಇತರರನ್ನು ಹೇಗೆ ನಡೆಸಿಕೊಳ್ಳುತ್ತಾನೆ?
ಒಬ್ಬ ವ್ಯಕ್ತಿ ನಿಮ್ಮೊಂದಿಗೆ ಹೇಗೆ ವರ್ತಿಸುತ್ತಾನೆ ಎಂಬುದನ್ನು ಮಾತ್ರ ನೋಡಿ ಆತನ ಸಂಪೂರ್ಣ ಸ್ವಭಾವವನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆತ ತನ್ನ ತಂದೆ-ತಾಯಿ, ಸ್ನೇಹಿತರು, ಸಹೋದ್ಯೋಗಿಗಳು, ಅಂಗಡಿ ಸಿಬ್ಬಂದಿ ಮತ್ತು ಇತರರೊಂದಿಗೆ ಹೇಗೆ ಮಾತನಾಡುತ್ತಾನೆ ಎಂಬುದನ್ನು ಗಮನಿಸಬೇಕು.
ಇತರರು ಮಾತನಾಡುವಾಗ ಆತ ಅವರ ಮಾತನ್ನು ಕೇಳುತ್ತಾನೆಯೇ? ಅವರ ಅಭಿಪ್ರಾಯ ಮತ್ತು ಗೌರವಕ್ಕೆ ಬೆಲೆ ಕೊಡುತ್ತಾನೆಯೇ? ಇತರರೊಂದಿಗೆ ಆತ ತೋರುವ ಸಾಮಾನ್ಯ ವರ್ತನೆ ಆತನ ವ್ಯಕ್ತಿತ್ವದ ಬಗ್ಗೆ ಹಲವು ಸುಳಿವುಗಳನ್ನು ನೀಡಬಹುದು.
2. ಕಷ್ಟದ ಸಮಯದಲ್ಲಿ ಹೇಗೆ ವರ್ತಿಸುತ್ತಾನೆ?
ಎಲ್ಲವೂ ಚೆನ್ನಾಗಿರುವಾಗ ಶಾಂತವಾಗಿರುವುದು ಸುಲಭ. ಜೀವನದ ಕಷ್ಟಕಾಲದಲ್ಲಿ ಒತ್ತಡ ಅಥವಾ ಕಷ್ಟದ ಪರಿಸ್ಥಿತಿ ಎದುರಾದಾಗ ವ್ಯಕ್ತಿಯ ನಿಜವಾದ ಸ್ವಭಾವ ಹೆಚ್ಚು ಸ್ಪಷ್ಟವಾಗುತ್ತದೆ. ಸಮಸ್ಯೆ ಎದುರಾದಾಗ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾನೆಯೇ? ಅಥವಾ ತಕ್ಷಣ ಕೋಪಗೊಳ್ಳುತ್ತಾನೆಯೇ, ಇತರರನ್ನು ದೂಷಿಸುತ್ತಾನೆಯೇ ಅಥವಾ ಜಗಳಕ್ಕೆ ಮುಂದಾಗುತ್ತಾನೆಯೇ ಎಂಬುದನ್ನು ಗಮನಿಸಿ.
ಮದುವೆ ಜೀವನದಲ್ಲಿ ಹಲವು ಸವಾಲುಗಳು ಎದುರಾಗಬಹುದು. ಅವುಗಳನ್ನು ಇಬ್ಬರೂ ಸೇರಿ ಎದುರಿಸಬೇಕಾಗುತ್ತದೆ. ಹೀಗಾಗಿ ಪರಸ್ಪರ ಮಾತುಕತೆ ಮತ್ತು ತಾಳ್ಮೆ ಬಹಳ ಮುಖ್ಯ.
3. ಕೆಲಸ ಮತ್ತು ಜವಾಬ್ದಾರಿಗಳ ಬಗ್ಗೆ ಮನೋಭಾವ ಹೇಗಿದೆ?
ಹುಡುಗ ಎಷ್ಟು ಹಣ ಸಂಪಾದಿಸುತ್ತಾನೆ ಎಂಬುದನ್ನು ಮಾತ್ರ ಆಧರಿಸಿ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಸಾಕಾಗುವುದಿಲ್ಲ. ಆತ ತನ್ನ ಕೆಲಸ ಮತ್ತು ವೈಯಕ್ತಿಕ ಜವಾಬ್ದಾರಿಗಳನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾನೆ ಎಂಬುದನ್ನೂ ತಿಳಿದುಕೊಳ್ಳಬೇಕು.
ಭವಿಷ್ಯದ ಬಗ್ಗೆ ಆತ ಯೋಜನೆ ಮಾಡುತ್ತಾನೆಯೇ? ತನ್ನ ಜವಾಬ್ದಾರಿಗಳನ್ನು ನಿಭಾಯಿಸಲು ಹಿಂದೇಟು ಹಾಕುತ್ತಾನೆಯೇ? ಎಂಬುದನ್ನು ಗಮನಿಸಿ. ಆರ್ಥಿಕ ಪರಿಸ್ಥಿತಿ ಕಾಲಕ್ರಮೇಣ ಬದಲಾಗಬಹುದು. ಆದರೆ ಜವಾಬ್ದಾರಿಗಳನ್ನು ನಿಭಾಯಿಸುವ ವ್ಯಕ್ತಿಯ ಮನೋಭಾವವು ದಾಂಪತ್ಯ ಜೀವನದ ಮೇಲೆ ದೀರ್ಘಕಾಲ ಪರಿಣಾಮ ಬೀರಬಹುದು.
4. ಮಹಿಳೆಯರ ಬಗ್ಗೆ ಆತನ ಮನೋಭಾವ ಹೇಗಿದೆ?
ಮದುವೆಗೂ ಮುನ್ನ ಮಹಿಳೆಯರ ಅಭಿಪ್ರಾಯ ಮತ್ತು ಸ್ವಾತಂತ್ರ್ಯಕ್ಕೆ ಆತ ಎಷ್ಟು ಗೌರವ ನೀಡುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ತನ್ನ ಕುಟುಂಬದ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತಾನೆ ಎಂಬುದನ್ನು ಗಮನಿಸುವುದರ ಜೊತೆಗೆ, ನಿಮ್ಮ ಆಯ್ಕೆಗಳು, ನಿರ್ಧಾರಗಳು, ಉದ್ಯೋಗ ಮತ್ತು ವೈಯಕ್ತಿಕ ವಿಚಾರಗಳನ್ನು ಆತ ಗೌರವಿಸುತ್ತಾನೆಯೇ ಎಂಬುದನ್ನೂ ನೋಡಿ. ಸಮಾನತೆ ಮತ್ತು ಪರಸ್ಪರ ಗೌರವ ಆರೋಗ್ಯಕರ ದಾಂಪತ್ಯ ಜೀವನದ ಪ್ರಮುಖ ಆಧಾರಗಳಾಗಿವೆ.
5. ಕೋಪ ಮತ್ತು ಕೆಟ್ಟ ಅಭ್ಯಾಸಗಳ ಮೇಲೆ ನಿಯಂತ್ರಣವಿದೆಯೇ?
ಹುಡುಗನಿಗೆ ಕೆಟ್ಟ ಕೋಪ, ಸುಳ್ಳು ಹೇಳುವುದು, ಜೂಜಾಟ, ಅತಿಯಾದ ಮದ್ಯಪಾನ ಅಥವಾ ಇತರ ಹಾನಿಕಾರಕ ಅಭ್ಯಾಸಗಳು ಮುಂದೆ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಮದುವೆಗೂ ಮುನ್ನ ಈ ವಿಚಾರಗಳನ್ನು ನಿರ್ಲಕ್ಷಿಸಬಾರದು.
ಒಬ್ಬ ವ್ಯಕ್ತಿ ಪದೇಪದೇ ಅವಮಾನಿಸುವುದು, ಬೆದರಿಸುವುದು ಅಥವಾ ತನ್ನ ಆಕ್ರಮಣಕಾರಿ ವರ್ತನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಅದನ್ನು ಗಂಭೀರವಾಗಿ ಪರಿಗಣಿಸಬೇಕು.
ಮದುವೆಯಾಗಿ ದಾಂಪತ್ಯ ಜೀವನ ಸಾಗಿಸಲು ಕೇವಲ ಹಣ ಅಥವಾ ಆಕರ್ಷಕ ವ್ಯಕ್ತಿತ್ವ ಮಾತ್ರ ಸಾಕಾಗುವುದಿಲ್ಲ. ವ್ಯಕ್ತಿಯ ಸ್ವಭಾವ, ಜವಾಬ್ದಾರಿಯ ಮನೋಭಾವ, ಕೋಪವನ್ನು ನಿಯಂತ್ರಿಸುವ ಸಾಮರ್ಥ್ಯ ಮತ್ತು ಸಂಗಾತಿಯ ಬಗ್ಗೆ ಹೊಂದಿರುವ ಗೌರವವೂ ಅಷ್ಟೇ ಮುಖ್ಯವಾಗುತ್ತೆ. ಇಂದಿನ ಬಹುತೇಕ ಸಂಬಂಧಗಳು ಪರಿಚಯ, ಪ್ರೀತಿ, ಮದುವೆ ನಂತರ ಕೆಲವು ವರ್ಷಗಳಲ್ಲಿ ದಾಂಪತ್ಯದಲ್ಲಿ ಕಲಹವಾಗಿ ಡೈವರ್ಸ್ ನೊಂದಿಗೆ ಕೊನೆಗೊಳ್ಳುತ್ತದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಮದುವೆಗೆ ಮೊದಲು ಹುಡುಗ, ಹುಡುಗಿಯ ಬಾಹ್ಯ ಸೌಂದರ್ಯ, ಆಸ್ತಿ ಅಂತಸ್ತು, ಉದ್ಯೋಗಕ್ಕೆ ಆಕರ್ಷಿತರಾಗಿ ಸಂಗಾತಿಯನ್ನ ಆಯ್ಕೆ ಮಾಡಿಕೊಂಡಿರುವ ಪರಿಣಾಮ. ಹೀಗಾಗಿ ಆಚಾರ್ಯ ಚಾಣಕ್ಯ ಹೇಳುವಂತೆ ಮದುವೆಗೆ ಮೊದಲು ಮೇಲೆ ಹೇಳಿದ ಐದು ಗುಣಗಳನ್ನ ಅರ್ಥ ಮಾಡಿಕೊಂಡ ಬಳಿಕವೇ ಮದುವೆಗೆ ಮುಂದಾಗುವುದು ಒಳಿತು.

