ಜಂಕ್‌ಫುಡ್ ಎಂದು ಪರಿಗಣಿಸಲಾಗುವ ವಡೆಯು ಕೇವಲ ತಿಂಡಿಯಲ್ಲ, ಅದೊಂದು ಔಷಧ ಎನ್ನುತ್ತಾರೆ ಆಯುರ್ವೇದ ತಜ್ಞರು. ನಿರ್ದಿಷ್ಟ ವಿಧಾನದಲ್ಲಿ ತಯಾರಿಸಿದ ಉದ್ದಿನ ವಡೆಯನ್ನು ಬೆಣ್ಣೆಯೊಂದಿಗೆ ಸೇವಿಸುವುದರಿಂದ ನರ ದೌರ್ಬಲ್ಯ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆಗಳನ್ನು ನಿವಾರಿಸಬಹುದು ಎಂದಿದ್ದಾರೆ.

ಈಗ ಎಲ್ಲೆಲ್ಲೂ ಜಂಕ್​ಫುಡ್​ಗಳ ಹಾವಳಿ. ಅನಾರೋಗ್ಯದ ಶಬ್ದ ಬಂದರೆ ಸಾಕು, ಎಲ್ಲರೂ ಹೇಳುವುದು ಒಂದೇ ಮಾತು. ಅದು ಜಂಕ್​ಫುಡ್​ ತಿಂದು ಆಗಿರುವ ಸಮಸ್ಯೆ ಎನ್ನುವುದು. ಅದರಲ್ಲಿಯೂ ಬೊಜ್ಜು, ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣುಮಕ್ಕಳು ನೆರೆಯುವುದು ಸೇರಿದಂತೆ ಮಾರಣಾಂತಿಕ ಎನ್ನಿಸುವ ಕಾಯಿಲೆಗಳಿಗೆ ಮೂಲ ಇದೇ ಜಂಕ್​ಫುಡ್​ ಎನ್ನುವ ಮಾತಿದೆ. ಇದೊಂದೇ ಕಾರಣ ಅಲ್ಲದಿದ್ದರೂ, ಜಂಕ್​ಫುಡ್​ ಇಂಥ ಸಮಸ್ಯೆಗಳು ಉದ್ಭವಿಸಲು ಬಹು ದೊಡ್ಡ ಕೊಡುಗೆ ನೀಡುತ್ತಿವೆ. ಆದರೂ ಎಷ್ಟೇ ಬೇಡ ಬೇಡ ಎಂದರೂ ಮನಸ್ಸು ಅತ್ತ ಕಡೆ ಹರಿಯುವುದು ಸಹಜವೇ.

Add Asianetnews Kannada as a Preferred SourcegooglePreferred

ಇಡ್ಲಿ-ವಡೆ ರುಚಿ

ಅದರಲ್ಲಿಯೂ ಇಡ್ಲಿ ಇದ್ದ ಮೇಲೆ ಅಲ್ಲೊಂದು ವಡೆ ಇರಲೇಬೇಕು. ವಡೆ ಸೈಡ್​ಗೆ ಇದ್ದರಷ್ಟೇ ಇಡ್ಲಿಗೂ ಟೇಸ್ಟ್​ ಬರುವುದು. ಇದೇ ಕಾರಣಕ್ಕೆ ಇಡ್ಲಿ-ವಡೆಯ ಕಾಂಬಿನೇಷನ್​ ಸಕತ್​ ಆಗಿರುತ್ತದೆ. ಆದರೆ ವಡೆ ಜಂಕ್​ಫುಡ್​ ಎನ್ನುವ ಕಾರಣಕ್ಕೆ ಎಷ್ಟೋ ಮಂದಿ ಮನಸ್ಸಿದ್ದರೂ ಅದನ್ನು ತಿನ್ನುವುದಿಲ್ಲ. ಅದಕ್ಕೆ ಮುಖ್ಯವಾಗಿರುವ ಕಾರಣ ಎಂದರೆ, ಯಾವ್ಯಾವುದೋ ಎಣ್ಣೆಗಳನ್ನು ಬಳಸಿ ಅದನ್ನು ತಯಾರು ಮಾಡಲಾಗುತ್ತದೆ ಎನ್ನುವುದು. ಇದು ನಿಜ ಕೂಡ. ಕರಿದ ಎಣ್ಣೆಯನ್ನೇ ಪುನಃಪುನಃ ಬಳಸುವುದರಿಂದ ಕ್ಯಾನ್ಸರ್​ನಂಥ ಮಾರಕ ರೋಗಗಳು ಬರುತ್ತವೆ ಎನ್ನುವುದು ಇದಾಗಲೇ ಸಾಬೀತಾಗಿದೆ.

ಹಲವು ರೋಗಗಳಿಗೆ ರಾಮಬಾಣ

ಹಾಗೆಂದು ವಡೆ ಪ್ರಿಯರಿಗೆ ಭರ್ಜರಿ ಗುಡ್​​ನ್ಯೂಸ್​ ಕೊಟ್ಟಿದ್ದಾರೆ ಖ್ಯಾತ ಆಯುರ್ವೇದ ತಜ್ಞರು. ಇವರು ಹೇಳಿರುವ ಪ್ರಕಾರ, ವಡೆ ಜಂಕ್​ಫುಡ್​ ಸಾಲಿಗೆ ಬರುವುದಿಲ್ಲ. ಬದಲಿಗೆ ಇದರಿಂದ ಬಹುಮಂದಿಯನ್ನು ಕಾಡುವ ವಾತ-ನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ, ಪ್ಯಾರೆಲಿಸಿಸ್​ ಆಗುವವರಿಗೂ ಇದು ಮದ್ದು ಎನ್ನುವುದು ಅವರ ಮಾತು. ಆದರೆ, ವಡೆಯನ್ನು ಹೇಗೆ ತಿನ್ನಬೇಕು ಎನ್ನುವ ಬಗ್ಗೆ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ಉದ್ದಿನ ಮಹತ್ವ

ಉದ್ದಿನಬೇಳೆಗೆ ಆಯುರ್ವೇದದಲ್ಲಿ ಬಹಳ ಮಹತ್ವವಿದೆ. ಆದ್ದರಿಂದಲೇ ಭಾರತೀಯರು ದೋಸೆ, ಇಡ್ಲಿ, ವಡೆಗಳಲ್ಲಿ ಇವುಗಳನ್ನು ಬಳಸುವುದು ಉಂಟು. ಆದರೆ ಅದರ ಬಳಕೆ ಹೇಗೆ ಎನ್ನುವುದು ತಿಳಿಯಬೇಕು ಎಂದಿದ್ದಾರೆ ವೈದ್ಯರು. ಯಾರು ಉದ್ದಿನ ವಡೆಯನ್ನು ಬೆಣ್ಣೆಯ ಜೊತೆಗೆ ಸೇವನೆ ಮಾಡುತ್ತಾರೋ ಯಾರೂ ಸರಿ ಮಾಡದೇಇರುವ ಮುಖದ ಪ್ಯಾರೇಲಿಸಸ್​ ಅನ್ನು ಸರಿ ಮಾಡುತ್ತದೆ ಎಂದಿದ್ದಾರೆ. ಇದರ ಪರಿಣಾಮವನ್ನು ಮೊದಲು ಏಳು ರಾತ್ರಿ ಮಾಡಿನೋಡಬೇಕು. ಫಲಿತಾಂಶ ಕಾಣಲು ಶುರುವಾಗುತ್ತದೆ. ಆ ಬಳಿಕ ಪ್ರತಿ ರಾತ್ರಿಯೂ ಇದೇ ರೀತಿ ಉದ್ದಿನ ವಡೆಯನ್ನು ತಿನ್ನುವುದನ್ನು ಮುಂದುವರೆಸಬೇಕು ಎಂದಿದ್ದಾರೆ.

ಜೀರ್ಣವಾಗಲು ಇದನ್ನು ಸೇರಿಸಿ

ಇದು ಕೊಡುವ ಮೊದಲು ಜೀರ್ಣವಾಗುವುದನ್ನು ಖಚಿತಪಡಿಸಿಕೊಳ್ಳಬೇಕು. ಆದ್ದರಿಂದ ಇದನ್ನು ತಯಾರಿಸುವಾಗ ಸೈಂಧವ ಇಂಗು, ಕಾಳು ಮೆಣಸು ಮತ್ತು ಸ್ವಲ್ಪ ಶುಂಠಿಯನ್ನು ಹಾಕಲೇಬೇಕು. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮೂರು ಹೊತ್ತು ಇದರಿಂದ ತಯಾರು ಮಾಡಿರುವ ವಡೆಯನ್ನು ಕೊಡಬೇಕು, ಗಂಜಿಯ ಊಟದ ಜೊತೆಗೆ ಇದನ್ನು ಕೊಡಬೇಕು. ಬೇರೆ ಏನನ್ನೂ ತಿನ್ನಲು ಕೊಡಬಾರದು. ಹೀಗೆ ಮಾಡಿದರೆ ನರಗಳ ದೌರ್ಬಲ್ಯ ಸರಿಯಾಗುತ್ತದೆ ಎಂದಿದ್ದಾರೆ. ಒಂದು ವೇಳೆ ಬೇರೆ ರೀತಿಯ ಆಯುರ್ವೇದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅದರ ಜೊತೆ ಮೂರು ಹೊತ್ತು ಇದನ್ನು ತೆಗೆದುಕೊಂಡು ನೋಡಿದರೆ ಉತ್ತಮ ಫಲಿತಾಂಶ ನೀಡುತ್ತದೆ ಎಂದಿದ್ದಾರೆ.