Healthy Eating Tips: ನಮ್ಮ ಆರೋಗ್ಯವು ನಾವು ತಿನ್ನುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ನಾವು ಯಾವ ರೀತಿಯ ಆಹಾರವನ್ನು ಸೇವಿಸುತ್ತಿದ್ದೇವೆ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಸೇವಿಸುತ್ತಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು.

ನಾನ್ ವೆಜ್ ಯಾರಿಗೆ ಇಷ್ಟವಿಲ್ಲ ಹೇಳಿ?, ಭಾನುವಾರ ಬಂತೆಂದ್ರೆ ಸಾಕು ಹೆಚ್ಚಿನ ಮನೆಗಳಲ್ಲಿ ಚಿಕನ್ ಅಥವಾ ಮಟನ್ ಇದ್ದೇ ಇರುತ್ತದೆ. ಕೆಲವರು ವಾರದಲ್ಲಿ ಮೂರು ಅಥವಾ ನಾಲ್ಕು ದಿನ ಮಾಂಸಾಹಾರ ತಿನ್ನುತ್ತಾರೆ. ಆಗ ಅನೇಕ ಜನರು ಮಟನ್ ತಿನ್ನಲು ಇಷ್ಟಪಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದರೂ ಸರಿಯಾದ ರೀತಿಯಲ್ಲಿ ತಿನ್ನದಿದ್ದರೆ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ. ಹೌದು. ಮಟನ್ ತಿಂದ ನಂತರ ಕೆಲವು ಆಹಾರಗಳನ್ನು ತಿನ್ನುವುದು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾದರೆ ಅವು ಯಾವುವು ಎಂದು ನೋಡೋಣ..

ಬಹುತೇಕರ ಮನೆಯಲ್ಲಿ ಹಬ್ಬ ಮಗಿಯುತ್ತಿದ್ದಂತೆ ನಾನ್ ವೆಜ್ ಮಾಡುವುದು ರೂಢಿ. ಇನ್ನೇನು ಸಂಕ್ರಾಂತಿ ಸಮೀಪಿಸುತ್ತಿದೆ. ಹಾಗಾಗಿ ಸದ್ಯಕ್ಕೆ ಮನೆಯಲ್ಲಿ ನಾನ್ ವೆಜ್ ಸ್ಟಾಪ್ ಮಾಡಿದವರು ಹಬ್ಬದ ನಂತರ ಮತ್ತೆ ತಿನ್ನುತ್ತಾರೆ. ಆಗ ಮನೆಯವರೆಲ್ಲಾ ಒಟ್ಟಾಗಿ ಸೇರುವುದರಿಂದ ಮನೆಯಲ್ಲಿಯೇ ಅಡುಗೆ ಮಾಡುವುದು ಕಾಮನ್. ಈ ಸಮಯದಲ್ಲಿ ಜನರು ಇದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ನಮ್ಮ ಆರೋಗ್ಯವು ನಾವು ತಿನ್ನುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ನಾವು ಯಾವ ರೀತಿಯ ಆಹಾರವನ್ನು ಸೇವಿಸುತ್ತಿದ್ದೇವೆ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಸೇವಿಸುತ್ತಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು.

ವಿಶೇಷವಾಗಿ ಚಿಕನ್ ಅಥವಾ ಮಟನ್ ಮುಂತಾದ ಮಾಂಸಾಹಾರಿ ಆಹಾರಗಳನ್ನು ಸೇವಿಸುವಾಗ ನಾವು ಮಾಡುವ ಸಣ್ಣ ತಪ್ಪುಗಳು ಅಜೀರ್ಣ, ಉರಿಯೂತ, ಗ್ಯಾಸ್ ಮತ್ತು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಮಟನ್ ನಲ್ಲಿ ಪ್ರೋಟೀನ್ ಮತ್ತು ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ಆದ್ದರಿಂದ ಇದು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿಯೇ ಮಟನ್ ತಿಂದ ತಕ್ಷಣ ಕೆಲವು ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ, ಅಜೀರ್ಣದಂತಹ ಸಮಸ್ಯೆಗಳು ಉದ್ಭವಿಸಬಹುದು.

ಹಾಲು, ಮೊಸರು ಅಥವಾ ಮಜ್ಜಿಗೆ

ಕೆಲವರು ಮಾಂಸಾಹಾರಿ ಆಹಾರವನ್ನು ಸೇವಿಸಿದ ತಕ್ಷಣ ಹಾಲು, ಮೊಸರು ಅಥವಾ ಮಜ್ಜಿಗೆಯನ್ನು ಸೇವಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಮಾಂಸಾಹಾರಿ ಆಹಾರವನ್ನು ಸೇವಿಸಿದ ನಂತರ ಇವುಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ ಮತ್ತು ಹೊಟ್ಟೆ ಉಬ್ಬರ, ಅತಿಸಾರ ಮತ್ತು ಚರ್ಮದ ದದ್ದುಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಜೇನುತುಪ್ಪ

ಮಟನ್ ತಿಂದ ನಂತರ ಜೇನುತುಪ್ಪ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ. ಜೇನುತುಪ್ಪವು ದೇಹದಲ್ಲಿ ಶಾಖವನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಇವುಗಳನ್ನು ಮಟನ್ ಜೊತೆ ಬೆರೆಸಿದಾಗ ದೇಹದಲ್ಲಿ ಶಾಖವು ಮತ್ತಷ್ಟು ಹೆಚ್ಚಾಗುತ್ತದೆ. ಇದರಿಂದಾಗಿ ಎದೆಯುರಿ ಮತ್ತು ಅಸ್ವಸ್ಥತೆ ಉಂಟಾಗಬಹುದು. ಆದ್ದರಿಂದ ನೀವು ಮಟನ್ ತಿಂದ ನಂತರ ಜೇನುತುಪ್ಪ ತಿನ್ನುವ ಅಭ್ಯಾಸವನ್ನು ಹೊಂದಿದ್ದರೆ ತಕ್ಷಣ ಅದನ್ನು ನಿಲ್ಲಿಸಿ.

ಸಿಹಿತಿಂಡಿಗಳು

ಅಷ್ಟೇ ಅಲ್ಲ, ಮಟನ್ ತಿಂದ ನಂತರ ಬಾಳೆಹಣ್ಣು ಮತ್ತು ಸಿಹಿತಿಂಡಿಗಳನ್ನು ಸಹ ತಿನ್ನಬಾರದು. ನಾವು ತಿನ್ನುವ ಮಟನ್ ಜೀರ್ಣವಾಗಲು ಸಮಯ ತೆಗೆದುಕೊಳ್ಳುವುದರಿಂದ ಇವುಗಳನ್ನು ತಕ್ಷಣ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು ಮತ್ತು ನಿಮಗೆ ಅನಾನುಕೂಲವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಮಟನ್ ಜೊತೆ ಊಟ ಮಾಡಿದ ನಂತರ ನೀವು ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬಹುದು ಮತ್ತು ನಿಮಗೆ ಬೇಕಾದುದನ್ನು ತಿನ್ನಬಹುದು.

ವೈದ್ಯರು ಕೂಡ ರಾತ್ರಿ ಮಟನ್ ತಿನ್ನುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಮಟನ್ ತಿಂದ ತಕ್ಷಣ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಬಹಳ ಮುಖ್ಯ. ತಿಂದ ನಂತರ ಹೊಟ್ಟೆಯಲ್ಲಿ ಭಾರವಾದ ಅನುಭವವಾದರೆ ಶುಂಠಿ ಅಥವಾ ಮೆಂತ್ಯದ ಕಷಾಯ ಕುಡಿಯಬಹುದು ಎಂದು ತಜ್ಞರು ಹೇಳುತ್ತಾರೆ.

(ಗಮನಿಸಿ: ಮೇಲೆ ತಿಳಿಸಿದ ಅಂಶಗಳು ಇಂಟರ್ನೆಟ್ ಮತ್ತು ಕೆಲವು ವರದಿಗಳನ್ನು ಆಧರಿಸಿವೆ. ಇವುಗಳನ್ನು asianetnewskannada ದೃಢಪಡಿಸಿಲ್ಲ. ಇವುಗಳ ಬಗ್ಗೆ ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ)