ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ12 ಮತ್ತು ರಂಜಕ ಸಮೃದ್ಧವಾಗಿದೆ. ಇವು ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ಕೆಲವು ರೀತಿಯ ಮೊಸರು ಆರೋಗ್ಯಕರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಕರುಳಿನ ಒಳಪದರದ ಕಾರ್ಯವನ್ನು ಸುಧಾರಿಸುತ್ತದೆ.
ಮೊಸರು ತಿನ್ನೋದನ್ನ ಅಭ್ಯಾಸ ಮಾಡ್ಕೊಳ್ಳಿ, ತುಂಬಾ ಆರೋಗ್ಯವಾಗಿ ಇರ್ತೀರಾ
ಮೂಳೆಗಳ ಆರೋಗ್ಯ ಕಾಪಾಡೋದ್ರಿಂದ ಹಿಡಿದು ರಕ್ತದೊತ್ತಡ ನಿಯಂತ್ರಿಸುವವರೆಗೆ, ಮೊಸರಿನಲ್ಲಿ (Curd) ಅನೇಕರಿಗೆ ತಿಳಿಯದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಗ್ಯಾಸ್ಟ್ರೋಎಂಟರಾಲಜಿಸ್ಟ್ ಸೌರಭ್ ಸೇಥಿ ಪ್ರಕಾರ, ಮೊಸರಿನಲ್ಲಿರುವ ಜೀವಂತ ಸೂಕ್ಷ್ಮಾಣುಜೀವಿಗಳು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಉತ್ತಮ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತವೆ. ಮೊಸರು ತಯಾರಿಸುವ ಪ್ರಕ್ರಿಯೆಯಲ್ಲಿ ಅದರಲ್ಲಿರುವ ಲ್ಯಾಕ್ಟೋಸ್ ಸ್ವಲ್ಪ ಮಟ್ಟಿಗೆ ಒಡೆಯುತ್ತದೆ. ಅಲ್ಲದೆ, ಮೊಸರಿನಲ್ಲಿರುವ ಜೀವಂತ ಸೂಕ್ಷ್ಮಾಣುಜೀವಿಗಳು ಉಳಿದ ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತವೆ.
ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ12 ಮತ್ತು ರಂಜಕ ಸಮೃದ್ಧವಾಗಿವೆ
ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ12 ಮತ್ತು ರಂಜಕ ಸಮೃದ್ಧವಾಗಿದೆ. ಇವು ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ಜೊತೆಗೆ ದೇಹದ ಸಾಮಾನ್ಯ ಕಾರ್ಯಗಳನ್ನು ಸುಧಾರಿಸುತ್ತವೆ. ಕೆಲವು ರೀತಿಯ ಮೊಸರು ಆರೋಗ್ಯಕರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಕರುಳಿನ ಒಳಪದರದ ಕಾರ್ಯವನ್ನು ಸುಧಾರಿಸುತ್ತದೆ.
ದೇಹಕ್ಕೆ ಬೇಕಾದ ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಮೊಸರು ಹೊಂದಿದೆ ಅನ್ನೋದು ಇದರ ಮತ್ತೊಂದು ಪ್ರಯೋಜನ. ಈ ಪ್ರೋಟೀನ್ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ಜೊತೆಗೆ ಸ್ನಾಯುಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ಸಕ್ಕರೆ ಸೇರಿಸದ ಗ್ರೀಕ್ ಮೊಸರು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಇದು ಬಹಳಷ್ಟು ಪ್ರೋಟೀನ್ ಹೊಂದಿದೆ. ಸಾಮಾನ್ಯವಾಗಿ ಇದರಲ್ಲಿ ಸಕ್ಕರೆಯ ಪ್ರಮಾಣ ತುಂಬಾ ಕಡಿಮೆಯಿರುತ್ತದೆ.
ಗ್ರೀಕ್ ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಇವೆ
ಹೌದು, ಗ್ರೀಕ್ ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಇವೆ. ಇವು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಸ್ನಾಯುಗಳ ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು. ಒಂದು ಕಪ್ ಗ್ರೀಕ್ ಮೊಸರಿನಲ್ಲಿ ಸುಮಾರು 20 ಗ್ರಾಂ ಪ್ರೋಟೀನ್ ಇರಬಹುದು. ವಯಸ್ಸಾದಂತೆ ಸಾಕಷ್ಟು ಪ್ರೋಟೀನ್ ಸೇವಿಸುವುದು ಮುಖ್ಯ. ಏಕೆಂದರೆ ನಿಯಮಿತ ವ್ಯಾಯಾಮದೊಂದಿಗೆ ಸ್ನಾಯುವಿನ ಬಲವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.












