Asianet Suvarna News Asianet Suvarna News

ಅಂತಿಂಥ ಅಣಬೆಯಲ್ಲಈ ಗುಚ್ಚಿ,ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

ಯಾರಾದ್ರೂ ನಮ್ಮನೆಯಲ್ಲಿ ಗುಚ್ಚಿ ಮಶ್ರೂಮ್‌ ಪಲಾವ್‌ ಮಾಡಿದ್ದೀವಿ ಅಂದ್ರೆ, ಅಣಬೆ ಪಲಾವಾ! ಬೇಡ ಎಂದು ಮೂಗು ಮುರಿಯಬೇಡಿ.ಏಕೆಂದ್ರೆ ಗುಚ್ಚಿ ಅತಿಂಥ ಅಣಬೆಯಲ್ಲ,ಇದರ ಬೆಲೆ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ.

know about Most expensive mushroom gucchi
Author
Bangalore, First Published Sep 18, 2020, 4:39 PM IST

ಅಣಬೆ ಎಷ್ಟೇ ದುಬಾರಿಯಾದ್ರು ಕೆ.ಜಿ.ಗೆ 2೦೦-5೦೦ರೂ.ಇರಬಹುದು,ಅದಕ್ಕಿಂತಲೂ ದುಬಾರಿಯೆಂದ್ರೆ ಸಾವಿರದ ಗಡಿ ದಾಟೋದಿಲ್ಲ ಎಂಬುದು ಎಲ್ಲರ ಲೆಕ್ಕಾಚಾರ.ಆದ್ರೆ ಹಿಮಾಲಯದ ತಪ್ಪಲಲ್ಲಿ ಬೆಳೆಯೋ ವಿಶಿಷ್ಟ ಪ್ರಭೇದದ ಅಣಬೆಯ ಬೆಲೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ.ಗುಚ್ಚಿ ಎಂದು ಕರೆಯಲ್ಪಡೋ ಈ ಕಾಡು ಅಣಬೆ ಬೆಲೆ ಎಷ್ಟು ಗೊತ್ತಾ?ಒಂದು ಕೆ.ಜಿ.ಗೆ 3೦ಸಾವಿರ ರೂ.! ಬೆಲೆಯಲ್ಲಿ ಕೇಸರಿ  ಹಾಗೂ ಡಾರ್ಜಲಿಂಗ್‌ ಕಾಫಿಯನ್ನೂ ಮೀರಿಸಿರೋ ಈ ಅಣಬೆ ಬೆಳೆಯೋದು ಹೇಗೆ? ಎಂಥ ವಾತಾವರಣ ಬೇಕು? ಇದರ ವ್ಯವಸಾಯದ ವೆಚ್ಚ ಹೆಚ್ಚಿರಬೇಕು ಅದಕ್ಕೇ ಇಷ್ಟು ದುಬಾರಿ ಬೆಲೆ ಎಂಬೆಲ್ಲ ಯೋಚನೆಗಳು ನಿಮ್ಮ ತಲೆಯಲ್ಲಿ ಓಡುತ್ತಿರಬಹುದು.ಆದ್ರೆ ಇದನ್ನು ಇತರ ಅಣಬೆಗಳಂತೆ ವಾಣಿಜ್ಯ ಬೆಳೆಯಾಗಿ ಬೆಳೆಯಬಹುದು ಎಂಬ ನಿಮ್ಮ ಲೆಕ್ಕಾಚಾರ ಖಂಡಿತಾ ತಪ್ಪು.ಗುಚ್ಚಿ ಕಾಡು ಅಣಬೆ ಪ್ರಭೇದಕ್ಕೆ ಸೇರಿದ್ದು,ಹಿಮಾಲಯದ ಕಣಿವೆಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತದೆ.

ಒಂದು ಸಾರಿ ರುಚಿ ನೋಡಲೇ ಬೇಕಾದ ವಿಚಿತ್ರ ಫ್ಲೇವರ್‌ ಐಸ್‌ಕ್ರೀಮ್‌ಗಳು!

ಎಲ್ಲೆಲ್ಲಿ ಬೆಳೆಯುತ್ತೆ?
ಹಿಮಾಲಯದ ತಪ್ಪಲಿನಲ್ಲಿರೋ ಹಿಮಾಚಲ ಪ್ರದೇಶ,ಉತ್ತರಾಂಚಲ ಹಾಗೂ ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೇಶಗಳಲ್ಲಿಇದು ಬೆಳೆಯುತ್ತೆ. ಎತ್ತರ ಪರ್ವತ ಪ್ರದೇಶದ ಶೀತ ವಾತಾವರಣದ ಕಾಡುಗಳಲ್ಲಿ ಮಾತ್ರ ಈ ಅಣಬೆ ಬೆಳೆಯುತ್ತೆ.ಸರಾಸರಿ 2-1೦ ಸೆಂ.ಮೀ. ಅಗಲವಾಗಿರೋ ಈ ಅಣಬೆ ಫೆಬ್ರವರಿಯಿಂದ ಏಪ್ರಿಲ್‌ ತನಕ ಹಿಮಾಲಯದ ಎಲ್ಲ ಕಾಡುಗಳಲ್ಲಿ ಕಾಣಸಿಗುತ್ತದೆ. ಗುಚ್ಚಿ ಮಳೆಗಾಲದಲ್ಲಿ ಉತ್ತಮವಾಗಿ ಬೆಳೆಯುತ್ತೆ.

ಸಂಗ್ರಹಣೆ ಹೇಗೆ?
ಪೊದೆಗಳು ಹಾಗೂ ಹುಲ್ಲಿನಲ್ಲಿ ಬೆಳೆಯೋ ಗುಚ್ಚಿ ಅಣಬೆಗಳನ್ನು ಪತ್ತೆ ಹಚ್ಚೋದು ಸುಲಭದ ಕೆಲಸವೇನಲ್ಲ.ಮಾರ್ಚ್‌ ಹಾಗೂ ಮೇನಲ್ಲಿ ಹಿಮಾಲಯದ ತಪ್ಪಲಿನಲ್ಲಿರೋ ಹಳ್ಳಿಗಳ ಜನರು ಗುಚ್ಚಿ ಸಂಗ್ರಹಣೆಗಾಗಿ ಕಾಡುಗಳಿಗೆ ತೆರಳುತ್ತಾರೆ. ಬೆಳಗ್ಗೆಯಿಂದ ಸಂಜೆ ತನಕ ಕಾಡುಮೇಡಿನಲ್ಲಿ ಅಲೆದು ಗುಚ್ಚಿಯನ್ನು ಸಂಗ್ರಹಿಸುತ್ತಾರೆ. ದೊಡ್ಡ ಪ್ರಮಾಣದಲ್ಲಿ ಗುಚ್ಚಿ ಸಂಗ್ರಹಿಸೋದು ಸುಲಭದ ಕೆಲಸವೇನಲ್ಲ.ಇವು ಒಂದೇ ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯೋದಿಲ್ಲ.ಇನ್ನೊಂದು ವಿಶೇಷವೆಂದ್ರೆ ನಿರಂತರ ಎರಡು ವರ್ಷಗಳ ಕಾಲ ಒಂದು ಸ್ಥಳದಲ್ಲಿ ಬೆಳೆದ್ರೆ, ನಂತರದ ವರ್ಷಗಳಲ್ಲಿ ಆ ಸ್ಥಳದಲ್ಲಿ ಬೆಳೆಯೋದಿಲ್ಲ. ಹೀಗಾಗಿ ಗುಚ್ಚಿ ಸಂಗ್ರಹಣೆ ಶ್ರಮದ ಕೆಲಸ.ಕೆಲವರು ಹಲವು ತಿಂಗಳು ಈ ಕಾರ್ಯದಲ್ಲಿ ತೊಡಗಿ ಗುಚ್ಚಿ ಸಂಗ್ರಹಿಸುತ್ತಾರೆ. ಒಮ್ಮೆ ಸಂಗ್ರಹಿಸಿದ ಬಳಿಕ ಕೆಲಸ ಮುಗಿಯಿತು ಎನ್ನುವಂತಿಲ್ಲ.ಇದನ್ನು ಸ್ವಚ್ಛಗೊಳಿಸೋದು ಹಾಗೂ ಸಂಸ್ಕರಿಸೋದು ಸಂಗ್ರಹಣೆಯಷ್ಟೇ ಕಷ್ಟದ ಕೆಲ್ಸ.ಜೇನುಗೂಡಿನ ಆಕಾರದಲ್ಲಿರೋ ಈ ಅಣಬೆ ಸ್ವರೂಪಕ್ಕೆ ಎಲ್ಲಿಯೂ ಹಾನಿಯಾಗದಂತೆ ಎಚ್ಚರಿಕೆಯಿಂದ ಬೆಂಕಿಯಲ್ಲಿ ಒಣಗಿಸಬೇಕು.ಹೀಗೆ ಮಾಡೋದ್ರಿಂದ ಮಾತ್ರ ಗುಚ್ಚಿಯ ರೂಪದಲ್ಲಿ ಯಾವುದೇ ಬದಲಾವಣೆಯಾಗದಂತೆ ತಡೆಯಲು ಸಾಧ್ಯ.ಗುಚ್ಚಿ ರೂಪಕ್ಕೆ ಹಾನಿಯಾದ್ರೆ ಮಾರುಕಟ್ಟೆಯಲ್ಲಿ ಬೆಲೆಯೂ ಕಡಿಮೆ ಸಿಗುತ್ತೆ.ಹೀಗಾಗಿ ಎಚ್ಚರಿಕೆ ಅಗತ್ಯ.ಇನ್ನು ಒಣಗಿಸೋದ್ರಿಂದ ತೂಕದಲ್ಲಿಯೂ ವ್ಯತ್ಯಾಸವಾಗುತ್ತದೆ.ಉದಾಹರಣೆಗೆ ಒಂದು ಕೆ.ಜಿ. ತೂಕದ ಗುಚ್ಚಿ ಒಣಗಿದ ಬಳಿಕ ಅರ್ಧ ಕೆ.ಜಿ.ಗೆ ಇಳಿಯುತ್ತೆ.

ತನಗೆ ಕೊರೋನಾ ಚಿಕಿತ್ಸೆ ನೀಡಿದ ವೈದ್ಯರಿಗೆ ಕೈಯಾರೆ ಬೆಳೆದ ಅಕ್ಕಿ ನೀಡಿದ ವೃದ್ಧ..!

ಪೌಷ್ಟಿಕಾಂಶಗಳ ಆಗರ
ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸೋ ಸಾಮರ್ಥ್ಯ ಗುಚ್ಚಿಗಿದೆ ಎಂದು ಹೇಳಲಾಗುತ್ತೆ. ಫ್ರಾನ್ಸ್‌,ಅಮೆರಿಕ,ಸ್ವಿಜರ್ಲೆಂಡ್‌,ಇಟಲಿ ಹಾಗೂ ಯುರೋಪಿನ ಅನೇಕ ರಾಷ್ಟ್ರಗಳಲ್ಲಿ ಇದಕ್ಕೆ ಬಹು ಬೇಡಿಕೆಯಿದೆ.ಗುಚ್ಚಿಯಲ್ಲಿ ಪೊಟ್ಯಾಸಿಯಂ, ವಿಟಮಿನ್ಸ್‌ ಹಾಗೂ ಕಾಪರ್‌ ಅಧಿಕ ಪ್ರಮಾಣದಲ್ಲಿದೆ. ಕಬ್ಬಿಣಾಂಶ ಹಾಗೂ ವಿಟಮಿನ್ ಡಿ ಹೇರಳವಾಗಿದ್ದು,ವಿಟಮಿನ್‌ ಬಿ ಕೂಡ ಇದರಲ್ಲಿದೆ. ಗುಚ್ಚಿಯಲ್ಲಿ ಆಂಟಿ ಆಕ್ಸಿಡೆಂಟ್‌ ಅಧಿಕವಾಗಿದ್ದು,ಹೃದ್ರೋಗ, ಕ್ಯಾನ್ಸರ್‌ ಹಾಗೂ ಮಧುಮೇಹ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೊಬ್ಬು ಕಡಿಮೆ ಪ್ರಮಾಣದಲ್ಲಿದ್ದು,ನಾರಿನಂಶ ಹೆಚ್ಚಿದ್ದು,ದೇಹದಲ್ಲಿನ ಬೈಲ್‌ ಆಸಿಡ್‌ಗಳನ್ನು ಹೀರಿಕೊಂಡು ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಾಗದಂತೆ ತಡೆಯುತ್ತೆ. ಜೊತೆಗೆ ಮಲಬದ್ಧತೆಯಂತಹ ಸಮಸ್ಯೆಗಳನ್ನು ದೂರ ಮಾಡುತ್ತೆ.ಕಾರ್ಬೋಹೈಡ್ರೇಟ್ಸ್‌ ಹಾಗೂ ಕೊಬ್ಬಿನಂಶ ಕಡಿಮೆ ಪ್ರಮಾಣದಲ್ಲಿರೋ ಕಾರಣ ತೂಕ ಇಳಿಕೆಗೆ ಪ್ರಯತ್ನಿಸುತ್ತಿರೋರಿಗೆ ಇದು ಅತ್ಯುತ್ತಮ ಆಹಾರ. ಆಂಟಿ ಆಕ್ಸಿಡೆಂಟ್‌ ಇರುವ ಕಾರಣ ಗುಚ್ಚಿ ಚರ್ಮದ ಆರೋಗ್ಯಕ್ಕೂ ಉತ್ತಮ.ಗುಚ್ಚಿವಿಶೇಷವಾದ ಸುವಾಸನೆ ಹೊಂದಿದ್ದು,ಇದ್ರಿಂದ ಪಲಾವ್‌ ಸೇರಿದಂತೆ ಅನೇಕ ಖಾದ್ಯಗಳನ್ನು ಸಿದ್ಧಪಡಿಸುತ್ತಾರೆ.


 

Follow Us:
Download App:
  • android
  • ios