ತನಗೆ ಕೊರೋನಾ ಚಿಕಿತ್ಸೆ ನೀಡಿದ ವೈದ್ಯರಿಗೆ ಕೈಯಾರೆ ಬೆಳೆದ ಅಕ್ಕಿ ನೀಡಿದ ವೃದ್ಧ..!
15 ದಿನ ಐಸಿಯುವಿನಲ್ಲಿ ಕೊರೋನಾಗೆ ಚಿಕಿತ್ಸೆ ಪಡೆದ ಹಿರಿಯರೊಬ್ಬರು ಗುಣಮುಖರಾಗಿದ್ದಾರೆ. ಅವರು ಗುಣಮುಖರಾದಾಗ ಚಿಕಿತ್ಸೆ ನೀಡಿದ ವೈದ್ಯರಿಗೆ ಥ್ಯಾಂಕ್ಸ್ ಹೇಳಲು ಬಯಸಿದ್ದರು. ಅವರು ವೈದ್ಯರಿಗೆ ಥ್ಯಾಂಕ್ಸ್ ಹೇಳಿದ್ದು ಹೇಗೆ ಗೊತ್ತಾ..? ಇಲ್ಲಿ ಓದಿ
ಭಾರತದ ಆಹಾರ ಸಂಸ್ಕೃತಿಯಲ್ಲಿ ಅಕ್ಕಿ ಪ್ರಧಾನ ಆಹಾರ. ಸಾಂಬಾರು, ಪಲ್ಯ, ತರಕಾರಿ, ಸೊಪ್ಪಿನ ಜೊತೆ ನಾವು ಅನ್ನ ಉಣ್ಣುತ್ತೇವೆ. ಇಡ್ಲಿ, ದೋಸೆ ಹಿಟ್ಟು ಮಾಡೋಕು ಅಕ್ಕಿ ಬೇಕು. ಗಂಜಿ ನೀರಿನಲ್ಲಿಯೂ ಸಿಕ್ಕಾಪಟ್ಟೆ ಪೌಸ್ಟಿಕಾಂಶವಿರುತ್ತದೆ. ಹಿಂದಿನ ಕಾಲದಲ್ಲಿ ಅಕ್ಕಿ ತೊಳೆದ ನೀರನ್ನೂ ಹಲವು ರೆಸಿಪಿಗಳಲ್ಲಿ ಬಳಸುತ್ತಿದ್ದರು.
ಇದು ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೆ ಸಹಕಾರಿ. ಇತ್ತೀಚೆಗೆ ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧರೊಬ್ಬರು ತಮಗೆ ಚಿಕಿತ್ಸೆ ನೀಡಿದ ವೈದ್ಯರ ತಂಡಕ್ಕೆ ಮನೆಯಲ್ಲೇ ಬೆಳೆದ ಅಕ್ಕಿ ಕೊಟ್ಟಿದ್ದಾರೆ.
ಮುಂಬೈ ಮಿರ್ಚಿ ಅಲ್ಲ, ಇದು ಗುಜರಾತ್‌ನ ಐಸ್‌ಕ್ರೀಂ ವಡಪಾವ್..!
15 ದಿನ ಐಸಿಯುವಿನಲ್ಲಿ ಕೊರೋನಾಗೆ ಚಿಕಿತ್ಸೆ ಪಡೆದ ಹಿರಿಯರೊಬ್ಬರು ಗುಣಮುಖರಾಗಿದ್ದಾರೆ. ಅವರು ಗುಣಮುಖರಾದಾಗ ಚಿಕಿತ್ಸೆ ನೀಡಿದ ವೈದ್ಯರಿಗೆ ಥ್ಯಾಂಕ್ಸ್ ಹೇಳಲು ಬಯಸಿದ್ದರು. ಅವರ ಗದ್ದೆಯಲ್ಲಿ ಅವರೇ ಬೆಳೆದ ಅಕ್ಕಿಯನ್ನು ನಮಗೆ ಕೊಟ್ಟಿದ್ದಾರೆ ಎಂದು ವೈದ್ಯೆ ಡಾ. ಊರ್ವಿ ಶುಕ್ಲಾ ಟ್ವೀಟ್ ಮಾಡಿದ್ದಾರೆ.
12 ದಿನ ವೆಂಟಿಲೇಟರ್‌ನಲ್ಲಿದ್ದ ವೃದ್ಧ ತಮ್ಮನ್ನು ಪ್ರೀತಿಯಿಂದ ನೋಡಿಕೊಂಡ ವೈದ್ಯರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಇದೀಗ ಹಿರಿಯ ವ್ಯಕ್ತಿಯ ಕೃತಜ್ಞತೆಯ ಕಥೆ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ವೈದ್ಯೆಯ ಟ್ವೀಟ್‌ಗೆ 3.3 ಸಾವಿರ ಲೈಕ್ಸ್ ಬಂದಿದೆ. ಬಹಳಷ್ಟು ಜನರು ವೈದ್ಯರನ್ನೂ, ಅಕ್ಕಿ ಕೊಟ್ಟ ವೃದ್ಧ ವ್ಯಕ್ತಿಗೂ ವಂದನೆ ತಿಳಿಸಿದ್ದಾರೆ.