ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಜೀವನದ ಇಂಟರ್‌ಸ್ಟಿಂಗ್ ವಿಷಯಗಳು
ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ಬಾಲ್ಯ, ವಿದ್ಯಾಭ್ಯಾಸ, ವ್ಯವಹಾರ, ಮತ್ತು ಯಶಸ್ಸಿನ ಹಾದಿಯ ಕುತೂಹಲಕಾರಿ ಅಂಶಗಳನ್ನು ಈ ಲೇಖನವು ಒಳಗೊಂಡಿದೆ. ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನಂತಹ ಕಂಪನಿಗಳನ್ನು ಸ್ಥಾಪಿಸಿದ ಮಸ್ಕ್, ತಮ್ಮ ದಿಟ್ಟ ನಿರ್ಧಾರಗಳಿಂದಾಗಿ ಇಂದು ಯಶಸ್ಸಿನ ಉತ್ತುಂಗದಲ್ಲಿದ್ದಾರೆ.
ವಿಶ್ವದ ಶ್ರೀಮಂತ ವ್ಯಕ್ತಿ ಎಂದೆನಿಸಿಕೊಂಡಿರುವ ಎಲಾನ್ ಮಸ್ಕ್, ಅಮೆರಿಕಾ ಚುನಾವಣೆಯೂ ಮೇಲೆಯೂ ಪ್ರಭಾವ ಬೀರಿದ್ದರು. ಮಂಗಳ ಗ್ರಹದ ಮೇಲೆ ನಗರ ನಿರ್ಮಿಸುವ ಕನಸು ಕಂಡಿರುವ ಎಲಾನ್ ಮಸ್ಕ್ ಜೀವನದ ಕುರಿತ ಕುತೂಹಲಕಾರಿ ಅಂಶಗಳು ಇಲ್ಲಿವೆ.
1971ರಲ್ಲಿ ಜನಿಸಿದ ಎಲಾನ್ ಮಸ್ಕ್ ತಂದೆ ಸಹ ಉದ್ಯಮಿಯಾಗಿದ್ದರು. ಎಲಾನ್ ಮಸ್ಕ್ 3 ವರ್ಷದವರಾಗಿದ್ದಲೇ ತಾಯಿ ಜೊತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅಂತರ್ಮುಖಿಯಾಗಿದ್ದ ಎಲಾನ್ ಮಸ್ಕ್, ಸದಾ ಚಿಂತನೆಯಲ್ಲಿ ಮುಳುಗುತ್ತಿದ್ದರು. 9ನೇ ವಯಸ್ಸಿಗೆ ಎನ್‌ಸ್ಕಲೋಪಿಡಿಯಾ ಬ್ರಾಟನಿಕಾ ಓದಿ ಮುಗಿಸಿದ್ದರು. ವಿಜ್ಞಾನ, ಹಾಸ್ಯ ಸೇರಿದಂತೆ ವಿವಿಧ ಪುಸ್ತಕಗಳನ್ನು ಓದಿದ್ದರು.
ಬಾಲ್ಯದಲ್ಲಿ ಸೋದರನ ಕಿಂಬಲ್ ಜೊತೆ ಸೇರಿ ಚಾಕ್ಲೇಟ್ ಯೀಸ್ಟಾ ಎಗ್ ರೆಡಿ ಮಾಡಿ ಮನೆ ಮನೆಗೆ ತೆರಳಿ ಮಾರಾಟ ಮಾಡುತ್ತಿದ್ದರು. 50 ಸೆಂಟ್ಸ್‌ನಿಂದ 1 ಡಾಲರ್ ಮಾಡುತ್ತಿದ್ದರು. 12ನೇ ವಯಸ್ಸಿಗೆ ವಿಡಿಯೋ ಗೇಮ್ ಸೃಷ್ಟಿಸಿ 500 ಡಾಲರ್ ಗಳಿಸಿದರು. 16ನೇ ವಯಸ್ಸಿಗೆ ಕಂಪನಿಯೊಂದರ ಸ್ಥಾಪನೆಗೆ ಮುಂದಾಗಿದ್ದರು. ವಯಸ್ಸು ಕಡಿಮೆ ಇರೋ ಕಂಪನಿ ನೋಂದಣಿ ಮಾಡಲು ಸಾಧ್ಯವಾಗಲಿಲ್ಲ.
1989ರವರೆ 1 ಡಾಲರ್‌ನಲ್ಲಿಯೇ ಮಸ್ಕ್ ಜೀವನ ನಡೆಸುತ್ತಿದ್ದರು. 17ನೇ ವಯ್ಸಸಿನಲ್ಲಿ ಹೆಚ್ಚಿನ ಶಿಕ್ಷಣಕ್ಕಾಗಿ ಅಮೆರಿಕಾಗೆ ಹೋಗಬೇಕೆಂದು ತಾಯಿಯ ತವರು ಕೆನಾಡಗೆ ಹೋಗುತ್ತಾರೆ. ಅರ್ಥಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ಶಿಕ್ಷಣ ಪಡೆಯುತ್ತಾ, ಕೆಲಸ ಸಹ ಮಾಡಲು ಆರಂಭಿಸಿದ್ದರು. ಈ ಸಮಯದಲ್ಲಿ ದಿನಕ್ಕೆ 1 ಡಾಲರ್‌ಗೆ ಎಷ್ಟು ಆಹಾರ ಬರುತ್ತೋ ಅಷ್ಟೇ ತಿನ್ನುತ್ತಿದ್ದರು.
ಎಲಾನ್ ಮಸ್ಕ್ ಅಮೆರಿಕಾಗೆ ಹೋದ್ಮೇಲೆ Zip2 ಎಂಬ ಕಂಪನಿ ಆರಂಭಿಸಿದರು. ಇಂಟರ್‌ನೆಟ್ ಬಳಕೆ ಹೆಚ್ಚಾಗುತ್ತಿದ್ದಂತೆ ಪೇ ಪಾಲ್ ಅನ್ನೋ ಕಂಪನಿ Zip2 ಖರೀದಿ ಮಾಡಿತು. ನಂತರ ಪೇ ಪಾಲ್ ಕಂಪನಿಯಲ್ಲಿ ಈ-ಬೇ ಖರೀದಿಸಿ ದೊಡ್ಡಮಟ್ಟದಲ್ಲಿ ವಿಸ್ತರಿಸಿತು.
2008ರಲ್ಲಿ ಟೆಸ್ಲಾ ಎಂಬ ಕಾರ್ ಕಂಪನಿ ದಿವಾಳಿ ಹಂತಕ್ಕೆ ತಲುಪಿತ್ತು. ಟೆಸ್ಲಾ ಬಳಿ ಉದ್ಯೋಗಿಗಳಿಗೆ ಸಂಬಳ ನೀಡಲು ಹಣ ಸಹ ಇರಲಿಲ್ಲ. ಈ ಸಮಯದಲ್ಲಿ 10 ಮಿಲಿಯನ್ ಡಾಲರ್ ಹಣವನ್ನು ಟೆಸ್ಲಾ ಮೇಲೆ ಹೂಡಿಕೆ ಮಾಡುತ್ತಾರೆ. ಶ್ರೀಮಂತ ಗೆಳೆಯರಿಂದ ಸಾಲ ಪಡೆದು ಎಲಾನ್ ಮಸ್ಕ್ ಜೀವನ ಮಾಡುತ್ತಾರೆ. ಮನೆ ಖರ್ಚಿಗೂ, ಪ್ರಯಾಣಕ್ಕೂ ಸಾಲ ಮಾಡಿಕೊಂಡು ಎಲಾನ್ ಮಸ್ಕ್ ಓಡಾಡುತ್ತಿದ್ದರು. ಸದ್ಯ ಎಲಾನ್ ಮಸ್ಕ್ ಸಂಪತ್ತು 309 ಬಿಲಿಯನ್ ಡಾಲರ್‌ಗೂ ಅಧಿಕವಾಗಿದೆ. ಈ ಸಂಪತ್ತಿನ ಅತಿ ದೊಡ್ಡ ಮೂಲ ಟೆಸ್ಲಾ ಕಂಪನಿಯಾಗಿದೆ.
Elon Musk
ಎಲಾನ್ ಮಸ್ಕ್ ಟೆಸ್ಲಾ ಕಂಪನಿಯಲ್ಲಿ ಶೇ.13ರಷ್ಟು ಷೇರು ಹೊಂದಿದ್ದಾರೆ. ಇನ್ನು ಶೇ.9ರಷ್ಟು ಬೋನಸ್ ಸ್ಟಾಕ್ ಆಪ್ಷನ್ ಇದೆ. ಹಾಗೆ ಸ್ಪೇಸ್ ಎಕ್ಸ್ ನಲ್ಲಿ ಶೇ.42ರಷ್ಟು ಷೇರುಗಳನ್ನು ಹೊಂದಿದ್ದಾರೆ. ನಂತರ ಒಂದೊಂದಾಗಿ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಲು ಆರಂಭಿಸಿದರು. ಎಲಾನ್ ಮಸ್ಕ್ ತನ್ನ ಕಂಪನಿಗೆ ಎಷ್ಟು ಉದ್ಯೋಗಿಗಳು ಬೇಕು ಎಂಬುದು ಗೊತ್ತು. ಹಾಗಾಗಿಯೇ ಟ್ವಿಟ್ಟರ್ ಖರೀದಿ ಬಳಿಕ ಶೇ.80ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದರು. ಆದ್ರೂ ಟ್ವಿಟ್ಟರ್ ಲಾಭದಲ್ಲಿಯೇ ಇದೆ.