ಓಂ ಚಿತ್ರವು ನಟ ಶಿವಣ್ಣರ ಸಿನಿಮಾ ಜರ್ನಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಸಿನಿಮಾ. ಅಲ್ಲಿಯವರೆಗೆ ಲವರ್‌ ಬಾಯ್ ಇಮೇಜ್ ಅಂಟಿಸಿಕೊಂಡಿದ್ದ ನಟ ಶಿವರಾಜ್‌ಕುಮಾರ್ ಅವರು ಓಂ ಚಿತ್ರದ ಬಳಿಕ ಆಕ್ಷನ್ ಹೀರೋ ಆಗಿ ಬದಲಾದರು. ನಿರ್ದೇಶಕ ಉಪೇಂದ್ರ  ಅವರಿಗೆ ಭಾರೀ..


ಕನ್ನಡದ ಗ್ರೇಟ್ ತಾರೆಗಳಾದ ಉಪೇಂದ್ರ (Real Star Upendra) ಹಾಗೂ ಶಿವರಾಜ್‌ಕುಮಾರ್ (Shiva Rajkumar) ಜೋಡಿಯ ಓಂ ಚಿತ್ರವು 550ಕ್ಕು ಹೆಚ್ಚು ಬಾರಿ ಮರುಬಿಡುಗಡೆ ಆಗಿ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿದೆ. ಈ ಓಂ ಚಿತ್ರವು ಇದೀಗ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ ಸೇರಿದೆ. ಈ ಮೂಲಕ ಕನ್ನಡ ಚಿತ್ರರಂಗದ ಸಾಧನೆಯು ಮತ್ತೊಮ್ಮೆ ಭಾರತೀಯ ಚಿತ್ರರಂಗದಲ್ಲಿ ಮಿಂಚಿದ್ದು ಇಡೀ ದೇಶ ಕರ್ನಾಟಕದತ್ತ ತಿರುಗಿ ನೋಡುವಂತೆ ಆಗಿದೆ. ಓಂ (Om) ಸಿನಿಮಾ ಮತ್ತೊಮ್ಮೆ ಮಗದೊಮ್ಮೆ ಸುದ್ದಿಯಾಗುತ್ತಿದೆ. 

ಹೌದು, ಡಾ ರಾಜ್‌ ಕುಟುಂಬದ, ಪಾರ್ವತಮ್ಮ ರಾಜ್‌ಕುಮಾರ್ ನೇತೃತ್ವದ 'ವಜ್ರೇಶ್ವರಿ' ಕಂಬೈನ್ಸ್' ಮೂಲಕ ನಿರ್ಮಾಣ ಆಗಿರುವ ಸಿನಿಮಾ ಓಂ. 1995ರಲ್ಲಿ ಬಿಡುಗಡೆಯಾಗಿ ಆ ವರ್ಷದ ಸೂಪರ್‌ ಹಿಟ್ ದಾಖಲಿಸಿ ಹೊಸ ರೆಕಾರ್ಡ್ ಮಾಡಿತ್ತು ಓಂ. ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು ಕನ್ನಡದ ಹೆಮ್ಮೆಯ ನಟ-ನಿರ್ದೇಶಕ ಉಪೇಂದ್ರ. ಹ್ಯಾಟ್ರಿಕ್ ಹೀರೋ ಖ್ಯಾತಿಯ ನಟ ಶಿವರಾಜ್‌ಕುಮಾರ್ ಅವರು ಈ ಚಿತ್ರದ ಹೀರೋ, ನಾಯಕಿ ನಟಿ ಪ್ರೇಮಾ (Actress Prema)!

ಡಾ ರಾಜ್‌ ಮೇಲಿದ್ದ ಭಾರೀ ಆರೋಪವೇನು? ಏನೇ ಇದ್ದರೂ ಅವೆಲ್ಲವೂ ಸತ್ಯಕ್ಕೆ ದೂರ ಅಂದ್ರಲ್ಲ!

ಓಂ ಚಿತ್ರವು ನಟ ಶಿವಣ್ಣರ ಸಿನಿಮಾ ಜರ್ನಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಸಿನಿಮಾ. ಅಲ್ಲಿಯವರೆಗೆ ಲವರ್‌ ಬಾಯ್ ಇಮೇಜ್ ಅಂಟಿಸಿಕೊಂಡಿದ್ದ ನಟ ಶಿವರಾಜ್‌ಕುಮಾರ್ ಅವರು ಓಂ ಚಿತ್ರದ ಬಳಿಕ ಆಕ್ಷನ್ ಹೀರೋ ಆಗಿ ಬದಲಾದರು. ನಿರ್ದೇಶಕ ಉಪೇಂದ್ರ ಅವರಿಗೆ ಭಾರೀ ಜನಪ್ರಿಯತೆ ತಂದುಕೊಟ್ಟ ಓಂ ಚಿತ್ರವು, ನಟಿ ಪ್ರೇಮಾ ಅವರಿಗೆ ಸ್ಟಾರ್ ನಟಿ ಪಟ್ಟ ಕಟ್ಟಿ, ಬಹಳಷ್ಟು ಅವಕಾಶಗಳಿಗೆ ಕಾರಣವಾಯ್ತು.

ಮನೆಗೆ ಚಿರು ಹೆಸರಿಲ್ಲ ಎಂದಿದ್ದ ಅಭಿಮಾನಿಗಳೇ 'ದೇವತೆ ನಮ್ಮ ಕರುನಾಡ ಅತ್ತಿಗೆ' ಅಂದಿದ್ಯಾಕೆ?

ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರು ಈ ಚಿತ್ರದ ಮೂಲಕ ಬಹಳಷ್ಟು ಲಾಭ ಹಾಗು ಜನಪ್ರಿಯತೆ ಪಡೆದುಕೊಂಡರು. ಇಂದಿಗೂ ಕೂಡ ಈ ಚಿತ್ರದ ಹಕ್ಕನ್ನು ಡಾ ರಾಜ್‌ಕುಮಾರ್ ಫ್ಯಾಮಿಲಿ ಸೇಲ್ ಮಾಡದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಈ ಚಿತ್ರವನ್ನು ಪದೇಪದೇ ಮರುಬಿಡುಗಡೆ ಮಾಡಿ ಜನಜಾತ್ರೆ ಸೇರಿಸುವ ಮೂಲಕ ಈ ಚಿತ್ರ ಯಾವತ್ತೂ ಔಟ್‌ಡೇಟೆಡ್ ಅಲ್ಲ ಎನ್ನುವ ಸಂದೇಶವನ್ನು ನೀಡುತ್ತಿದ್ದಾರೆ ಎನ್ನಬಹುದು.

ಇದೀಗ ಚಿತ್ರವು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ ಸೇರಿದ್ದು, ಹೊಸ ದಾಖಲೆಯನ್ನು ಸೃಷ್ಟಿಸಿ ಕನ್ನಡಿಗರ ತಲೆಗೆ ಕಿರೀಟ ಮೂಡಿಸಿದ್ದಾರೆ. ಒಟ್ಟಿನಲ್ಲಿ ಈ ಓಂ ಚಿತ್ರವು ಹೊಸ ಇತಿಹಾಸ ಬರೆಯುತ್ತಲೇ ಇರುತ್ತದೆ ಎನ್ನಬಹುದು.