ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮನೆ ಮದ್ದು, ಮಸಾಲ ಚಹಾ ಮಾಡುವ ವಿಧಾನ
ಮಳೆಗಾಲದಲ್ಲಿ ಬಿಸಿ ಬಿಸಿ ಚಹಾ ಕುಡಿಯುವುದು ಯಾರಿಗೆ ತಾನೇ ಇಷ್ಟವಿಲ್ಲ? ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮಸಾಲ ಚಹಾವನ್ನು ತಯಾರಿಸುವುದು ಹೇಗೆಂದು ತಿಳಿಯೋಣ.
ಮಳೆಗಾಲದಲ್ಲಿ ಬಿಸಿ ಬಿಸಿ ಚಹಾ ಕುಡಿಯುವುದು ಯಾರಿಗೆ ತಾನೇ ಇಷ್ಟವಿಲ್ಲ? ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಆಯಾಸ ನಿವಾರಿಸಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುವ ಮಸಾಲ ಚಹಾವನ್ನು ತಯಾರಿಸುವುದು ಹೇಗೆಂದು ತಿಳಿಯೋಣ.
ಈಗಾಗಲೇ ಅರ್ಧ ಕತ್ತಲೆಯಲ್ಲಿರುವ ಬಾಂಗ್ಲಾಗೆ ಆದಾನಿ ಗ್ರೂಪ್ ವಾರ್ನಿಂಗ್, ಬಿಲ್ ಕಟ್ಟದಿದ್ದರೆ ಪವರ್ ಕಟ್!
ಬೇಕಾಗುವ ಸಾಮಗ್ರಿಗಳು
ಚಹಾ ಪುಡಿ - 2 ಟೀ ಚಮಚ
ಹಾಲು - ಒಂದು ಕಪ್
ನೀರು - ಎರಡು ಕಪ್
ಚಕ್ಕೆ - ಚಿಕ್ಕ ತುಂಡು
ಲವಂಗ - 2
ಏಲಕ್ಕಿ - 2
ಶುಂಠಿ - ಸ್ವಲ್ಪ
ಸಕ್ಕರೆ - ಅಗತ್ಯವಿರುವಷ್ಟು
15ರ ಹರೆಯದ ಬಾಲಕನ ಹೊಟ್ಟೆಯಲ್ಲಿ 56 ಲೋಹದ ತುಣುಕುಗಳು, ಆಪರೇಷನ್ ಬಳಿಕ ಪ್ರಾಣ ಬಿಟ್ಟ!
ತಯಾರಿಸುವ ವಿಧಾನ: ಮೊದಲು ನೀರನ್ನು ಕುದಿಸಿ. ಮಸಾಲೆಗಳನ್ನು ಲಘುವಾಗಿ ಜಜ್ಜಿ ಒಂದು ಬಟ್ಟೆಯಲ್ಲಿ ಕಟ್ಟಿ ನೀರಿಗೆ ಹಾಕಿ. ನೀರು ಕುದಿಯಲು ಶುರುವಾದಾಗ ಚಹಾ ಪುಡಿ ಸೇರಿಸಿ. ನಂತರ ಮಸಾಲೆಗಳನ್ನು ತೆಗೆಯಿರಿ. ಕುದಿಯುತ್ತಿರುವ ಹಾಲನ್ನು ಸೇರಿಸಿ. ಸಕ್ಕರೆ ಸೇರಿಸಿ ಚೆನ್ನಾಗಿ ಕುದಿಸಿ. ಬಿಸಿ ಬಿಸಿ ಮಸಾಲ ಚಹಾ ಸವಿಯಲು ಸಿದ್ಧ.