ಇನ್ನೇನು ಹೊರಡಬೇಕೆನ್ನುವಷ್ಟರಲ್ಲೇ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಸಂಪೂರ್ಣ ಬೋಗಿ ನಾಪತ್ತೆ!
ರೈಲು ಇತಿಹಾಸದಲ್ಲೇ ಈ ರೀತಿ ಘಟನೆ ಇದೇ ಮೊದಲು ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಹೊರಡುವ ಸಮಯವಾಗಿದೆ. ಅಷ್ಟೊತ್ತಿಗೆ ಅಚ್ಚರಿ ಘಟನೆ ನಡೆದಿದೆ. ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಸಂಪೂರ್ಣ ಬೋಗಿ ನಾಪತ್ತೆಯಾದ ಅಪರೂಪದ ಘಟನೆ ನಡೆದಿದೆ.
ನವದೆಹಲಿ(ನ.16) ಅದು ಶತಾಬ್ದಿ ಎಕ್ಸ್‌ಪ್ರೆಸ್ ರೈಲು. ಹೀಗಾಗಿ ತಕ್ಕ ಸಮಯಕ್ಕೆ ಹೊರಡಲಿದೆ. ಇದೇ ಕಾರಣಕ್ಕೆ ಪ್ರಯಾಣಿಕರು ಸರಿಯಾದ ಸಮಯಕ್ಕೆ ರೈಲಿನೊಳಗೆ ಸೇರಿಕೊಂಡಿದ್ದಾರೆ. ಹಲವರು ತರಾತುರಿಯಲ್ಲಿ ಬಂದು ರೈಲು ಹತ್ತಿದ್ದಾರೆ. ಇನ್ನೇನು ರೈಲು ಹೊರಡಬೇಕು. ಸಮಯ ಮೀರಿದರೂ ರೈಲು ಹೊರಡಲೇ ಇಲ್ಲ. ಅರೇ ಇದೇನಿದು ಎಂದು ಪ್ರಯಾಣಿಕರು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ರೈಲು ಬೋಗಿಯ ಬಾಗಿಲ ಬಳಿ ಇರುವ ಪ್ರಯಾಣಿಕರು ಇಳಿದು ನೋಡುತ್ತಿದ್ದಾರೆ. ಒಂದಷ್ಟು ಸಿಬ್ಬಂದಿಗಳು, ಸ್ಟೇಷನ್ ಮಾಸ್ಟರ್, ರೈಲ್ವೇ ಪೊಲೀಸರು ಸೇರಿದ್ದಾರೆ. ವಿಚಾರಿಸಿದಾಗ ಪ್ರಯಾಣಿಕರಿಗೆ ಅಚ್ಚರಿಯಾಗಿದೆ. ಕಾರಣ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಸಂಪೂರ್ಣ ಬೋಗಿ ನಾಪತ್ತೆಯಾಗಿದೆ. ಹೀಗಾಗಿ ರೈಲು ತಕ್ಕ ಸಮಯಕ್ಕೆ ಹೊರಡಲು ಸಾಧ್ಯವಾಗಿಲ್ಲ.
ಇದು ತಮಾಷೆಯಲ್ಲ, ನಡೆದ ನಿಜ ಘಟನೆ. ದೆಹಲಿ ಅಮೃತಸರ ಶತಾಬ್ದಿ ಎಕ್ಸ್‌ಪ್ರೆಸ್ ರೈಲು. ದೆಹಲಿಯ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದ ರೈಲಿನಲ್ಲಿ ಪ್ರಯಾಣಿಕರು ಎಲ್ಲರೂ ಕುಳಿತಿದ್ದಾರೆ. 7.20ರ ರೈಲು ಕ್ರಾಸಿಂಗ್ ಸಮಯ ಕಳೆದಿದೆ. ಆದರೂ ರೈಲು ಹೊರಟಿಲ್ಲ. ಹೀಗಾಗಿ ಪ್ರಯಾಣಿಕರು ರೈಲಿನಿಂದ ಇಳಿದು ವಿಚಾರಿಸುವ ಪ್ರಯತ್ನ ಮಾಡಿದ್ದಾರೆ.ಆರಂಭದಲ್ಲೇ ತಾಂತ್ರಿಕ ಕಾರಣ ನೀಡಿದರೆ ಪ್ರಯಾಣಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ರೈಲ್ವೇ ಸಿಬ್ಬಂದಿಗಳು ಅಸಲಿ ವಿಚಾರ ಬಹಿರಂಗಪಡಿಸಿದ್ದಾರೆ. ದೆಹಲಿ-ಅಮೃತಸರ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಎಕ್ಸ್‌ಕ್ಯೂಟೀವ್ ಕೋಚ್ ನಾಪತ್ತೆಯಾಗಿದೆ ಎಂದಿದ್ದಾರೆ. ಇದು ಹೇಗೆ ಸಾಧ್ಯ?
ರೈಲ್ವೇ ಎಡವಟ್ಟಿನಿಂದ ಶತಾಬ್ದಿ ಎಕ್ಸ್‌ಪ್ರೆಸ್ ಟ್ರೈನ್ ಮಾಲೀಕನಾದ ಸಾಮಾನ್ಯ ರೈತ!
ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ರೈಲ್ವೇ ಸಿಬ್ಬಂದಿಗಳು ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಬೋಗಿ ಮಿಸ್ಸಿಂಗ್ ಅನ್ನೋದು ಒಪ್ಪಿಕೊಂಡಿದ್ದಾರೆ. ಹೌದು, ಸಿಬ್ಬಂದಿಗಳು ಮಾಡಿದ ಎಡವಟ್ಟಿನಿಂದ ರೈಲ್ವೇ ಇತಿಹಾಸದಲ್ಲೇ ಕೆಟ್ಟ ಘಟನೆಯಾಗಿ ಉಳಿದುಕೊಂಡಿದೆ. ಎಕ್ಸ್‌ಕ್ಯೂಟೀವ್ ಕೋಚ್ ಮೇಲ್ವಿಚಾರಣೆ ಮಾಡಲಾಗಿದೆ. ರೈಲ್ವೇ ಮೆಕಾನಿಕ್, ತಾಂತ್ರಿಕ ಸಿಬ್ಬಂದಿಗಳು ಮೇಲ್ವಾಚರಣೆ ಮಾಡಿದ್ದಾರೆ.ಬಳಿಕ ಬೋಗಿಯನ್ನು ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಜೋಡಿಸುವಲ್ಲಿ ಮರೆತಿದ್ದಾರೆ. ಇದು ಅತೀ ದೊಡ್ಡ ಎಡವಟ್ಟಿಗೆ ಕಾರಣವಾಗಿದೆ.
ರೈಲು ಹೊರಡಬೇಕು ಎನ್ನುವಷ್ಟರಲ್ಲೇ ರೈಲಿನ ಕೋಚ್ ನಾಪತ್ತೆಯಾಗಿದೆ ಅನ್ನೋದು ತಿಳಿದಿದೆ. ಹೊರಡುವ ವೇಳೆ ಸಿಬ್ಬಂದಿಗಳು ಕೋಚ್ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಇದರಿಂದ ರೈಲು ವಿಳಂಬವಾಗಿದೆ. ಇತ್ತ ಮಾಹಿತಿ ತಿಳಿದು ಪ್ರಯಾಣಿಕರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸೇರಿದಂತೆ ಹಲವು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. 7.20ಕ್ಕೆ ಹೊರಡಬೇಕಿದ್ದ ಶತಾಬ್ದಿ ಎಕ್ಸ್‌ಪ್ರೆಸ್ ರೈಲು 8.30 ಆದರೂ ಹೊರಟಿಲ್ಲ. ಬೋಗಿ ಸೇರಿಸಿದ ಬಳಿಕ ಭಾರಿ ವಿಳಂಬಾಗಿ ರೈಲು ಹೊರಟಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
ರೈಲು ಸಿಬ್ಬಂದಿಗಳ ಸಮಪರ್ಕ ಸಂವಹನ ಕೊರತೆ ಇದಕ್ಕೆ ಕಾರಣ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಸಿಬ್ಬಂದಿಗಳು, ಅಧಿಕಾರಿಗಳು, ತಾಂತ್ರಿಕ ವರ್ಗ ಸೇರಿದಂತೆ ಇತರ ಸಿಬ್ಬಂದಿಗಳ ನಡುವೆ ಸಂವಹನ ಸರಿಯಾಗಿಲ್ಲ. ಜವಾಬ್ದಾರಿಯೇ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ರೈಲು ನಿಲ್ದಾಣದಲ್ಲಿ ಹೊರಬೇಕಿರುವ ರೈಲಿನ ಬೋಗಿ ಮಿಸ್ಸಿಂಗ್ ಆಗಿರುವ ಘಟನೆ ಇದೇ ಮೊದಲು. ಇದೀಗ ಪ್ರಯಾಣಿಕರು ಸೇರಿದಂತೆ ನೆಟ್ಟಿಗರು, ರೈಲ್ವೇ ಅಧಿಕಾರಿಗಳನ್ನು ಟ್ರೋಲ್ ಮಾಡಿದ್ದಾರೆ.
ಡೀಸೆಲ್, ವಿದ್ಯುತ್ ಬೇಡ, ನೀರು ಕುಡಿದು ಚಲಿಸುವ ಭಾರತದ ಮೊದಲ ರೈಲು ಶೀಘ್ರದಲ್ಲಿ ಆರಂಭ!
ತಾಂತ್ರಿಕ ಕಾರಣ, ಹಳಿ ಸಮಸ್ಯೆ, ರೈಲಿನ ಸಿಬ್ಬಂದಿ, ಲೋಕೋ ಪೈಲೆಟ್ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ರೈಲು ವಿಳಂಬವವಾದ ಘಟನೆ ನಡೆದಿದೆ. ಆದರೆ ಇದುವರೆಗೂ ರೈಲಿನ ಬೋಗಿ ಮಿಸ್ಸಿಂಗ್ ಆದ ಉದಾಹರಣೆ ಇಲ್ಲ. ಆದರೆ ಇದೀಗ ಭಾರತೀಯ ರೈಲ್ವೇಯ ಈ ಘಟನೆ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಹಲವರು ಮೀಮ್ಸ್ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.