ಭಾರತ ಸೇರಿದಂತೆ ಹಲವು ದೇಶಗಳಿಗೆ ಕಡಿಮೆ ಗುಣಮಟ್ಟದ ಉತ್ಪನ್ನ ಮಾರಾಟ; ಗ್ಲೋಬಲ್ ಕಂಪನಿಗಳ ಕಳ್ಳಾಟ ಬಯಲು
ಪೆಪ್ಸಿಕೋ, ಯೂನಿಲಿವರ್ ಮತ್ತು ಡ್ಯಾನೋನ್‌ನಂತಹ ಜಾಗತಿಕ ಆಹಾರ ಕಂಪನಿಗಳು ಭಾರತ ಸೇರಿದಂತೆ ಬಡ ರಾಷ್ಟ್ರಗಳಿಗೆ ಕಡಿಮೆ ಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ ಎಂದು ಆಕ್ಸೆಸ್ ಟು ನ್ಯೂಟ್ರಿಷನ್ ಇನಿಶಿಯೇಟಿವ್ ವರದಿ ಮಾಡಿದೆ.
ನವದೆಹಲಿ: ಪೆಪ್ಸಿಕೋ (PepsiCo), ಯೂನಿಲಿವರ್ (Unilever) ಮತ್ತು ಡ್ಯಾನೋನ್‌ನಂತಹ (Danone) ಗ್ಲೋಬಲ್ ಫುಡ್ ಕಂಪನಿಗಳು (Global Food Company) ಭಾರತವೂ ಸೇರಿದಂತೆ ಹಲವು ಬಡ ರಾಷ್ಟ್ರಗಳಿಗೆ ಕಡಿಮೆ ಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ವರದಿಯೊಂದು ಪ್ರಕಟವಾಗಿದೆ. ಆಕ್ಸೆಸ್ ಟು ನ್ಯೂಟ್ರಿಷನ್ ಇನಿಶಿಯೇಟಿವ್ (Access to Nutrition Initiative) ಹೆಸರಿನ ಇಂಟರ್‌ನ್ಯಾಷನಲ್ ಎನ್‌ಜಿಒ ಈ ಗಂಭೀರ ಆರೋಪವನ್ನು ಮಾಡಿದೆ. ಈ ಎನ್‌ಜಿಒ ವರದಿ ಪ್ರಕಾರ, ಈ ಗ್ಲೋಬಲ್ ಕಂಪನಿಗಳು ಹೆಚ್ಚಿನ ಆದಾಯದ ದೇಶಗಳಲ್ಲಿ ಮಾರಾಟವಾಗುವ ಉತ್ಪನ್ನಗಳಿಗಿಂತ ಕಡಿಮೆ ರೇಟಿಂಗ್ (Health Star Rating) ಹೊಂದಿರುವ ಪ್ರೊಡಕ್ಟ್ ಮಾರಾಟ ಮಾಡುತ್ತಿವೆ.
ಭಾರತ, ಕೀನ್ಯಾ, ಪಾಕಿಸ್ತಾನ, ಫಿಲಿಪೈನ್ಸ್, ವಿಯೆಟ್ನಾಂನಂತಹ ದೇಶಗಳಲ್ಲಿ ಈ ಕಂಪನಿಗಳು ಕಡಿಮೆ ರೇಟಿಂಗ್ ಹೊಂದಿರುವ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ ಎಂದು ಆಕ್ಸೆಸ್ ಟು ನ್ಯೂಟ್ರಿಷನ್ ಇನಿಶಿಯೇಟಿವ್ ಹೇಳಿದೆ. ಈ ವರದಿಯ ಪ್ರಕಾರ, ಪೆಪ್ಸಿಕೋ ಕಂಪನಿ ತಯಾರಿಸುವ ಲೇಯ ಚಿಪ್ಸ್ ಮತ್ತು ಟ್ರೋಪಿಕಾನಾ ಜ್ಯೂಸ್ ನಂತಯ ಉತ್ಪನ್ನಗಳು ನ್ಯೂಟ್ರಿ-ಸ್ಕೋರ್ ಎ/ಬಿಯನ್ನು ಹೊಂದಿದ್ದು, ಇಂತಹ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಆರೋಗ್ಯರ ಉತ್ಪನ್ನಗಳು ಕೇವಲ ಯುರೋಪಿಯನ್ ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಯೂನಿಲಿವರ್‌ನ ಆಹಾರ ಉತ್ಪನ್ನಗಳಲ್ಲಿ ಕ್ವಾಲಿಟಿ ವಾಲ್ಸ್, ಮ್ಯಾಗ್ನಮ್ ಐಸ್ ಕ್ರೀಮ್ ಮತ್ತು ರೆಡಿ-ಟು-ಕುಕ್ ಮಿಶ್ರಣಗಳಂತಹ ಉತ್ಪನ್ನಗಳು ಸೇರಿವೆ. ಡ್ಯಾನೋನ್ ಭಾರತದಲ್ಲಿ ಪ್ರೋಟಿನೆಕ್ಸ್ ಮತ್ತು ಆಪ್ಟಮಿಲ್ ನಂತಹ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.
ಆಕ್ಸೆಸ್ ಟು ನ್ಯೂಟ್ರಿಷನ್ ಇನಿಶಿಯೇಟಿವ್ ಎನ್‌ಜಿಒ 30 ಪ್ರಮುಖ ಮತ್ತು ದೊಡ್ಡ ಕಂಪನಿಗಳ Ranking ಪಟ್ಟಿಯನ್ನು ಮಾಡಿದೆ. ಈ ಕಂಪನಿಗಳು ಅಭಿವೃದ್ಧಿ ಹೊಂದಿದ ಮತ್ತು ಬಡ ರಾಷ್ಟ್ರಗಳಿಗೆ ಮಾರಾಟ ಮಾಡುವ ಉತ್ಪನ್ನಗಳು ಬೇರೆ ಬೇರೆಯಾಗಿವೆ. ಮೊದಲ ಬಾರಿಗೆ ಅಭಿವೃದ್ಧಿ ಹೊಂದಿದ ಮತ್ತು ಬಡ ದೇಶಗಳಲ್ಲಿ ಮಾರಾಟವಾಗುತ್ತಿರುವ ಉತ್ಪನ್ನಗಳ ಗುಣಮಟ್ಟವನ್ನು ಹೋಲಿಕೆ ಮಾಡಲಾಗಿದೆ.
ಇದನ್ನೂ ಓದಿ: ಸುಖ್ವಿಂದರ್ ಸಮೋಸ ಯಾರ್ ತಿಂದಿದ್ದು? ಸಿಐಡಿ ತನಿಖೆಗೆ ಆದೇಶಿಸಿದ ಹಿಮಾಚಲ ಸರ್ಕಾರ!
ರೇಟಿಂಗ್‌ಗಳನ್ನು ಹೇಗೆ ನೀಡಲಾಗುತ್ತದೆ?
ATNI ವರದಿಯ ಪ್ರಕಾರ, ಹೆಲ್ತ್ ಸ್ಟಾರ್ ರೇಟಿಂಗ್ ಸಿಸ್ಟಮ್ ಅಡಿಯಲ್ಲಿ ಉತ್ಪನ್ನಗಳನ್ನು 5-ಪಾಯಿಂಟ್ ಸ್ಕೇಲ್‌ನಲ್ಲಿ ರೇಟ್ ಮಾಡಲಾಗುತ್ತದೆ. ಇದರಲ್ಲಿ 5 ಉತ್ತಮ ರೇಟಿಂಗ್ ಆಗಿದೆ. ಉತ್ಪನ್ನ 3.5ಕ್ಕಿಂತ ಹೆಚ್ಚು ಪಡೆದ್ರೆ ಅದನ್ನು ಆರೋಗ್ಯಕರ ಆಹಾರ ಎಂದು ಪರಿಗಣಿಸಲಾಗುತ್ತದೆ. ಬಡ ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿರುವ ಆಹಾರ ಉತ್ಪನ್ನಗಳ ಸರಾಸರಿ ರೇಟಿಂಗ್ 1.8 ಆಗಿದ್ದು, ಹೆಚ್ಚು ಆದಾಯ ನೀಡುವ ದೇಶಗಳಲ್ಲಿ ಮಾರಾಟವಾಗುವ ಉತ್ಪನ್ನಗಳು 2.8 ರೇಟಿಂಗ್ ಹೊಂದಿವೆ. ಭಾರತದಲ್ಲಿ ಸಕ್ರಿಯವಾಗಿರುವ ಪೆಪ್ಸಿಕೋ, ಡ್ಯಾನೋನ್ ಮತ್ತು ಯೂನಿಲಿವರ್‌ನಂತಹ ಪ್ರಮುಖ ಕಂಪನಿಗಳನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ರೆಸ್ಟೋರೆಂಟ್‌ಗಳ ಜೊತೆ ಒಪ್ಪಂದ, Zomato, Swiggy ಕಳ್ಳಾಟ ಬಯಲು ಮಾಡಿದ ಸಿಸಿಐ