ಒಳ್ಳೆ ನಿದ್ದೆ ಬರಬೇಕು ಎಂದರೆ ನಮ್ಮ ಆಹಾರಕ್ರಮ ಕೂಡ ತುಂಬಾ ಮುಖ್ಯ. ಕೆಲವು ವಿಟಮಿನ್ ಮತ್ತು ಮಿನರಲ್ಸ್ ಕೊರತೆಯಿಂದ ನಿದ್ದೆ ಸಮಸ್ಯೆ ಕಾಡಬಹುದು. ಕೆಳಗೆ ಹೇಳಿರುವ ಈ ಆಹಾರಗಳನ್ನು ಸೇವಿಸಿ ನೆಮ್ಮದಿಯಿಂದ ನಿದ್ರಿಸಿ.

ರಾತ್ರಿ ಚೆನ್ನಾಗಿ ನಿದ್ದೆ ಬರ್ತಿಲ್ವಾ? ಹಾಗಾದ್ರೆ ಈ ಆಹಾರ ಸೇವಿಸಿ:-

ಒಳ್ಳೆ ನಿದ್ದೆ ಬರೋಕೆ ನಮ್ಮ ಆಹಾರಕ್ರಮ ಕೂಡ ತುಂಬಾ ಮುಖ್ಯ. ಕೆಲವು ವಿಟಮಿನ್ ಮತ್ತು ಮಿನರಲ್ಸ್ ಕೊರತೆಯಿಂದ ನಿದ್ದೆ ಸಮಸ್ಯೆ ಕಾಡಬಹುದು. ಜೀರ್ಣಕ್ರಿಯೆಗೆ ಪೂರಕವಾದ ಆಹಾರ ತಿಂದರೆ ದೇಹಕ್ಕೆ ಬೇಕಾದ ಪೋಷಕಾಂಶ ಸಿಗುತ್ತೆ, ಇದರಿಂದ ರಾತ್ರಿ ಸುಖವಾದ ನಿದ್ದೆ ಬರುತ್ತೆ. ಒಳ್ಳೆ ನಿದ್ದೆ ಬರಲು ಯಾವೆಲ್ಲ ಆಹಾರ ತಿನ್ನಬೇಕು ಅಂತ ಇಲ್ಲಿ ನೋಡೋಣ.

ನಿದ್ದೆ ಅಭ್ಯಾಸ ಸರಿಪಡಿಸಲು ಮತ್ತು ಒಳ್ಳೆ ನಿದ್ದೆ ಬರಲು ಕಿವಿ ಹಣ್ಣು ಸಹಾಯ ಮಾಡುತ್ತೆ-ಬೇಗ ನಿದ್ದೆ ಬರಲು ಸಹಾಯ ಮಾಡುವ ಆಂಟಿಆಕ್ಸಿಡೆಂಟ್ಸ್ ಮತ್ತು ಸೆರೋಟೋನಿನ್ ಕಿವಿ ಹಣ್ಣಿನಲ್ಲಿ ಇದೆ. ನಿದ್ದೆ ಅಭ್ಯಾಸ ಸರಿಪಡಿಸಲು ಮತ್ತು ಒಳ್ಳೆ ನಿದ್ದೆ ಬರಲು ಕಿವಿ ಹಣ್ಣು ಸಹಾಯ ಮಾಡುತ್ತೆ.

ಮೆಗ್ನೀಷಿಯಂ ಮತ್ತು ಆರೋಗ್ಯಕರ ಕೊಬ್ಬಿನಂಶ ಬಾದಾಮಿಯಲ್ಲಿದೆ- ಸ್ನಾಯುಗಳಿಗೆ ಆರಾಮ ನೀಡಲು ಮತ್ತು ಒತ್ತಡ ಕಡಿಮೆ ಮಾಡಲು ಸಹಾಯ ಮಾಡುವ ಮೆಗ್ನೀಷಿಯಂ ಹಾಗೂ ಮೆಲಟೋನಿನ್ ನಟ್ಸ್‌ನಲ್ಲಿದೆ. ಮೆಗ್ನೀಷಿಯಂ ಮತ್ತು ಆರೋಗ್ಯಕರ ಕೊಬ್ಬಿನಂಶ ನಟ್ಸ್‌ನಿಂದ ಸಿಗುತ್ತೆ.

ಮೆಲಾಟೋನಿನ್ ಉತ್ಪಾದನೆಗೆ ಬಾಳೆಹಣ್ಣು ಸಹಾಯ ಮಾಡುತ್ತೆ, ಹಾಗೆ ನಿದ್ದೆ ಗುಣಮಟ್ಟ ಹೆಚ್ಚಿಸುತ್ತೆ- ಮೆಗ್ನೀಷಿಯಂ, ಪೊಟ್ಯಾಶಿಯಂ ಮತ್ತು ಟ್ರಿಪ್ಟೋಫಾನ್ ಹೆಚ್ಚಾಗಿರುವ ಬಾಳೆಹಣ್ಣು ಸ್ನಾಯುಗಳಿಗೆ ಆರಾಮ ನೀಡುತ್ತೆ. ಮೆಲಾಟೋನಿನ್ ಉತ್ಪಾದನೆಗೆ ಸಹಾಯ ಮಾಡುವ ಮೂಲಕ ನಿದ್ದೆ ಗುಣಮಟ್ಟ ಹೆಚ್ಚಿಸುತ್ತೆ.

ನಿದ್ದೆಗೆ ತೊಂದರೆ ಕೊಡುವ ಸಮಸ್ಯೆಗಳನ್ನು ಮೊಸರು ತಡೆಯುತ್ತೆ- ಹೊಟ್ಟೆಯ ಆರೋಗ್ಯಕರ ಮೈಕ್ರೋಬಯೋಮ್ ಅನ್ನು ಕಾಪಾಡುವ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಮೊಸರು ತುಂಬಾ ಒಳ್ಳೆಯ ಆಹಾರ. ಇದು ಹೊಟ್ಟೆಯ ಸೂಕ್ಷ್ಮಾಣುಗಳಿಗೆ ಒಳ್ಳೆಯದು. ನಿದ್ದೆಗೆ ತೊಂದರೆ ಕೊಡುವ ಸಮಸ್ಯೆಗಳನ್ನು ಮೊಸರು ತಡೆಯುತ್ತೆ.

ಜೀರ್ಣಕ್ರಿಯೆ ಸುಧಾರಿಸಲು ಮತ್ತು ಒಳ್ಳೆ ನಿದ್ದೆ ಬರಲು ಶುಂಠಿ ಸಹಾಯ ಮಾಡುತ್ತೆ- ಊತ ಕಡಿಮೆ ಮಾಡುವ ಗುಣ ಶುಂಠಿಗಿದೆ. ಇದು ಹೊಟ್ಟೆಯ ಊತ ಕಡಿಮೆ ಮಾಡಿ ಜೀರ್ಣಕ್ರಿಯೆ ಸುಧಾರಿಸುತ್ತೆ, ಇದರಿಂದ ಒಳ್ಳೆ ನಿದ್ದೆ ಬರುತ್ತೆ.

ಹೊಟ್ಟೆಯ ಸೂಕ್ಷ್ಮಾಣುಗಳ ಆರೋಗ್ಯ ಕಾಪಾಡಲು ಮತ್ತು ಒಳ್ಳೆ ನಿದ್ದೆಗೆ ಅರಿಶಿನ ಸಹಕಾರಿ- ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಅಂಶ ಆಂಟಿ ಇನ್ಫ್ಲಮೇಟರಿ ಗುಣ ಹೊಂದಿದೆ. ಇದು ಹೊಟ್ಟೆಯ ಸೂಕ್ಷ್ಮಾಣುಗಳ ಆರೋಗ್ಯ ಕಾಪಾಡುವ ಜೊತೆಗೆ ಒಳ್ಳೆ ನಿದ್ದೆಗೆ ಸಹಾಯ ಮಾಡುತ್ತೆ.

ಕಪ್ಪು ಕಲೆ ಹೊಂದಿರುವ ಈರುಳ್ಳಿ ತಿಂತೀರಾ? ಹಾಗಿದ್ರೆ ಎಚ್ಚರ.. ಅದರಿಂದ ಏನೆಲ್ಲಾ ಸಮಸ್ಯೆ ಆಗುತ್ತೆ ಗೊತ್ತಾ?