ವಿಜಯಪುರ ನಗರದ ಆಶ್ರಮ ರಸ್ತೆಯ ಐಶ್ವರ್ಯ ನಗರದ ಚಾಮುಂಡೇಶ್ವರಿ ದೇಗುಲ ಕಮಿಟಿ ಈ ವಿಶಿಷ್ಟ, ವಿನೂತನ ಮೆರವಣಿಗೆ ಮೂಲಕ ಗಮನ ಸೆಳೆದಿದೆ. ಈ ಮೂಲಕ ಗುಮ್ಮಟನಗರಿಯಲ್ಲಿ ದಸರಾ ಮೆರಗನ್ನ ಮರುಸೃಷ್ಟಿಸಿದೆ.
ವಿಜಯಪುರ(ಅ.03): ನಗರದಲ್ಲಿ ನಡೆದ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಜನರ ಕಣ್ಮನ ಸೆಳೆದಿದೆ. ವಿಶೇಷ ಎಂದರೆ ಮೈಸೂರು ದಸರಾ ಮಾದರಿಯಲ್ಲೇ ಆನೆ, ಅಂಬಾರಿ, ರೂಪಕಗಳ ಜೊತೆಗೆ ಮೆರವಣಿಗೆ ನಡೆಸಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇಂದು(ಗುರುವಾರ) ನಗರದ ಆಶ್ರಮ ರಸ್ತೆಯ ಐಶ್ವರ್ಯ ನಗರದ ಚಾಮುಂಡೇಶ್ವರಿ ದೇಗುಲ ಕಮಿಟಿ ಈ ವಿಶಿಷ್ಟ, ವಿನೂತನ ಮೆರವಣಿಗೆ ಮೂಲಕ ಗಮನ ಸೆಳೆದಿದೆ. ಈ ಮೂಲಕ ಗುಮ್ಮಟನಗರಿಯಲ್ಲಿ ದಸರಾ ಮೆರಗನ್ನ ಮರುಸೃಷ್ಟಿಸಿದೆ.
ವಿಜಯಪುರ: ಗಣಪತಿ ಚೌಕ್ ಮೇಲೆ ಕಲ್ಲು ಎಸೆತ ಪ್ರಕರಣ, ಆರೋಪಿ ಸೊಹೇಲ್ ಜಮಾದಾರ್ ಹೆಡೆಮುರಿ ಕಟ್ಟಿದ ಪೊಲೀಸ್!
ಈ ರೀತಿಯ ಮೈಸೂರು ದಸರಾದಂತೆಯೇ ಅಂಬಾರಿ ಜೊತೆಗೆ ಭವ್ಯ ಮೆರವಣಿಗೆ ನಡೆದಿದ್ದು ವಿಜಯಪುರ ನಗರದಲ್ಲಿ ಇದೆ ಮೊದಲು ಎನ್ನಲಾಗಿದೆ. ಜನರು ಸಹ ಮೈಸೂರು ದಸರಾ ಮಾದರಿಯನ್ನ ಕಣ್ತುಂಬಿಕೊಂಡಿದ್ದಾರೆ.
