ಫ್ಯಾಶನ್ ಬ್ರ್ಯಾಂಡ್ ಚನೆಲ್ ಇತ್ತೀಚೆಗೆ ಅರ್ಧ ಕಾಲು ಕವರ್ ಮಾಡೋ ಚಪ್ಪಲಿ ಲಾಂಚ್ ಮಾಡಿತ್ತು. ಫ್ಯಾಶನ್ ವೀಕ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಈ ಅರ್ಧ ಎಂದು ಇದರ ಬೆಲೆ ಅರ್ಧ ಅಥವಾ ಕಡಿಮೆ ಏನಿಲ್ಲ. ಈ ಬೆಲೆ ನೋಡಿದರೆ ಅಚ್ಚರಿಯಾಗುವುದು ಖಚಿತ

ಫ್ಯಾಶನ್ ಜಗತ್ತಿನಲ್ಲಿ ಪ್ರತಿ ಬಾರಿ ಹೊಸ ಮಾಡೆಲ್, ಹೊಸ ವಿನ್ಯಾಸ, ಹೊಸ ಪರಿಕಲ್ಪನೆಯ ಉತ್ಪನ್ನಗಳು ಪರಿಚಯವಾಗುತ್ತದೆ. ಹಲವು ಉತ್ಪನ್ನಗಳು ವಾವ್ ಎನಿಸಿಕೊಂಡರೆ ಮತ್ತೆ ಕೆಲವು ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸುತ್ತದೆ. ಇತ್ತೀಚೆಗೆ ನಡೆದ ಫ್ಯಾಶನ್ ಶೋನಲ್ಲಿ ಚಾನೆಲ್ ಬ್ರ್ಯಾಂಡ್ ಹಾಫ್ ಚಪ್ಪಲ್ ಅಥವಾ ಬೇರ್‌ಫೂಟ್ (ಬರಿಗಾಲಿನ) ಚಪ್ಪಲ್ ಪರಿಚಯಿಸಿತ್ತು. ಕಾಲಿನ ಹಿಂಭಾಗ ಮಾತ್ರ ಕವರು ಮಾಡುವ ಈ ಚಪ್ಪಲ್ ಎಲ್ಲರ ಗಮನೆಸಳೆದಿತ್ತು. ಫ್ಯಾಶನ್ ವೀಕ್‌ನಲ್ಲಿ ಯುವತಿಯರು ಈ ಚಪ್ಪಲಿ ಧರಿಸಿ ರ್ಯಾಂಪ್ ವಾಕ್ ಮಾಡಿದ್ದರು. ಆದರೆ ಇದರ ಬೆಲೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಬೇರ್ ಫೂಟ್ ಸ್ಯಾಂಡಲ್ ಬೆಲೆ 2.7 ಲಕ್ಷ ರೂಪಾಯಿ

ಫ್ಯಾಶನ್ ಲೋಕದಲ್ಲಿ ಚಾನೆಲ್ ಅತ್ಯಂತ ಜನಪ್ರಿಯ ಹಾಗೂ ಐಷಾರಾಮಿ ಬ್ರ್ಯಾಂಡ್. ಚಾನೆಲ್ ಲಾಂಚ್ ಮಾಡಿದ ಬೇರ್‌ಫೂಟ್ ಸ್ಯಾಂಡಲ್ಸ್ ಭಾರಿ ಚರ್ಚೆಯಾಗುತ್ತು. ಕಾರಿನ ಬೆರಳು ಸೇರಿದಂತೆ ಅರ್ಧ ಭಾಗ ಬರಿಗಾಲು, ಕೇವಲ ಹಿಂಭಾಗಕ್ಕೆ ಮಾತ್ರ ಚಪ್ಪಲಿ. ಈ ಚಪ್ಪಲ್ ಬೇಕಿತ್ತಾ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಇದರ ಬೆಲೆ ಬಹಿರಂಗವಾಗಿದೆ. ಈ ಬಲಿಗಾಲಿನ ಚಪ್ಪಲಿಗೆ ಬರೋಬ್ಬರಿ 2.7 ಲಕ್ಷ ರೂಪಾಯಿ.

ಅವಶ್ಯಕತೆ ಇದೆಯಾ?

2 ಲಕ್ಷ ರೂಪಾಯಿ, 3 ಲಕ್ಷ ರೂಪಾಯಿ ಸೇರಿದಂತೆ ದುಬಾರಿ ಚಪ್ಪಲಿಗಳು ಸಮಾನ್ಯ. ಆದರೆ ಈ ಬರಿಗಾಲಿನ ಚಪ್ಪಲ್‌ಗೆ ಇಷ್ಟೊಂದು ಬೆಲೆ ನೀಡಬೇಕಾ? ಅಷ್ಟಕ್ಕೂ ಈ ಚಪ್ಪಲಿ 2.7 ಲಕ್ಷ ರೂಪಾಯಿ ನೀಡುವಷ್ಟು ಇದೆಯಾ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ. ಈ ದುಬಾರಿ ಚಪ್ಪಲಿ ಹಾಕುವುದಾದರು ಏಲ್ಲಿ? ಇದಕ್ಕಿಂತ ಬರಿಗಾಲಲ್ಲೇ ನಡೆಯಬಹುದಲ್ಲಾ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಲಕ್ಷುರಿ ಬ್ರ್ಯಾಂಡ್‌ಗಳ ವಿಶೇಷ ಉತ್ಪನ್ನ

ಐಷಾರಾಮಿ ಬ್ರ್ಯಾಂಡ್‌ಗಳು ಪ್ರತಿ ಭಾರಿ ಹೊಸ ಉತ್ಪನ್ನ ಬಿಡುಗಡೆ ಮಾಡುವಾಗ ಭಿನ್ನವಾಗಿ ಆಲೋಚನೆ ಮಾಡುತ್ತದೆ. ವಿಶಿಷ್ಟ ವಿನ್ಯಾಸ, ವಿಶೇಷ ಪರಿಕಲ್ಪನೆಗಳ ಮೂಲಕ ಉತ್ಪನ್ನ ಲಾಂಚ್ ಮಾಡಲಾಗುತ್ತದೆ. ಗುಣಮಟ್ಟದ ದೊತೆಗೆ ಲಕ್ಷುರಿ ಬ್ರ್ಯಾಂಡ್ ಮೌಲ್ಯವನ್ನು ಈ ಬೆಲೆಯಲ್ಲಿ ಸೇರಿಸಲಾಗುತ್ತದೆ. ಜೊತೆಗೆ ಲಕ್ಷುರಿ ಬ್ರ್ಯಾಂಡ್‌ಗಳನ್ನು ಪ್ರತಿಷ್ಠೆಯಾಗಿ ಗುರುತಿಸಲಾಗುತ್ತದೆ. ಚಾನೆಲ್ ಲಾಂಚ್ ಮಾಡಿದ ಈ ಬೇರ್‌ಫೂಟ್ ವಿನ್ಯಾಸಕ್ಕೆ ಫ್ಯಾಶನ್ ಜಗತ್ತಿನಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ರೀತಿ ಆಲೋಚನೆ, ಧೈರ್ಯ ಹಾಗೂ ಊಹೆಗೂ ನಿಲುಕದ ವಿನ್ಯಾಸಕ್ಕೆ ಫ್ಯಾಶನ್ ದಿಗ್ಗಜರು ಮಾರು ಹೋಗಿದ್ದಾರೆ.