Kannada

ಕಿವಿಯ ಮೇಲ್ಭಾಗಕ್ಕೆ ಸೂಟ್ ಆಗೋ 7 ಟ್ರೆಂಡಿಂಗ್ ಚಿನ್ನದ ಓಲೆ ಡಿಸೈನ್ಸ್!

ಕಿವಿಯ ಮೇಲ್ಭಾಗದಲ್ಲಿ ಧರಿಸಬಹುದಾದ ಹಲವು ಬಗೆಯ ಚಿನ್ನದ ಓಲೆಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ.
Kannada

ಮಿನಿಮಲ್ ಗೋಲ್ಡ್ ಸ್ಟಡ್ಸ್ (Minimal Gold Studs)

ಡೈಲಿ ಯೂಸ್‌ಗೆ, ಆಫೀಸ್‌ಗೆ ಹೋಗೋಕೆ ಚಿಕ್ಕ ಚಿನ್ನದ ಸ್ಟಡ್ಸ್ ಪರ್ಫೆಕ್ಟ್. ಇದು ಸಿಂಪಲ್ ಆಗಿ, ನೀಟ್ ಲುಕ್ ಕೊಡುತ್ತೆ. ಅಷ್ಟೇ ಅಲ್ಲ, ಎಲ್ಲಾ ತರಹದ ಡ್ರೆಸ್‌ಗಳಿಗೂ ಇದು ಚೆನ್ನಾಗಿ ಮ್ಯಾಚ್ ಆಗುತ್ತೆ.

Image credits: Pinterest
Kannada

ಡೆಲಿಕೇಟ್ ಗೋಲ್ಡ್ ಹೂಪ್ಸ್ (Gold Hoops)

ಸದ್ಯಕ್ಕೆ ಚಿಕ್ಕ ಚಿನ್ನದ ಬಳೆ ಅಂದ್ರೆ ಹೂಪ್ಸ್ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಜೀನ್ಸ್, ಕುರ್ತಿ ಜೊತೆ ಕಿವಿಯ ಮೇಲ್ಭಾಗದಲ್ಲಿ ಇದನ್ನ ಹಾಕೊಂಡ್ರೆ, ಸ್ಟೈಲಿಶ್ ಹಾಗೂ ಮಾಡರ್ನ್ ಲುಕ್ ಸಿಗುತ್ತೆ.

Image credits: Pinterest
Kannada

ಡೈಮಂಡ್ ಟಚ್ ಓಲೆಗಳು

ಸ್ವಲ್ಪ ಗ್ರಾಂಡ್ ಲುಕ್‌ ಬೇಕು ಅಂದ್ರೆ, ಚಿನ್ನದ ಜೊತೆ ಡೈಮಂಡ್ ಸ್ಟೋನ್ಸ್ ಇರೋ ಸ್ಟಡ್ಸ್ ಹಾಕೋಬಹುದು. ಇದು ವಿಶೇಷ ಸಮಾರಂಭಗಳಿಗೆ, ಪಾರ್ಟಿಗಳಿಗೆ ಹೇಳಿ ಮಾಡಿಸಿದ ಆಕರ್ಷಕ ಆಯ್ಕೆ.

Image credits: Pinterest
Kannada

ಫ್ಲೋರಲ್ ಡಿಸೈನ್ (Floral Designs)

ಹೂವಿನ ಡಿಸೈನ್ ಇರೋ ಚಿಕ್ಕ ಚಿನ್ನದ ಓಲೆಗಳು ಕಿವಿಯ ಮೇಲ್ಭಾಗಕ್ಕೆ ತುಂಬಾ ಚೆನ್ನಾಗಿ ಕಾಣುತ್ತೆ. ಇದು ನೋಡೋಕೆ ಸಾಫ್ಟ್, ಫೆಮಿನಿನ್ ಲುಕ್ ಕೊಡುತ್ತೆ. ರೇಷ್ಮೆ ಸೀರೆಯಂತಹ ಡ್ರೆಸ್‌ಗಳಿಗೆ ಇದು ಪರ್ಫೆಕ್ಟ್ ಮ್ಯಾಚ್.

Image credits: Pinterest
Kannada

ಚೈನ್ ಸ್ಟೈಲ್ ಇಯರಿಂಗ್ಸ್ (Chain Style Earrings)

ಕಿವಿಯ ಮೇಲ್ಭಾಗ ಮತ್ತು ಕೆಳಭಾಗವನ್ನು ಕನೆಕ್ಟ್ ಮಾಡುವ ಚೈನ್ ಇರೋ ಓಲೆಗಳು ಈಗ ಸಖತ್ ಟ್ರೆಂಡಿಂಗ್. ಇದು ನಿಮಗೆ ಒಂದು ಯೂನಿಕ್ ಹಾಗೂ ಸ್ಟೈಲಿಶ್ ಲುಕ್ ಕೊಡುತ್ತೆ.

Image credits: Pinterest
Kannada

ಜಿಯೋಮೆಟ್ರಿಕ್ ಡಿಸೈನ್ಸ್ (Geometric Designs)

ತ್ರಿಕೋನ, ಚೌಕ ಅಥವಾ ಬೇರೆ ಬೇರೆ ಆಕಾರಗಳಲ್ಲಿರೋ ಚಿನ್ನದ ಓಲೆಗಳು ನಿಮ್ಮನ್ನು ಫ್ಯಾಷನ್ ಪ್ರಿಯರಂತೆ ತೋರಿಸುತ್ತೆ. ಬೋಲ್ಡ್ ಲುಕ್ ಇಷ್ಟಪಡೋ ಹುಡುಗಿಯರಿಗೆ ಇದು ಸರಿಯಾದ ಆಯ್ಕೆ.

Image credits: Pinterest
Kannada

ಲೇಯರ್ಡ್ ಸ್ಟೈಲ್ (Layered Style)

ಕಿವಿಯಲ್ಲಿ ಒಂದಕ್ಕಿಂತ ಹೆಚ್ಚು ಹೋಲ್ಸ್ ಇದ್ರೆ, ಬೇರೆ ಬೇರೆ ಸೈಜ್‌ನ ಚಿಕ್ಕ ಚಿನ್ನದ ಓಲೆಗಳನ್ನು ಒಂದರ ಪಕ್ಕ ಒಂದರಂತೆ ಲೇಯರಿಂಗ್ ಮಾಡಬಹುದು. ಇದು ನಿಮ್ಮ ಕಿವಿಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತೆ.

Image credits: Pinterest

Pearl Bangles: ಮುತ್ತಿನ ಬಳೆ ಧರಿಸಿದ್ರೆ ಕೈಗಳ ಅಂದ ಡಬಲ್; ಇಲ್ಲಿವೆ ಕಣ್ಮನ ಸೆಳೆಯುವ ಡಿಸೈನ್‌ಗಳು

Choker Designs: ಮನಸೆಳೆಯುವ ಚೋಕರ್ ಡಿಸೈನ್‌ಗಳು; ನೋಡಿದ್ರೆ ಫಿದಾ ಆಗ್ತೀರಾ!

Gold Locket: ಮಂಗಳಸೂತ್ರಕ್ಕೆ ಹೊಸ ಲುಕ್ ಕೊಡ್ಬೇಕಾ? ಈ 5 ಗೋಲ್ಡ್ ಲಾಕೆಟ್ ಡಿಸೈನ್ ನೋಡಿ!

Bangles: ರೇಷ್ಮೆ ಸೀರೆಗೆ ಗ್ಲಾಮರ್ ಟಚ್ ನೀಡುವ ಬೆಸ್ಟ್ ಬಳೆ ಸೆಟ್‌ ಡಿಸೈನ್ಸ್‌