ಶಿವರಾಜ್‌ಕುಮಾರ್

ಸೆಂಚುರಿ ಸ್ಟಾರ್, ಕಡಲತೀರದಲ್ಲಿ ಬೀಡು ಬಿಟ್ಟಿದ್ದಾರೆ. ಅರ್ಥಾತ್ ಮಂಗಳೂರಿನಲ್ಲಿ ‘ಆನಂದ್’ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಪಿ ವಾಸು ನಿರ್ದೇಶನದ ಈ ಚಿತ್ರದ ಶೂಟಿಂಗ್ ಕೆಲವು ವಾರಗಳಿಂದ ಮಂಗಳೂರಿನಲ್ಲಿ ನಡೆಯುತ್ತಿದೆ. ಹೀಗಾಗಿ ಶಿವಣ್ಣ ಮಂಗಳೂರಿನಲ್ಲಿದ್ದಾರೆ. 

ರುಸ್ತುಂ ರಗಡ್ ಕಾಪ್ ಶಿವರಾಜ್‌ಕುಮಾರ್ ಸಂದರ್ಶನ

ಪುನೀತ್ ರಾಜ್‌ಕುಮಾರ್

 ಚೆನ್ನೈನಿಂದ ದರ್ಶನ್ ವಾಪಸ್ಸು ಆಗುತ್ತಿದಂತೆಯೇ ಅಪ್ಪು ಅಲ್ಲಿಗೆ ಸೇರಿಕೊಂಡಿದ್ದಾರೆ. ಅಂದರೆ ಸಂತೋಷ್ ಆನಂದ್‌ರಾಮ್ ನಿರ್ದೇಶನದ ‘ಯುವರತ್ನ’ ಚಿತ್ರದ ಶೂಟಿಂಗ್ ಸದ್ಯಕ್ಕೆ ಚೆನ್ನೈನಲ್ಲಿ ನಡೆಯುತ್ತಿದೆ. ವಿದೇಶ ಪ್ರವಾಸ ಮುಗಿಸಿಕೊಂಡು ಬಂದಿರುವ ಅಪ್ಪು, ಸೀದಾ ಚೆನ್ನೈನಲ್ಲಿ ತಳವೂರಿದ್ದಾರೆ. ಈ ಮೂಲಕ ಸದ್ಯಕ್ಕೆ ಅವರು ಚೆನ್ನೈವಾಲ ಆಗಿದ್ದಾರೆ. 

'ಕಷ್ಟಗಾಲದಲ್ಲಿ ಬರೋದೇ ಫ್ರೆಂಡ್ಸ್' ಇದು ಕನ್ನಡದ ಕೋಟ್ಯಧಿಪತಿ!

ದರ್ಶನ್

ಚೆನ್ನೈನಿಂದ ವಾಪಾಸಾದ ದರ್ಶನ್ ಈಗ ಬೆಂಗಳೂರಿನಲ್ಲೇ ‘ರಾಬರ್ಟ್’ ಚಿತ್ರೀಕರಣದಲ್ಲಿ ಬ್ಯುಸಿ. ತರುಣ್ ಸುಧೀರ್ ನಿರ್ದೇಶಿಸಿ, ಉಮಾಪತಿ ನಿರ್ಮಾಣದ ಈ ಚಿತ್ರದ ಚಿತ್ರೀಕರಣ ಮುಗಿದ ಮೇಲೆ ಮುಂದೆ ಉತ್ತರ ಭಾರತದ ಕಡೆ ಮುಖ ಮಾಡಲಿದ್ದಾರೆ ದರ್ಶನ್. ಅಲ್ಲಿವರೆಗೂ ಬೆಂಗಳೂರಿನಲ್ಲೇ ವಾಸ್ತವ್ಯ.

‘ಅಮರ್’ ಚಿತ್ರದಲ್ಲಿ ದರ್ಶನ್ ಪಾತ್ರ ರಿವೀಲ್?

ಯಶ್

ಸದ್ಯಕ್ಕೆ ಯಶ್ ಮುಂದಿರುವುದು ‘ಕೆಜಿಎಫ್ 2’. ಇದರ ಚಿತ್ರೀಕರಣ ಮೂಡಿಗೆರೆ ಭಾಗದಲ್ಲಿ ನಡೆಯುತ್ತಿದ್ದು, ಅಲ್ಲಿ ಸೆಟ್ ಹಾಕಿದ್ದಾರೆ ಎನ್ನುವುದು ಮಾಹಿತಿ. ಸೋಮವಾರದಿಂದ ಇಲ್ಲಿನ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಸಲುವಾಗಿ ಯಶ್, ಬೆಂಗಳೂರು ಬಿಟ್ಟು ಮೂಡಿಗೆರೆಯತ್ತ ಪ್ರಯಾಣ ಬೆಳೆಸಲಿದ್ದಾರೆ ಎನ್ನುವುದು ಈಗಿನ ಮಾಹಿತಿ.

ಮಗಳಿಗೆ 6 ತಿಂಗಳು ತುಂಬಿದ ಸಂಭ್ರಮ ಶೇರ್ ಮಾಡಿಕೊಂಡ ರಾಧಿಕಾ

ಧ್ರುವ ಸರ್ಜಾ

ಇನ್ನೂ ಧ್ರುವ ಸರ್ಜಾ ಈಗ ಬೆಂಗಳೂರಿನಲ್ಲೇ ಇದ್ದಾರೆ. ಆದರೆ, ಜೂನ್ 10ರಿಂದ ಅವರು ಸಿಟಿಕಾನ್ ಸಿಟಿ ಬಿಡಲಿದ್ದಾರೆ. ಯಾಕೆಂದರೆ ಜೂನ್ 10 ರಿಂದ ‘ಪೊಗರು’ ಚಿತ್ರಕ್ಕೆ ಶೂಟಿಂಗ್ ನಡೆಯಲಿದೆ. ಮಂಗಳೂರು, ವೈಜಾಗ್ ಅಥವಾ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಧ್ರುವ ಸರ್ಜಾ ಸದ್ದು ಮಾಡಲಿದ್ದಾರೆ. 

ಧ್ರುವ ಸರ್ಜಾ ಆಗ್ತಾರಾ ನ್ಯಾಷನಲ್ ಸ್ಟಾರ್?

ಶರಣ್

ಸಿಂಪಲ್ ಸುನಿ ನಿರ್ದೇಶನದ ‘ಅವತಾರ ಪುರುಷ’ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯಗೊಂಡಿದೆ. ಇನ್ನು ಫೈಟ್‌ಗೆ ಶೂಟಿಂಗ್ ನಡೆಯಲಿದ್ದು, ರಗಡ್ ಸಾಹಸ ದೃಶ್ಯಗಳಿಗೆ ಶರಣ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದು ಬೆಂಗಳೂರಿನಲ್ಲೇ ನಡೆಯಲಿದ್ದು, ಇದರ ನಂತರ ಒಂದು ಹಾಡಿಗೆ ವಿದೇಶಕ್ಕೆ ಹೊರಡಲಿದ್ದಾರೆ. 

ಸುದೀಪ್ ’ಆಟೋಗ್ರಾಫ್’ ಮನೆಯಲ್ಲಿ ಶರಣ್ ಏನ್ಮಾಡ್ತಿದ್ದಾರೆ?

ರಕ್ಷಿತ್ ಶೆಟ್ಟಿ

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಹಗಲು ರಾತ್ರಿ ರಕ್ಷಿತ್ ಶೆಟ್ಟಿ ಶೂಟಿಂಗ್ ಮಾಡುತ್ತಿದ್ದಾರೆ. ಕಿರಣ್ ರಾಜ್ ನಿರ್ದೇಶನದ ‘777ಚಾರ್ಲಿ’ ಚಿತ್ರೀಕರಣ ನಡೆಯುತ್ತಿದೆ. ಈಗಷ್ಟೆ ‘ಅವನೇ ಶ್ರೀಮನ್ನಾರಾಯಣ’ ಶೂಟಿಂಗ್ ಮುಗಿಸಿ ಈಗ ‘777 ಚಾರ್ಲಿ’ ಸೆಟ್‌ನಲ್ಲಿ ಬ್ಯುಸಿಯಾಗಿದ್ದಾರೆ. 

ರಕ್ಷಿತ್ ಶೆಟ್ಟಿ ಹೈಬಜೆಟ್ ಚಿತ್ರಕ್ಕೆ 200 ದಿನ ಚಿತ್ರೀಕರಣ!

ಸುದೀಪ್

ಪ್ರಸ್ತುತ ಸುದೀಪ್ ಹೈದಾರಾಬಾದಿನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ‘ಕೋಟಿಗೊಬ್ಬ 3’ ಚಿತ್ರೀಕರಣದಲ್ಲಿದ್ದಾರೆ. ಜೂನ್ ೫ರಂದು ವಿಶ್ವಕಪ್ ಕ್ರಿಕೆಟ್ ನೋಡಲು ಲಂಡನ್ ತೆರಳಲಿದ್ದಾರೆ. ಅಲ್ಲಿಂದ ಬಂದು ಜೂನ್ 15ಕ್ಕೆ ಮತ್ತೆ ‘ಕೋಟಿಗೊಬ್ಬ 3’ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಗೃಹಿಣಿ ಪಾತ್ರ ಮೆಚ್ಚಿದ ಸುದೀಪ್?