- Home
- Entertainment
- Sandalwood
- ಮಗನಿಗೆ ನಾನೇ ಅಪ್ಪನೂ ಆಗ್ತೇನೆಂದು ಆಗ ಹೇಳಿಬಿಟ್ಟೆ, ಆದ್ರೆ ಆಗಿದ್ದೇ ಬೇರೆ: Meghana Raj ನೋವಿನ ನುಡಿ
ಮಗನಿಗೆ ನಾನೇ ಅಪ್ಪನೂ ಆಗ್ತೇನೆಂದು ಆಗ ಹೇಳಿಬಿಟ್ಟೆ, ಆದ್ರೆ ಆಗಿದ್ದೇ ಬೇರೆ: Meghana Raj ನೋವಿನ ನುಡಿ
ಪತಿ ಚಿರು ಸರ್ಜಾ ನಿಧನದ ನಂತರ ಐದೂವರೆ ವರ್ಷಗಳಿಂದ ಮಗ ರಾಯನ್‌ಗೆ ತಂದೆ-ತಾಯಿಯಾಗಿರುವ ನಟಿ ಮೇಘನಾ ರಾಜ್, ಇದೀಗ ತಮ್ಮ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಸಿಂಗಲ್ ಮದರ್ ಆಗಿ ಪಡುವ ಕಷ್ಟ ಹಾಗೂ ಮರುಮದುವೆಯ ಕುರಿತು ತಮ್ಮ ತಂದೆ ಸುಂದರ್ ರಾಜ್ ಅವರ ಅಭಿಪ್ರಾಯವನ್ನು ಸಹ ಹಂಚಿಕೊಂಡಿದ್ದಾರೆ.

ಮೇಘನಾ ರಾಜ್ ಮಾತು
ನಟಿ ಮೇಘನಾ ರಾಜ್ (Meghana Raj) ಅವರು ಪತಿ ಚಿರುವನ್ನು ಕಳೆದುಕೊಂಡ ಬಳಿಕ ಇನ್ನೊಂದು ಮದುವೆಯಾಗಬೇಕು ಎನ್ನುವುದು ಅವರ ಕುಟುಂಬದವರು ಹಾಗೂ ಅವರ ಅಸಂಖ್ಯ ಅಭಿಮಾನಿಗಳ ಆಶಯ ಕೂಡ.
ಆರು ವರ್ಷಗಳ ಒಂಟಿತನ
ಅಷ್ಟಕ್ಕೂ ಗರ್ಭಿಣಿ ಇರುವಾಗಲೇ ಮೇಘನಾ ಅವರು ಪತಿ ಚಿರುವನ್ನು ಕಳೆದುಕೊಂಡವರು. ಇಷ್ಟು ವರ್ಷಗಳವರೆಗೆ ಅಂದರೆ ಐದೂವರೆ ವರ್ಷಗಳ ಕಾಲ ಮಗ ರಾಯನ್‌ಗೆ ಅಮ್ಮ-ಅಪ್ಪ ಎರಡೂ ಆಗಿ ಪ್ರೀತಿ ಹಂಚುತ್ತಿದ್ದಾರೆ. ಸಂಸಾರ ನಿಭಾಯಿಸುತ್ತಿದ್ದಾರೆ.
ಇನ್ನೊಂದು ಮದುವೆ
ಆದರೆ, 35 ವರ್ಷದ ಮೇಘನಾ ಅವರು ಇನ್ನೊಂದು ಮದುವೆಯಾಗುವ ಬಗ್ಗೆ ಹಲವರು ಹೇಳುತ್ತಿರುವ ನಡುವೆಯೇ, rayanemithun ಷೋನಲ್ಲಿ ತಮ್ಮ ಬದುಕಿನ ಹಲವು ವಿಷಯಗಳನ್ನು ನಟಿ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಎರಡನೆಯ ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ.
ಸಿಂಗಲ್ ಮದರ್ ತುಂಬಾ ಕಷ್ಟ
ಪಬ್ಲಿಕ್ ಪರ್ಸನ್ಯಾಲಿಟಿ ಆಗಿದ್ದು, ಸಿಂಗಲ್ ಮದರ್ ಆಗುವುದು ತುಂಬಾ ಕಷ್ಟ ಎಂದಿದ್ದಾರೆ ಮೇಘನಾ. ಮಗುವಿನಿಂದ ತುಂಬಾ ಎಕ್ಸ್ಪೆಕ್ಟೇಷನ್ ಇರುತ್ತದೆ. ಅದರಲ್ಲಿಯೂ ನನಗೆ ಇರುವುದು ಗಂಡು ಮಗ. ಆದ್ದರಿಂದ ಮನೆಯಲ್ಲಿ ಗಂಡಸರು ಇರಲೇಬೇಕು ಎಂದು ಎನ್ನಿಸುತ್ತದೆ. ಆ ಸಮಯದಲ್ಲಿ ನಾನು ಆ ಪಾತ್ರವನ್ನೂ ಮಾಡಬಲ್ಲೆ ಎಂದುಕೊಂಡಿದ್ದೆ ಎಂದು ಆ ದಿನಗಳ ನಟಿ ನೆನೆದಿದ್ದಾರೆ.
ಅಪ್ಪನಾಗಲು ನೋಡಬೇಡ
ನಾನು ಅಮ್ಮನಾಗಿ ಮಾತ್ರವಲ್ಲದೇ ಅಪ್ಪನಾಗಿಯೂ ಕಾರ್ಯ ನಿಭಾಯಿಸಬಲ್ಲೆ ಎಂದು ಹೇಳಿಬಿಟ್ಟಿದ್ದೆ. ಆದರೆ ರಿಯಾಲಿಟಿಯಲ್ಲಿ ಪ್ರತಿನಿತ್ಯವೂ ನಾನು ಅಪ್ಪ ಆಗಲು ಸಾಧ್ಯವಾಗುವುದಿಲ್ಲ ಎನ್ನುವ ಸತ್ಯ ಗೊತ್ತಾಗಿದೆ. ನೀನು ಅಮ್ಮ, ಒಳ್ಳೆಯ ಅಮ್ಮನಾಗಲು ನೋಡು, ಅಪ್ಪನ ಸ್ಥಾನ ತುಂಬಲು ನೋಡಬೇಡ ಎಂದು ನನ್ನ ಕಸಿನ್ ಕೂಡ ಹೇಳಿದಳು ಎಂದು ಮೇಘನಾ ತಿಳಿಸಿದ್ದಾರೆ.
ಅಪ್ಪನಿಗೂ ಅದೇ ಆಸೆ
ಕೆಲ ದಿನಗಳ ಹಿಂದೆ ಅವರ ತಂದೆ, ಹಿರಿಯ ನಟ ಸುಂದರ ರಾಜ್ ಅವರು, ಮಗಳು ಮದುವೆಯ ಬಗ್ಗೆ ಮಾತನಾಡಿದ್ದರು. ಆಯ್ಕೆ ಅವರದ್ದು. ಬದುಕು ನಡೆಸುವವರು ಅವರದ್ದು. ಆದ್ದರಿಂದ ಆಕೆಯ ನಿರ್ಧಾರವೇ ನಮ್ಮ ನಿರ್ಧಾರ ಎಂದಿದ್ದಾರೆ. ಸಮಾಜಕ್ಕೆ ನಾವು ಮಾದರಿಯಾಗಿ ಬದುಕಬೇಕು. ಯಾರೂ ನಮ್ಮ ಬಗ್ಗೆ ತಪ್ಪಾಗಿ ಮಾತನಾಡಬಾರದು. ಇದರ ನಡುವೆಯೇ ಸುಂದರ ಬದುಕಿನ ಆಯ್ಕೆಯನ್ನೂ ಮಾಡಿಕೊಳ್ಳಬೇಕು ಎಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

